Kalaburagi ದನಗಾಹಿಗಳಿಗೆ ಮಾಸಿಕ 90 ಸಾವಿರ ರೂ. ಪಗಾರ !
ಕಲಬುರಗಿ ಜಿಲ್ಲೆಯ ಗ್ರಾಮದಲ್ಲಿ ಯುವಕರ ತಂಡದಿಂದ ಭರ್ಜರಿ ಸಂಪಾದನೆ
Team Udayavani, Dec 24, 2023, 7:30 AM IST
ವಾಡಿ: “ದನ ಕಾಯುವುದಕ್ಕೂ ಯೋಗ್ಯತೆ ಇಲ್ಲದವನು’ ಎಂಬ ನಿಂದನೆಯನ್ನೇ ಮೂಲೆಗೆ ತಳ್ಳುವಂತಹ ಸುದ್ದಿ ಇದು. ಕೈತುಂಬ ಪಗಾರ ಎಣಿಸುವ ಸಾಫ್ಟ್ವೇರ್ ಎಂಜಿನಿ ಯರಿಂಗ್, ಬ್ಯಾಂಕಿಂಗ್ ಮತ್ತಿತರ ವಿವಿಧ ಕ್ಷೇತ್ರ ಗಳಂತೆಯೇ ದನಗಾಹಿಗಳು ಕೂಡ ಇಲ್ಲಿ ತಿಂಗಳಿಗೆ 90 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ!
ಇಂಥ ಸಾಹಸಗಾಥೆಗೆ ಸಾಕ್ಷಿಯಾಗಿರುವುದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಹಿಂದೆ ವ್ಯವಸಾಯವೇ ಮೂಲ ಕಸುಬಾಗಿತ್ತು. ಈಗ ಸಿಮೆಂಟ್ ಕಾರ್ಖಾನೆ ಪ್ರಾರಂಭವಾಗಿದ್ದು, ಅದಕ್ಕಾಗಿ ಗ್ರಾಮಸ್ಥರು ತಮ್ಮ ಜಮೀನು ನೀಡಿ ತಾವು ಇತರ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ಹಸು ಸಾಕಾಣಿಕೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತೀ ಮನೆಯಲ್ಲೂ ದನಕರುಗಳಿದ್ದು, ಗ್ರಾಮದಲ್ಲಿ ಸುಮಾರು 2 ಸಾವಿರ ರಾಸುಗಳಿವೆ.
ಐದಾರು ಯುವಕರ ತಂಡ
ಕೆಲಸಕ್ಕೆ ತೆರಳುವ ಬಹುತೇಕ ಗ್ರಾಮಸ್ಥರಿಗೆ ಹಸುಕರು ಮೇಯಿಸಲು ಆಗುವುದಿಲ್ಲ. ಹೀಗಾಗಿ ಇದೇ ಗ್ರಾಮದ ಐದಾರು ಯುವಕರು ಸೇರಿ ಒಂದು ತಂಡ ಕಟ್ಟಿಕೊಂಡಿದ್ದಾರೆ. ಇಡೀ ಗ್ರಾಮದ ಎಲ್ಲ ಜಾನುವಾರುಗಳನ್ನು ಇದೇ ಐದಾರು ಮಂದಿ ಊರಾಚೆಗಿನ ಅಡವಿಗೆ ಮೇಯಿಸಲು ಕರೆದೊಯ್ಯುತ್ತಾರೆ.
ಮೇಯಿಸುವುದಕ್ಕಾಗಿ ರಾಸುಗಳನ್ನು 3-4 ಗುಂಪುಗಳಾಗಿ ಹಂಚಿಕೊಂಡಿರುವ ಯುವಕರು ಪ್ರತೀ ಹಸುವಿಗೆ ಮಾಸಿಕ 450 ರೂ. ನಿಗದಿ ಮಾಡಿದ್ದಾರೆ. ಒಬ್ಬ ಯುವಕ ಸುಮಾರು 200 ಹಸುಗಳನ್ನು ಮೇಯಿಸುತ್ತಾನೆ. ಹೀಗಾಗಿ ತಂಡದ ಪ್ರತಿಯೊಬ್ಬ ಯುವಕ ಮಾಸಿಕ ಸುಮಾರು 90 ಸಾವಿರ ರೂ. ಆದಾಯ ಗಳಿಸುತ್ತಿದ್ದಾನೆ.
ಡೈರಿ ಹಾಲಿಗೆ ಗ್ರಾಮಸ್ಥರ ವಿದಾಯ
ಇಂಗಳಗಿ ಗ್ರಾಮಸ್ಥರು ಡೈರಿ ಹಾಲನ್ನು ಬಹಿಷ್ಕರಿಸಿದ್ದಾರೆ. ಪ್ರತೀ ಮನೆಯಲ್ಲೂ ಹಸು ಇರುವುದರಿಂದ ತಮ್ಮ ಮನೆ ಬಳಕೆಗೆ ಅದೇ ಹಸುವಿನ ಹಾಲನ್ನೇ ಬಳಸುತ್ತಾರೆ. ಯಾವುದೇ ಕಾರಣಕ್ಕೂ ಡೈರಿ ಹಾಲನ್ನು ಉಪಯೋಗಿಸುವುದಿಲ್ಲ. ಇದನ್ನು ಹಳ್ಳಿಯ ಎಲ್ಲ ಜನರೂ ಪಾಲಿಸುತ್ತಾರೆ. ಪರಸ್ಪರ ಸಹಕಾರ ಮನೋಭಾವದಿಂದ ಬದುಕು ಸಾಗಿಸುತ್ತಿದ್ದಾರೆ.
-ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.