ನುಗ್ಗೆ ಬೆಳೆದ ರೈತನಿಗೆ ಆದಾಯ ಖಾತ್ರಿ

Team Udayavani, Jun 17, 2021, 5:15 PM IST

rtytrertytrertytre

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ನೆರವಿನಲ್ಲಿ ನುಗ್ಗೆ ಬೇಸಾಯ ಮಾಡಿದ ಜಿಲ್ಲೆಯ ರೈತನಿಗೆ “ಆದಾಯ’ದ ಖಾತ್ರಿಯೂ ಸಿಕ್ಕಿದೆ. ನುಗ್ಗೆಕಾಯಿ ಮಾರಾಟದ ಲಾಭ ಮಾತ್ರವಲ್ಲದೇ, ಅದರ ಬೀಜಗಳಿಂದಲೂ ಆದಾಯ ಗಳಿಸುತ್ತಿದ್ದಾರೆ.

ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ನಾಗಣ್ಣ ಮಾತಾರಿ ಎನ್ನುವ ರೈತ ನುಗ್ಗೆ ಬೆಳೆದು ಬಂಪರ್‌ ಆದಾಯ ಪಡೆಯುತ್ತಿದ್ದಾರೆ. ಮೂರು ಎಕರೆ ಹೊಲ ಹೊಂದಿರುವ ಇವರು ಕಳೆದ ಬಾರಿ ಒಂದು ಎಕರೆಯಲ್ಲಿ ನುಗ್ಗೆ ಬೇಸಾಯ ಮಾಡಿದ್ದರು. ಮೊದಲ ಸಲವೇ ಲಾಭ ಬಂದ ಕಾರಣ ಈಗ ಎರಡು ಎಕರೆಯಲ್ಲಿ ನುಗ್ಗೆ ಬೆಳೆಯಲು ಶುರು ಮಾಡಿದ್ದಾರೆ. ಬೇರೆ ಬೆಳೆಗಿಂತ ನುಗ್ಗೆಕಾಯಿ ಆದಾಯ ಸರಳವಾಗಿ ಬರುತ್ತದೆ ಎನ್ನುವುದನ್ನು ಮನಗಂಡಿದ್ದಾರೆ.

ನುಗ್ಗೆ ಜನರಿಗೆ ಅತ್ಯಂತ ಪ್ರಿಯವಾದ ತರಕಾರಿ. ಮರುಕಟ್ಟೆ ಯಲ್ಲಿ ಸದಾ ಬೇಡಿಕೆ ಇದ್ದೇ ಇರುತ್ತದೆ. ಕೇವಲ ಒಂದು ಭಾಗ, ಪ್ರದೇಶಕ್ಕೆ ಸಿಮೀತವಾಗದ ನುಗ್ಗೆ ಎಲ್ಲೆಡೆ ಯೂ ತನ್ನ ಪ್ರಭಾವ ಉಳಿಸಿಕೊಂಡಿದೆ. ರೈತ ನಾಗಣ್ಣ ಬೆಳೆದ ನುಗ್ಗೆಯನ್ನು ಹೈದರಾಬಾದ್‌ಗೆ ಸಾಗಿಸಿ, ಮಾರಾಟ ಮಾಡುತ್ತಿದ್ದಾರೆ. ಕಡಿಮೆ ನುಗ್ಗೆಕಾಯಿ ಇದ್ದಾಗ ಮಾತ್ರ ಸ್ಥಳೀಯವಾಗಿ ಮಾರುತ್ತಾರೆ. ಎಲ್ಲೇ ಮಾರಾಟ ಮಾಡಿದರೂ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ರೈತ ನಾಗಣ್ಣ, ಪುತ್ರ ಶರಣು ಹಾಗೂ ಕುಟುಂಬದವರು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ಎಕರೆ ಫಸಲಿಗೆ ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದರು. ಕಳೆದ ವರ್ಷ ಎರಡು ಎಕರೆಯಲ್ಲಿ ಬೆಳೆದು ಎರಡೂವರೆ ಲಕ್ಷ ರೂ. ಆದಾಯ ಪಡೆದಿದ್ದಾರೆ.

ಆರೇಳು ತಿಂಗಳಲ್ಲಿ ಇಳುವರಿ: ನುಗ್ಗೆಯೂ ಬೇಸಾಯ ಆರೇಳು ತಿಂಗಳಲ್ಲೇ ಫಸಲು ಕೊಡುತ್ತದೆ. ಬೀಜ ಅಥವಾ ಸಸಿ ನಾಟಿದ ಮೇಲೆ ಕೆಲ ತಿಂಗಳಲ್ಲೇ ಕಾಯಿ ಬಿಡಲು ಶುರು ಮಾಡುತ್ತದೆ. ನಂತರ ಒಂದು ತಿಂಗಳ ಪೂರ್ತಿ ಕಟಾವು ಮಾಡಬಹುದು. ಅಲ್ಲಿಂದ ಎಲ್ಲವೂ ಲಾಭವೇ ಎನ್ನುತ್ತಾರೆ ರೈತ ನಾಗಣ್ಣನ ಮಗ ಶರಣು. ಕಳೆದ ವರ್ಷದಿಂದ ಮನರೇಗಾ ಯೋಜನೆಯಡಿ ನುಗ್ಗೆ ಕೃಷಿ ಮಾಡುತ್ತಿದ್ದೇವೆ. ಪ್ರಾಯೋಗಿಕ ಎಂಬಂತೆ ಒಂದು ಎಕರೆಯಲ್ಲಿ ನುಗ್ಗೆ ಬೀಜ ಬಿತ್ತನೆ ಮಾಡಿದ್ದೇವು. ಮೊದಲ ಯತ್ನದಲ್ಲೇ ಉತ್ತಮ ಫಸಲು ಬಂತು. ಈ ವರ್ಷ ಒಂದರಿಂದ ಎರಡು ಎಕರೆಗೆ ನುಗ್ಗೆ ಕೃಷಿ ವಿಸ್ತರಿಸಿದ್ದೇವೆ.

ಈಗಾಗಲೇ ಎರಡೇ ಫಸಲು ಬಂದು ಮಾರಾಟವನ್ನು ಮಾಡಲಾಗಿದೆ. ಎರಡು ವರ್ಷದಲ್ಲಿ ಒಟ್ಟಾರೆ ನಾಲ್ಕು ಲಕ್ಷ ರೂ.ಗಳಷ್ಟು ಆದಾಯ ಬಂದಿದೆ ಎಂದು ಹೇಳಿದರು. ನುಗ್ಗೆ ಗಿಡದಿಂದ ಗಿಡಕ್ಕೆ ಮೂರು ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಲ್ಲಿ ಬೆಳೆಸಲಾಗಿದೆ. ನುಗ್ಗೆ ಬೆಳೆ ನಿರ್ವಹಣೆ ಸುಲಭ ಮತ್ತು ಖರ್ಚು ಕೂಡ ಕಡಿಮೆ. ಉತ್ತಮ ಇಳುವರಿ ಬಂದ ಕಾರಣ ಚೀಲ ಗಟ್ಟಲೇ ಹೈದರಾಬಾದ್‌ಗೆ ಹೋಗಿ ಮಾರಾಟ ಮಾಡಲಾಗಿದೆ. ಒಂದು ಕೆಜಿ ನುಗ್ಗೆ ಕಾಯಿ ಗರಿಷ್ಠ 100 ರೂ. ವರೆಗೂ ಮಾರಾಟವಾಗಿದೆ. ಕೆಲವೊಮ್ಮೆ 40ರೂ. ಕ್ಕಿಂತ ಕಡಿಮೆ ಮಾರಲಾಗಿದೆ. ಆದರೆ, ನುಗ್ಗೆಯಿಂದ ನಷ್ಟ ಅನುಭವಿಸಿಲ್ಲ ಎನ್ನುತ್ತಾರೆ ಅವರು. ನುಗ್ಗೆ ಬೀಜಕ್ಕೂ ಬೇಡಿಕೆ: ನುಗ್ಗೆ ಕಾಯಿಯಂತೆ ನುಗ್ಗೆ ಬೀಜಕ್ಕೂ ಬೇಡಿಕೆ ಇದೆ.

ಹೀಗಾಗಿ ಬೀಜ ಮಾರಾಟದಿಂದಲೂ ಇವರು ಆದಾಯ ಗಳಿಸುತ್ತಿದ್ದಾರೆ. ಪ್ರತಿ ಒಂದು ಕೆಜಿ ಬೀಜ ಎರಡು ಸಾವಿರ ರೂ. ಆದಾಯ ತಂದು ಕೊಡುತ್ತಿದೆ. ನುಗ್ಗೆ ಬೆಳೆಗೆ ಹೆಚ್ಚಾಗಿ ಸಾವಯವ ಗೊಬ್ಬರವನ್ನೇ ಬಳಸುತ್ತೇವೆ. ಇದರಿಂದ ಇರುವಳಿ ಹೆಚ್ಚಾಗಿ ಬರುತ್ತದೆ. ಹೀಗಾಗಿ ಬೀಜ ಸಂರಕ್ಷಣೆ ಮಾಡಿ ಮಾರಾಟ ಮಾಡಲಾಗುತ್ತದೆ. ನಮ್ಮ ಹೊಲದ ಬೆಳೆಯನ್ನು ಸುತ್ತ-ಮುತ್ತಲಿನ ರೈತರಿಂದಲೇ ಬೀಜಕ್ಕೆ ಬಂದಿದೆ. ಒಂದು ಕೆಜಿಗೆ ಎರಡು ಸಾವಿರ ರೂ.ನಂತೆ ಐದು ಕೆಜಿ ಬೀಜ ಮಾರಲಾಗಿದೆ. ಇನ್ನು ಐದು ಕೆಜಿಯಷ್ಟು ಬೀಜಗಳು ಇವೆ ಎಂದು ರೈತ ವಿವರಿಸಿದರು.

ಟಾಪ್ ನ್ಯೂಸ್

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.