ನೂತನ ತಾಲೂಕಿಗೆ ಸಮೀಪದ ಹಳ್ಳಿ ಸೇರಿಸಿ
Team Udayavani, Jan 22, 2018, 11:20 AM IST
ಶಹಾಬಾದ: ನಗರವನ್ನು ನೂತನ ತಾಲೂಕು ಕೇಂದ್ರವೆಂದು ರಾಜ್ಯ ಸರ್ಕಾರ ಘೋಷಿಸಿದ್ದು, ಇದರ ವ್ಯಾಪ್ತಿಗೆ ಸಮೀಪದ ಹಳ್ಳಿಗಳನ್ನು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಶಹಾಬಾದ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಪ್ರಕಟಿತ ರಾಜ್ಯ ಪತ್ರದಲ್ಲಿ ಘೋಷಿತ ತಾಲೂಕಿಗೆ ಕೇವಲ 12 ಗ್ರಾಮಗಳನ್ನು ಮಾತ್ರ ಸೇರ್ಪಡೆಗೊಳಿಸಿದೆ.
ಈ ಹಿಂದೆ ಶಹಾಬಾದ ಹೋಬಳಿ ವ್ಯಾಪ್ತಿಗೆ ಸುಮಾರು 20 ಹಳ್ಳಿಗಳು ಬರುತ್ತಿದ್ದವು. ಆದರೀಗ 12 ಹಳ್ಳಿಗಳನ್ನು ಸೇರಿಸಿ
ಅವೈಜ್ಞಾನಿಕವಾಗಿ ಮಾಡಿದ್ದಾರೆ. ತಾಲೂಕು ಕೇಂದ್ರದಿಂದ ಮುಗುಳನಾಗಾವ, ಶಂಕರವಾಡಿ, ಮಾಲಗತ್ತಿ, ಇಂಗಳಗಿ, ಕುಂದನೂರ, ಕಡಬೂರ, ಚಾಮನೂರ, ಬಳವಡಗಿ, ವಾಡಿ ಪಟ್ಟಣಗಳು ಕೇವಲ 8 ಕಿಮೀ ದೂರದಲ್ಲಿವೆ. ಆದರೆ
ಈ ಗ್ರಾಮಗಳು ಚಿತ್ತಾಪುರ ತಾಲೂಕಿನಿಂದ ಸುಮಾರು 25 ಕಿಮೀ ದೂರದಲ್ಲಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರ ಕಚೇರಿ, ರೈತ ಸಂಪರ್ಕ ಕೇಂದ್ರ, ಶಿಶು ಅಬಿವೃದ್ಧಿ ಕಾರ್ಯಾಲಯ, ನಗರದ
ನ್ಯಾಯಾಲಕ್ಕೆ ಸಂಬಂಧಿಸಿದಂತೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳು ಈ ಕಚೇರಿಯ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಶೇಡೂಲ್1-2ರಲ್ಲಿ ಶಹಾಬಾದ ಹೋಬಳಿ ಹಾಗೂ ಇತರ ಕಾರ್ಯಾಲಯಗಳ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ತಾಲೂಕಿನ ವ್ಯಾಪ್ತಿಗೆ ಸೇರಿಸಿದಲ್ಲಿ ಭೌಗೋಳಿಕವಾಗಿ, ವೈಜ್ಞಾನಿಕವಾಗಿ ತಾಲೂಕು ರಚನೆ ಮಾಡಿದಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಶಹಾಬಾದ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಮಹ್ಮದ್ ಅಲಿ ಜಮಾದಾರ, ಕಾರ್ಯದರ್ಶಿ ಕೃಷ್ಣಪ್ಪ ಕರಣಿಕ್, ಲೋಹಿತ್ ಕಟ್ಟಿ,ಶರಣು ವಸ್ತ್ರದ್, ರಾಜಮಹ್ಮದ್ ರಾಜಾ, ನಿಂಗಣ್ಣ ಹುಳಗೋಳಕರ್, ರಾಚಣ್ಣ ಅಲ್ಲಂಶೆಟ್ಟಿ, ರಮೇಶ ಭಟ್, ಜಾಫರ್ ಪಟೇಲ್, ಗಫೂರ್ ಪಟೇಲ್, ಶಿವಕುಮಾರ ಅವರಾದಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.