ಸರಕಾರಿ ಜಾಗ ಒತ್ತುವರಿ ಮಾಡಿದರೆ ಕ್ರಮ
Team Udayavani, Feb 11, 2020, 10:49 AM IST
ಚಿಂಚೋಳಿ: ತಾಲೂಕಿನ ಅಣವಾರ ಗ್ರಾಮದ ಸರಕಾರಿ ಜಮೀನು ಸರ್ವೆ ನಂ.12ರಲ್ಲಿ ಕೆಲವರು ಅಕ್ರಮವಾಗಿ ಕಲ್ಲು ತಂದು ಹಾಕಿದ್ದಾರೆ. ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಜನರು ಮನೆ ನಿರ್ಮಿಸಿಕೊಂಡಿದ್ದಾರೆ. ಸರಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಯಾರಾದರು ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಕಲಂ 192ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಎಚ್ಚರಿಕೆ ನೀಡಿದರು.
ಅಣವಾರದಲ್ಲಿ ಶಾಸಕ ಡಾ|ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.ಸರಕಾರಿ ಜಮೀನು ಸರ್ವೆ ನಂ.12ರಲ್ಲಿಒಟ್ಟು 249 ಎಕರೆ ಸರಕಾರಿ ಜಮೀನು ಇದೆ. ಗ್ರಾಮಸ್ಥರು ಬೇಕಾಬಿಟ್ಟಿಯಾಗಿ ಜಮೀನು ಕಬೆjಮಾಡಿಕೊಂಡಿದ್ದಾರೆ. ಈಗಾಗಲೇ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣ ಇತ್ಯರ್ಥವಾಗಿಲ್ಲ. ಸರಕಾರಿ ಜಮೀನು ಅನಧಿಕೃತವಾಗಿ ಒತ್ತುವರಿ ಮಾಡಿದರೆ ಕಂದಾಯ ಇಲಾಖೆಯಿಂದ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದು ಜನಸಂಪರ್ಕ ಸಭೆ ಮುಖ್ಯ ಉದ್ದೇಶ. ನಿಮ್ಮ ಸಮಸ್ಯೆಗಳನ್ನು ಲಿಖೀತವಾಗಿ ನೀಡಿ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಬಗೆಹರಿಸಲಾಗುವುದು. ನಿಮ್ಮ ಗ್ರಾಮದಲ್ಲಿ ಎಲ್ಲಿಯೂ ಸ್ಥಳ ಅವಕಾಶವಿಲ್ಲ. ಶೌಚಾಲಯ,ಶಾಲೆ ನಿರ್ಮಾಣಕ್ಕಾಗಿ ಜಾಗದ ಕೊರತೆ ಇದೆ. ನಿಮ್ಮ ಗ್ರಾಮಗಳಿಗೆ ಅನೇಕ ಅಭಿವೃದ್ಧಿ ಕಾರ್ಯ ಮಂಜೂರಿ ಮಾಡಬೇಕಾಗಿದೆ. ಜಾಗ ಇಲ್ಲದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲ, ಸಿಮೆಂಟ್ ರಸ್ತೆಯಿಲ್ಲ. ಜನರಿಗೆ ಸಾರ್ವಜನಿಕ ನಳ ಇಲ್ಲ. ಅಲ್ಲದೇ ಮನೆ ಕಟ್ಟಿಕೊಂಡವರಿಗೆ ಹಣ ಇನ್ನು ಪಾವತಿಯಾಗಿಲ್ಲ. ಗರ್ಭಿಣಿಯರಿಗೆ ಮಾತೃಶ್ರೀ ಯೋಜನೆ ಅಡಿ ಸಹಾಯಧನ ಇನ್ನು ನೀಡಿಲ್ಲ ಎಂದು ಗ್ರಾಮಸ್ಥರು ಶಾಸಕರ ಮುಂದೆ ಸಮಸ್ಯೆ ವಿವರಿಸಿದರು. ಸುಭಾಸ ಗಂಗನಪಳ್ಳಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯಗಳಿಲ್ಲ. ಸ್ಮಶಾನ ಭೂಮಿ ಇಲ್ಲ. ವಿದ್ಯುತ್ ಸರಬರಾಜು ಸರಿಯಾಗಿ ಆಗುತ್ತಿಲ್ಲ. ನೀರು ಸಾಕಷ್ಟು ಇದ್ದರು ಸಹ ಗ್ರಾಪಂ ನಿರ್ವಹಣೆ ಸರಿಯಾಗಿಲ್ಲ ಎಂದು ದೂರಿದರು.
ಹಣಮಂತ ಗೌರಿ ಮಾತನಾಡಿ, ನಮ್ಮ ಊರಿನ ಸರಕಾರಿ ಶಾಲೆಗೆ ಕಾಂಪೌಂಡ್ ಇಲ್ಲ. ಮಕ್ಕಳುರಾಷ್ಟ್ರಗೀತೆ ಹಾಡುವಾಗ ನಮ್ಮ ಊರಿನ ಗೌಡರ ದನಕರುಗಳು ಶಾಲೆಗೆ ನುಗ್ಗುತ್ತವೆ. ಇದರಿಂದ ಮಕ್ಕಳಿಗೆ ಸುರಕ್ಷತೆ ಇಲ್ಲ. ಸರಕಾರಿ ಶಾಲೆ ಪರಿಸರ ಸಂಪೂರ್ಣ ಹಾಳಾಗಿದೆ. 1ರಿಂದ 8ನೇ ತರಗತಿ ಶಾಲೆಯಲ್ಲಿ ಒಟ್ಟು 70 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ ಕಳೆದ 20 ವರ್ಷಗಳಿಂದ ಕಾಂಪೌಂಡ್ ಇಲ್ಲ ಎಂದು ದೂರಿದರು.
ನಮ್ಮ ಗ್ರಾಪಂ ಅಧ್ಯಕ್ಷ, ಪಿಡಿಒ ಮತ್ತು ಸದಸ್ಯರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ಗ್ರಾಪಂ ಅಧ್ಯಕ್ಷ ಬಸವಂತರೆಡ್ಡಿ ಪಾಟೀಲ, ವೆಂಕಟರೆಡ್ಡಿ ಪಾಟೀಲ, ಸಂತೋಷ ಗಡಂತಿ, ಲಕ್ಷ¾ಣ ಆವಂಟಿ, ಶ್ರೀಮಂತ ಕಟ್ಟಿಮನಿ, ಚಂದ್ರಶೇಖರ ಗುತ್ತೇದಾರ, ಬಸವರಾಜ ದೇಶಮುಖ, ಗುರಮ್ಮ ಮಠಪತಿ, ಶಿವಪುತ್ರಪ್ಪ, ಶ್ರೀಕಾಂತ ಗೌನಳ್ಳಿ, ಸೋಮಶೇಖರಮಂಗಲಗಿ, ಸುರೇಶ ಬಟಗೇರಿ, ಶರಣಪ್ಪ ತಳವಾರ, ಸುಧಾಕರ ತಳವಾರ, ವೀರಾರೆಡ್ಡಿ ಬಸರೆಡ್ಡಿ, ಶರಣಪ್ಪ ಪೂಜಾರಿ, ಶಾಂತಲಿಂಗಪ್ಪ ಬಿರಾದಾರ, ಅಧಿಕಾರಿಗಳಾದ ಡಾ| ದೀಪಕ ಪಾಟೀಲ, ಎಇಇ ಮಹ್ಮದ್ ಅಹೆಮದ್ ಹುಸೇನ್, ಎಇಇ ಪರಮೇಶ್ವರ ಬಿರಾದಾರ, ಪ್ರಭುಲಿಂಗ ಬುಳ್ಳ, ಪರಿಮಳ, ಡಾ| ಧನರಾಜ ಬೊಮ್ಮ ಭಾಗವಹಿಸಿದ್ದರು. ನಾಗೀಂದ್ರಪ್ಪ ಬಿರಾದಾರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.