ರಾಜಕೀಯ ಶಕ್ತಿಯಾಗಿದ್ದ ಕತ್ತಿ: ಪವಾರ
Team Udayavani, Sep 8, 2022, 2:51 PM IST
ವಾಡಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ಅಗಲಿಕೆಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸ್ಥಳೀಯ ಭಾಜಪ ಮುಖಂಡರು, ಉಮೇಶ ಕತ್ತಿ ಅವರ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.
ಈ ವೇಳೆ ಮಾತನಾಡಿದ ಬಿಜೆಪಿ ನಗರ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ಜನಪರ ರಾಜಕಾರಣಿಯಾಗಿದ್ದ ಸಚಿವ ಉಮೇಶ ಕತ್ತಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದರು. ಸತತ ಎಂಟು ಬಾರಿ ವಿಧಾಸಭೆಗೆ ಆಯ್ಕೆಯಾಗುವ ಮೂಲಕ ತಾವೊಬ್ಬ ಜನಪರ ಚಿಂತಕ ಎಂಬುದು ಸಾಬೀತು ಪಡಿಸಿದ್ದರು. ರಾಜ್ಯ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸುವ ಮೂಲಕ ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಜನಮನ್ನಣೆ ಗಳಿಸಿದ್ದರು. ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದ ಕತ್ತಿಯವರಿಗೆ ಪಕ್ಷ ಗೌರವದಿಂದ ಕಂಡಿತ್ತು. ವಿಧಿ ಯಾಟ ನಮ್ಮನ್ನೆಲ್ಲ ಅವರಿಂದ ಅಗಲಿಸಿತು ಎಂದರು.
ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ಗಿರಿಮಲ್ಲಪ್ಪ ಕಟ್ಟಿಮನಿ, ವೀರಣ್ಣ ಯಾರಿ, ಮುಖಂಡರಾದ ವಿಠ್ಠಲ ನಾಯಕ, ಅರ್ಜುನ ಕಾಳೇಕರ, ರವಿ ನಾಯಕ, ಹರಿ ಗಲಾಂಡೆ, ಅಂಬಾದಾಸ ಜಾಧವ, ದೌಲತರಾವ್ ಚಿತ್ತಾಪುರಕರ, ಸತೀಶ ಸಾವಳಗಿ, ಶಿವಶಂಕರ ಕಾಶೆಟ್ಟಿ, ರಾಜು ಕೋಲಿ, ಅರ್ಜುನ ದಹಿಹಂಡೆ, ಅಶೋಕ ತೇಲಕರ್, ಗಣಪತರಾವ್ ಸುತ್ರಾವೆ, ಹೀರಾ ನಾಯಕ, ಮಲ್ಲಿಕಾರ್ಜುನ ರೆಡ್ಡಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.