ಚಿಂಚೋಳಿಯಲ್ಲಿ 844 ವಠಾರ ಶಾಲೆ ಶುರು
ಶಾಲೆಗೆ ಪಠ್ಯ-ಪುಸ್ತಕ ಸರಬರಾಜು
Team Udayavani, Sep 9, 2020, 3:56 PM IST
ಚಿಂಚೋಳಿ: ಮಿರಿಯಾಣ ಗ್ರಾಮದ ದೇವಸ್ಥಾನವೊಂದರ ಮರದ ಕೆಳಗೆ ತೆರೆದ ವಠಾರ ಶಾಲೆಗೆ ಆಗಮಿಸಿರುವ ಮಕ್ಕಳು.
ಚಿಂಚೋಳಿ: ತಾಲೂಕಿನ ಶಿಕ್ಷಣ ಇಲಾಖೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 844 ವಠಾರ ಶಾಲೆಗಳು ಪ್ರಾರಂಭಿಸಿ, ಕೋವಿಡ್-19ಮಾರ್ಗಸೂಚಿ ಪ್ರಕಾರ ಸಾಮಾಜಿಕಅಂತರ, ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಕೊಂಡು ಮಕ್ಕಳಿಗೆ ಬೋಧನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ತಾಲೂಕು ಸಮನ್ವಯಾಧಿಕಾರಿ ರಾಚಪ್ಪ ಭದ್ರಶೆಟ್ಟಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಇರುವ 277 ಸರಕಾರಿಪ್ರಾಥಮಿಕ ಶಾಲೆಗಳ ಒಟ್ಟು 720 ವಠಾರ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 33 ಸರಕಾರಿ ಪ್ರೌಢಶಾಲೆಗಳ ಒಟ್ಟು 124 ವಠಾರ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಕಲಿಕೆ ಮತ್ತು ಬೋಧನೆ ಮಾಡಲಾಗುತ್ತಿದೆ. ನಿರಂತರ ಕಲಿಕೆ ಹಾಗೂ ಮಕ್ಕಳಲ್ಲಿರುವ ಸಾಮರ್ಥ್ಯ ಆಧಾರಿತವಾಗಿ ಕಲಿಕಾ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಾಲ್ಪನಿಕ ಶಾಲೆ ಆನ್‌ಲೈನ್ ಮೂಲಕ 63 ಸಹಶಿಕ್ಷಕರು ಬೋಧಿಸುವಲ್ಲಿ ತೊಡಗಿದ್ದಾರೆ
ಮತ್ತು 9 ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್ ಮೂಲಕ ಮಕ್ಕಳಿಗೆಕಲಿಕೆಯಲ್ಲಿ ತೊಡಗಿದ್ದಾರೆ. ಪ್ರಾಥಮಿಕ ಶಾಲೆಗಳ ವಠಾರ ಶಾಲೆಗಳಲ್ಲಿ ಒಟ್ಟು 13,268 ಮಕ್ಕಳು ಹಾಗೂ 2014ಪ್ರೌಢಶಾಲೆ ಮಕ್ಕಳಿಗೆ ವಠಾರ ಮೂಲಕ ಕಲಿಕೆಯನ್ನು ತಿಳಿಸಲಾಗುತ್ತಿದೆ. ಆನ್‌ಲೈನ್ ಮೂಲಕ ಪ್ರೌಢಶಾಲೆಯ ಒಟ್ಟು 874 ವಿದ್ಯಾರ್ಥಿಗಳು ಹಾಗೂ 394 ಪ್ರಾಥಮಿಕ ಶಾಲೆ ಮಕ್ಕಳು ನಿತ್ಯ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:30ರ ವರೆಗೆ ಹಾಗೂ 2:30ರಿಂದ 4:30 ವರೆಗೆ ಕಲಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2020-21ನೇಸಾಲಿನ ಪಠ್ಯ-ಪುಸ್ತಕಗಳನ್ನುಸರಬರಾಜು ಮಾಡಲಾಗಿದೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗಿದೆ ಎಂದು ಹೇಳಿದರು.
ಮಲ್ಲಾಬಾದ ಖಾಸಗಿ ಶಾಲೆಯಲ್ಲೂ ಆರಂಭ :
ಅಫಜಲಪುರ: ಲಾಕ್‌ಡೌನ್‌ನಿಂದಾಗಿ ಶಾಲೆಗಳು ಬಂದ್ ಮಾಡಲಾಗಿತ್ತು. ಅನ್ ಲಾಕ್ ಘೋಷಣೆ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವಠಾರ ಶಾಲೆಗಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಹಾಗೆಯೇ ಖಾಸಗಿ ಅನುದಾನ ರಹಿತ ಶಾಲೆಗಳಲ್ಲೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆತೊಂದರೆ ಆಗಬಾರದೆಂದು ವಠಾರ ಶಾಲೆಗಳನ್ನು ತೆರೆದು ಕಲಿಕೆ ಆರಂಭಿಸಿದ್ದೇವೆ ಎಂದು ಮುಖ್ಯಗುರು ನಿಂಗಣ್ಣ ಪೂಜಾರಿ ಹೇಳಿದರು.
ತಾಲೂಕಿನ ಮಲ್ಲಾಬಾದ ಗ್ರಾಮದ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ವಠಾರ ಶಾಲೆ ಆರಂಭಗೊಂಡ ಕುರಿತು ಮಾತನಾಡಿದ ಅವರು, ಸರ್ಕಾರಿ ಶಾಲೆಗಳುಹಾಗೂ ಅನುದಾನಿತ ಶಾಲೆಗಳಲ್ಲಿ ವಠಾರ ಶಾಲೆ ಆರಂಭಿಸಿ ಪಾಠ ಬೋಧನೆ ಮಾಡಲಾಗುತ್ತಿದೆ. ಆದರೆ ಅನುದಾನ ರಹಿತ ಶಾಲೆಗಳ ಮಕ್ಕಳು ಪಾಠದಿಂದಇನ್ನೂ ದೂರ ಉಳಿದಿದ್ದಾರೆ. ಹೀಗಾಗಿ ನಮ್ಮ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ಗಂಭೀರ ಚಿಂತನೆ ಮಾಡಿ ಅನುದಾನ ರಹಿತ ಶಾಲೆಯಾದರೂ ಸರಿ ಪಾಠ ಬೋಧನೆ ಆರಂಭಿಸಿ. ಸರ್ಕಾರ, ಇಲಾಖೆಯಿಂದ ಏನು ಸಲಹೆ,ಸಹಕಾರ ಸಿಗುತ್ತದೋ ಆಮೇಲೆ ನೋಡೋಣ. ಮೊದಲು ಮಕ್ಕಳ ಕಲಿಕೆ ಶುರುವಾಗಲಿ ಎಂದು ಸಲಹೆ ನೀಡಿದ್ದರಿಂದ ನಾವು ವಠಾರ ಶಾಲೆ ಆರಂಭಿಸಿದ್ದೇವೆ ಎಂದರು. ಶಿಕ್ಷಕರಾದ ಗುರು ಮಗಿ, ಶಿವಸಂಗಪ್ಪ ಬಬಲೇಶ್ವರ, ಯಲ್ಲಾಲಿಂಗ ಮೈಲಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.