ರಾಜಸ್ಥಾನಿ ನಳರಿಂದ ಸಿಹಿಖಾದ್ಯ
Team Udayavani, Feb 8, 2020, 5:14 AM IST
ಜಿಲೇಬಿ ತಯಾರಿಕೆಯಲ್ಲಿ ತೊಡಗಿರುವ ರಾಜಸ್ಥಾನಿಗಳು.
ಕಲಬುರಗಿ: ಕನ್ನಡಿಗರೊಂದಿಗೆ ಅನ್ಯಭಾಷಿಕರೂ ಕಟ್ಟಿದ ಸಮ್ಮೇಳನ ಇದಾಗಿತ್ತು. ನುಡಿಜಾತ್ರೆಯಲ್ಲಿ ಕನ್ನಡಿಗರ ಬಾಯಿ ಸಿಹಿಮಾಡಿದವರು, ರಾಜಸ್ಥಾನಿ ಮೂಲದ ಬಾಣಸಿಗರು. ಸಿಹಿಖಾದ್ಯ ತಯಾರಿಯ ಉಸ್ತುವಾರಿ ಹೊತ್ತು, ಮೂರು ದಿನ, ಬಗೆಬಗೆಯ ಸಿಹಿತಿನಿಸು ತಯಾರಿಸಿದ್ದರು.
ಬೇರೆಲ್ಲ ಖಾದ್ಯ ತಯಾರಿಕೆಗಿಂತ ಸಿಹಿಖಾದ್ಯ ತಯಾರಿಸುವುದು ಒಂದು ಸವಾಲು. ಸ್ವಲ್ಪ ಅಳತೆ ತಪ್ಪಿದರೂ, ಅದು ಹಳ್ಳ ಹಿಡಿದಂತೆ. ಆದರೆ, ಸಮ್ಮೇಳನದಲ್ಲಿ ಯಾವ ಸಿಹಿಯೂ ಹದಗೆಟ್ಟಿರಲಿಲ್ಲ. ಈ ರಾಜಸ್ಥಾನಿ ಬಾಣಸಿಗರು ಉದ್ಯೋಗ ಅರಸಿಕೊಂಡು, ಎಂಟ್ಟತ್ತು ವರ್ಷಗಳ ಹಿಂದೆಯೇ
ಕರ್ನಾಟಕಕ್ಕೆ ಬಂದವರಂತೆ. ತಮ್ಮ ಕೆಲಸದ ನಡುವೆ ಕನ್ನಡವನ್ನೇ ಆಡುತ್ತಾ, ಮಾದರಿಯಾಗಿದ್ದರು. ಮೈಸೂರು ಪಾಕ, ಬೇಸನ್ ಲಾಡು, ಬೂಂದಿ, ಹೆಸರುಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಹುಗ್ಗಿ ಸೇರಿದಂತೆ 8 ಖಾದ್ಯಗಳು ಕನ್ನಡಿಗರ ಹೃದಯ ಗೆದ್ದವು. ಒಟ್ಟು 30 ಸಿಬ್ಬಂದಿ ಕಳೆದ ಮೂರು ದಿನಗಳಿಂದ ಈ ಸಿಹಿಖಾದ್ಯ ತಯಾರಿಕೆಯಲ್ಲಿ ತೊಡಗಿದ್ದರು. ದಿನಕ್ಕೆ 5 ಲಕ್ಷ ಜನರಿಗೆ ಸಿಹಿ ತಯಾರಿಸುವಷ್ಟು ಸಾಮರ್ಥ್ಯ ಹೊಂದಿದ್ದೇವೆ. ಕರ್ನಾಟಕದಲ್ಲಿ ಹಲವು ದೊಡ್ಡ ಕಾರ್ಯಕ್ರಮಗಳಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ್ದೇವೆ ಎನ್ನುತ್ತಾರೆ ಸಿಹಿ ಖಾದ್ಯ ಪರಿಣತ ಜಬ್ಬರ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.