ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ. ವಣಿಕ್ಯಾಳ ಎಸಿಬಿ ಬಲೆಗೆ
Team Udayavani, Jun 1, 2022, 10:34 PM IST
ಕಲಬುರಗಿ: 7.50 ಲಕ್ಷ ರೂ ಬಿಲ್ ಪಾವತಿ ಮಾಡಲು ಲಂಚ ಪಡೆಯುತ್ತಿದ್ದ ಪಾಲಿಕೆ ಆಯುಕ್ತ ಡಾ.ಶಂಕ್ರಣ್ಣ ವಣಿಕ್ಯಾಳ ಹಾಗೂ ಪಾಲಿಕೆ ಲೆಕ್ಕಾಧಿಕಾರಿ ಚನ್ನಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚದ ಹಣದ ಸಮೇತ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಣಿಕ್ಯಾಳ ಈಚೆಗಷ್ಟೇ ಪಾಲಿಕೆ ಆಯುಕ್ತರಾಗಿದ್ದು, ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ.
7.50 ಲಕ್ಷ ಬಿಲ್ ಮಂಜೂರು ಮಾಡಲು ಹಣಕ್ಕೆ ಬೇಡಿಕೆ ಇಟ್ಟ ಪಾಲಿಕೆ ಅಧಿಕಾರಿಗಳು. ಶೇಕಡಾ ಎರಡರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು. ಕೋವಿಡ್ ಸುರಕ್ಷಾ ಚಕ್ರ ಹೆಲ್ಪಲೈನ್‌ನ ಮಾಲೀಕ ಶರಣು ಐಟಿ ಅವರಿಗೆ ಹಣದ ಬೇಡಿಕೆ ಇಟ್ಟು ಹಣ ಪಡೆದ ಮೇರೆಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶರಣು ಕೋವಿಡ್ ಎರಡನೇ ಅಲೆಯಲ್ಲಿ ಹೆಲ್ಪ್‌ಲೈನ್ ಪ್ರಾರಂಭಿಸಲಾಗಿತ್ತು. ಐವತ್ತೂ ಲಕ್ಷಕ್ಕೂ ಹೆಚ್ಚಿನ ಬಿಲ್ ಪಾವತಿ ಬಾಕಿ ಉಳಿದಿತ್ತು. ಈ ಪೈಕಿ ಎರಡನೇ ಕಂತಿನ ಹಣ ಬಿಡುಗಡೆಗೆ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ : ತಂದೆಯ ಸಾವಿನ ದುಃಖದ ನಡುವೆಯೂ ಬಿಎ ಪರೀಕ್ಷೆ ಬರೆದ ವಿದ್ಯಾರ್ಥಿನಿ
ಪಾಲಿಕೆ ಲೆಕ್ಕಾಧಿಕಾರಿ ಚನ್ನಪ್ಪ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪಾಲಿಕೆ ಆಯುಕ್ತ ಶಂಕರಣ್ಣ ವಣಿಕ್ಯಾಳ್ ಅವರಿಗೆ ಹಣ ನೀಡಬೇಕು ಅಂತ ಚನ್ನಪ್ಪ ಹೇಳಿದ್ದರು. ಈ ಬಗ್ಗೆ ಎಸಿಬಿಗೆ ಕೋವಿಡ್ ಸುರಕ್ಷ ಚಕ್ರ ಹೆಲ್ಪ್‌ಲೈನ್ ಗುತ್ತಿಗೆ ಪಡೆದಿದ್ದ ಶರಣು ದೂರು ನೀಡಿದ್ದರು. ಬುಧವಾರ ಸಂಜೆ ಹಣ ಪಡೆಯುವಾಗ ಲೆಕ್ಕಾಧಿಕಾರಿ ಚೆನ್ನಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಬ್ಬರೂ ಅಧಿಕಾರಿಗಳನ್ನು ನ್ಯಾಯಾಂಗ ಬಂಧಿನಕ್ಕೊಪ್ಪಿಸಲಾಗಿದೆ. 14500 ರೂಪಾಯಿ ಲಂಚ ಪಡೆದಿದ್ದ ಲೆಕ್ಕಾಧಿಕಾರಿ ಚೆನ್ನಪ್ಪ ಶರಣು ಅವರಿಂದ ಹಣ ಪಡೆದಿದ್ದರು. ಶರಣು ಹಣ ನೀಡಿರೋ ಬಗ್ಗೆ ಪಾಲಿಕೆ ಆಯುಕ್ತ ಶಂಕರಣ್ಣ ವಣಿಕ್ಯಾಳರಿಗೆ ಮಾಹಿತಿ ಚೆನ್ನಪ್ಪ ಮಾಹಿತಿ ನೀಡಿದ್ದರು.
ಆಗ ಮನೆಗೆ ಹಣ ತಗೆದುಕೊಂಡು ಬಂದು ಕೊಡುವಂತೆ ವಣಿಕ್ಯಾಳ ಹೇಳಿದ್ದರು. ಚೆನ್ನಪ್ಪನನ್ನು ಟ್ರ್ಯಾಪ್ ಮಾಡಿದಾಗ ಒಂದು ಲಕ್ಷ ನಲವತ್ತೆರಡು ಸಾವಿರ ರೂಪಾಯಿ ಕೂಡಾ ಪತ್ತೆಯಾಗಿದೆ.
ಕಳೆದ ಎರಡು ದಿನಗಳಿಂದ ಸಂಗ್ರಹಿಸಿದ್ದ ಲಂಚದ ಹಣ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.