ಸಾರಿಗೆ ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಿ
Team Udayavani, Jan 9, 2018, 10:39 AM IST
ಕಲಬುರಗಿ: ರಾಜ್ಯದಲ್ಲಿ ಸಾರಿಗೆ ನೌಕರರಿಗೆ ವಸತಿ ಸೌಕರ್ಯ ದಯನೀಯ ಸ್ಥಿತಿಯಲ್ಲಿ ಇದೆ. ಬೆಂಗಳೂರು ಒಂದರಲ್ಲಿಯೇ 50 ಸಾವಿರ ನೌಕರರಿಗೆ ಸೂರಿಲ್ಲ. ಆದ್ದರಿಂದ ಕೂಡಲೇ ಸರಕಾರ ರಾಜ್ಯದಲ್ಲಿನ ಸಾರಿಗೆ ನೌಕರರಿಗೆ ಸುಸಜ್ಜಿತ ವಸತಿ ಕಲ್ಪಿಸಲು ಮುಂದಾಗಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕ್‌ರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ನಡೆದ ಈಶಾನ್ಯ ಸಾರಿಗೆ ನಿಗಮದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರವೇನೋ ಮೂರು ಸಾವಿರ ವಸತಿ ನಿಲಯಗಳನ್ನು ನಿರ್ಮಿಸಲು ನಿರ್ಧಾರ ಕೈಗೊಂಡಿದೆ. ನೌಕರರ ವೇತನದಲ್ಲಿ ಹಿಡಿದಿರುವ ಜೀವ ವಿಮಾ ಪ್ರೀಮಿಯಂ ಹಣ, ಸಹಕಾರಿ ಸಂಘಗಳಿಗೆ ಕೊಡಬೇಕಾಗಿರುವ ಹಣ, ಡಿಆರ್‌ಬಿಎಫ್ ವಂತಿಕೆಗಳನ್ನು ನಿಗಮಗಳು ಸಂಬಂಧಪಟ್ಟ ಸಂಸ್ಥೆಗಳಿಗೆ ಸಕಾಲಕ್ಕೆ ಕಟ್ಟಿಲ್ಲದ ಕಾರಣ ಪಾಲಿಸಿ ಲ್ಯಾಪ್ಸ್ ಆಗಿದೆ. ಬಡ್ಡಿ ಸಮೇತ ಪ್ರೀಮಿಯಂ ಹಣ ಕಟ್ಟಲು ನೋಟಿಸ್ ಬಂದಿದೆ. ವೇತನದಲ್ಲಿ ಕಡಿತವಾಗಿರುವ ಹಣ ಮತ್ತೂಮ್ಮೆ ತುಂಬುವುದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು.
ಬಿಎಂಟಿಸಿ ಕಳೆದ 2016ರ ಆಗಸ್ಟ್‌ನಿಂದ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ತುಟ್ಟಿಭತ್ಯೆ ಹಣ ಸಂದಾಯ ಮಾಡಿಲ್ಲ. ಲೀವ್ ಎನ್ ಕ್ಯಾಷ್‌ಮೆಂಟ್ ಹಣವನ್ನು ಕೊಟ್ಟಿಲ್ಲ. ವಾಯವ್ಯ ನಿಗಮ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕೈಗಾರಿಕಾ ಒಪ್ಪಂದಗಳ ಉಲ್ಲಂಘನೆ, ಕಾನೂನುಬಾಹಿರ ಫಾರಂ-4, ಇದರಿಂದ ಉದ್ಭವಿಸಿರುವ ಬಾರ್ ಡ್ನೂಟಿಗಳು, ಮಿತಿಮೀರಿದ ಶಿಕ್ಷೆಗಳು, ನೌಕರರ ಯಾವುದೇ ಕುಂದು-ಕೊರತೆಗಳನ್ನು ಸಂಘದೊಂದಿಗೆ ಬಗೆಹರಿಸದಿರುವ ಆಡಳಿತ ವರ್ಗದ ಮನಸ್ಥಿತಿ ಮುಂತಾದವುಗಳು ಕೈಗಾರಿಕಾ ಬಾಂಧವ್ಯವನ್ನೇ ನಾಶ ಮಾಡಿವೆ. ಹಿಂದಿನ ಕೈಗಾರಿಕಾ ಒಪ್ಪಂದಗಳಿಂದ ಕಾರ್ಮಿಕರು ಪಡೆದಿರುವ ಹಲವಾರು ಸೌಲಭ್ಯಗಳನ್ನು ಮತ್ತು ಗಳಿಸಿರುವ ಹಕ್ಕುಗಳನ್ನು ರದ್ದುಪಡಿಸಬೇಕೆಂದು ಅಧಿಕಾರಶಾಹಿ ತುದಿಗಾಲಿನಲ್ಲಿ ನಿಂತಿದೆ.
ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಜ.25ರಂದು ಎಲ್ಲ ವಿಭಾಗೀಯ ಸಾರಿಗೆ ಕಚೇರಿಗಳ ಮುಂದೆ ಧರಣಿ ಹಾಗೂ ಜ.30ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ಇವತ್ತು ಎಲ್ಲ ಸರಕಾರಗಳ ಅವಧಿಯಲ್ಲಿ ಕಾರ್ಮಿಕ ವರ್ಗ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಚುನಾವಣೆಗಳಲ್ಲಿ ಕಾರ್ಮಿಕರ ಕುರಿತು ಯಾವುದೇ ಸರಕಾರ ಪ್ರಣಾಳಿಕೆಗಳನ್ನು ಮಾಡುವುದಿಲ್ಲ. ಕಾರ್ಮಿಕರು ಇರುವುದೇ ದುಡಿಯಲು ಎನ್ನುವ ಸರಕಾರ ಮತ್ತು ಸಮಾಜದಲ್ಲಿ ಬೇರೂರಿರುವ ಮನೋಭಾವ ದೂರಾಗಬೇಕು. ಇಲ್ಲದಿದ್ದರೆ ಕಾರ್ಮಿಕರ ಅಭ್ಯುದಯ ಕಷ್ಟವಾಗುತ್ತದೆ.
ಸರಕಾರ ಪಾಲಿಕೆ ನೌಕರರಿಗೆ ಎಲ್ಲ ರೀತಿಯ ಕರ್ಯಗಳನ್ನು ಒದಗಿಸಬೇಕು. ಅವರ ಮಕ್ಕಳಿಗಾಗಿ ಉತ್ತಮ ಶಾಲೆ ಮತ್ತು
ತರಬೇತಿಗಳ ಸೌಕರ್ಯವನ್ನು ಮಾಡಬೇಕು ಎಂದರು. ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕ್‌ರ್ಸ್ ಫೆಡರೇಷನ್ ಉಪಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ಎಸ್.ಎಸ್. ಪತಕಿ, ರತ್ನಪ್ಪ ಜೈನ್, ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡ್ಯಾಳ್, ನ್ಯಾಯವಾದಿ ಬಿ.ಆರ್. ಪಾಟೀಲ್, ಕಾ. ಪದ್ಮಾವತಿ ಮಾಲಿಪಾಟೀಲ್, ಎಚ್.ಎ. ಆದಿಮೂರ್ತಿ, ಚನ್ನಪ್ಪ, ಐ.ಐ. ಮುಶ್ರೀಪ್ ಮುಂತಾದವರು ಹಾಜರಿದ್ದರು. ಸಮಾವೇಶದಲ್ಲಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸೆ„ಯದ್ ನೂರುಲ್ಲಾ ಹುಸೇನಿ, ಸಿದ್ದಣ್ಣ ಕಣ್ಣೂರ್, ರಾಮು ಗುತ್ತೇದಾರ, ಶರಣಬಸಪ್ಪ
ಗಣಜಲಖೇಡ್, ನಂದಕುಮಾರ ಜಮಾದಾರ, ಅಬ್ದುಲ್ ಕಲೀಂ ಮುಂತಾದವರು ಪಾಲ್ಗೊಂಡಿದ್ದರು. ಸಮಾವೇಶಕ್ಕೂ ಮುನ್ನ ವಿಭಾಗೀಯ ಸಾರಿಗೆ ಕಚೇರಿಯಿಂದ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.