ಸಾಧನೆ ಬಿಂಬಿಸಿದ ವಸ್ತು ಪ್ರದರ್ಶನ
Team Udayavani, Sep 12, 2017, 10:07 AM IST
ಕಲಬುರಗಿ: ನಗರದ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವಸ್ತು ಪ್ರದರ್ಶನ
ಮೊದಲ ದಿನ ಸಪ್ಪೆಯಾಗಿತ್ತು. ಅಲ್ಲದೆ, ಜನರನ್ನು ಸೆಳೆಯುವಲ್ಲಿ ವಿಫಲವಾಯಿತಾದರೂ, ಕೆಲವು ವಿಭಾಗಗಳ ವಿದ್ಯಾರ್ಥಿಗಳು ಮಾಡಿದ ಮಾದರಿಗಳು ಮಹತ್ವದ್ದೆನ್ನಿಸಿದವು.
ವಿವಿ ಆವರಣದಲ್ಲಿರುವ 37 ವಿಭಾಗಗಳಲ್ಲೂ ಆಯಾ ವಿಭಾಗದ ಸಾಧನೆಗಳು ಹಾಗೂ ಸಂಶೋಧನೆ ಬಿಂಬಿಸುವ
ಪ್ರಯತ್ನ ಮಾಡಲಾಯಿತು. ಸಸ್ಯಶಾಸ್ತ್ರ ವಿಭಾಗ, ವಿಜ್ಞಾನ ವಿಭಾಗ, ಎಲೆಟ್ರಾನಿಕ್ಸ್, ಕನ್ನಡ ಅಧ್ಯಯನ ಸಂಸ್ಥೆ, ವಸ್ತು ವಿಜ್ಞಾನ ವಿಭಾಗ, ದೃಶ್ಯಕಲಾ ವಿಭಾಗದಲ್ಲಿನ ಮಾದರಿಗಳು ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆದವು.
ಹೆದ್ದಾರಿಗಳಲ್ಲಿ ಕಣಗಿಲ ಮತ್ತು ಪೇಪರ್ ಹೂವುಗಳ ಗಿಡಗಳನ್ನು ನೆಡುವುದರಿಂದ ಧೂಳಿನ ಸಮಸ್ಯೆಗೆ ಪರಿಹಾರ ಕಾಣಬಹುದು ಎನ್ನುವ ಮಾದರಿ ಸಸ್ಯಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆಯಿತು. ಅದಲ್ಲದೆ, ಕೈಗಾರಿಕೆಗಳಿಂದ ಹೊರ ಬರುವ ಹೊಗೆಯನ್ನು ಎಕಾjಸ್ಟ್ ರೂಮ್‌ಗೆ ಕೊಂಡೊಯ್ದು ಅಲ್ಲಿ ಶೇಖರಣೆ ಆಗುವ ಕಾರ್ಬನ್ ಡೈಆಕ್ಸೈಡ್‌ನ್ನು ಬಳಕೆ ಮಾಡಿ ಸೀಸ್ ಪೆನ್ಸಿಲ್ ನಿಬ್ ಹಾಗೂ ಇತರೆ ವಸ್ತು ತಯಾರಿಸುವ ಮಾದರಿಯನ್ನು ವಿಭಾಗದ ಡೀನ್ ಡಾ| ಜಿ.ಎಂ. ವಿದ್ಯಾಸಾಗರ ಹಾಗೂ ಪ್ರತಿಭಾ ಮಠದ ಅವರ ಮಾರ್ಗದರ್ಶನದಲ್ಲಿ ಸಿದ್ದ ಮಾಡಿದ್ದಾಗಿ ವಿದ್ಯಾರ್ಥಿಗಳಾದ ಭೀಮಾಶಂಕರ ಚ .ಹುಣಸಗಿ, ಬಿಲಾಲ ಅಹೆಮದ್, ಸಚಿನ್ ಗಡ್ಡದ ಮತ್ತು ಗುರುಬಸವ ಮಾಹಿತಿ ನೀಡಿದರು. ಕಲಾ ವಿಭಾಗದಲ್ಲಿನ ಕಲಾಕೃತಿಗಳು, ಮಣ್ಣಿನಿಂದ ಮಾಡಿದ ಕೃತಿಗಳು, ನವಿಲು, ವಿವಿಧ ಸಾಧಕರ ಮೂರ್ತ ರೂಪಗಳು ಗಮನ ಸೆಳೆದವು. ಕನ್ನಡ ವಿಭಾಗದಲ್ಲಿ ಹಲವಾರು ಪ್ರಕಟಣೆಗಳನ್ನು ಇಡಲಾಗಿತ್ತು. ಅಂಬೇಡ್ಕರ್ ಭವನದಲ್ಲಿ ಸಿದ್ದಪಡಿಸಿ ಇಡಲಾಗಿದ್ದ, ಬಾಬಾ ಸಾಹೇಬರ ವಿವಿಧ ಸಾಧನೆಗಳ ಫೋಟೋಗಳು, ಚಳವಳಿ ಫೋಟೋಗಳು ಗಮನ ಸೆಳೆದವು.
ಜನರ ಕೊರತೆ: ಆದರೆ, ವಿವಿ ವ್ಯವಸ್ಥೆ ಮಾಡಿರುವ ವಸ್ತುಪ್ರದರ್ಶನ ನೋಡಲು ಜನರ ಬರಲೇ ಎನ್ನವ ಮಾತು ಕೇಳಿ ಬಂದಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಆದರೆ, ಸಾರ್ವಜನಿಕರು ಬರಲಿಲ್ಲ. ಅವರನ್ನು ಹೇಗೆ ಸೆಳೆಯುವುದು ಎನ್ನುವುದು ಸಂಘಟಕರಿಗೆ ಪ್ರಮುಖ ಪ್ರಶ್ನೆಯಾಗಿತ್ತು.
ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.