ಕೋಲಿ ಎಸ್‌ಟಿಗೆ ಸೇರಿಸಲು ಲಕ್ಷ ಸಹಿ ಸಂಗ್ರಹ
Team Udayavani, Mar 8, 2017, 3:01 PM IST
ಅಫಜಲಪುರ: ರಾಜ್ಯದಲ್ಲಿ ಹಿಂದುಳಿದ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಬೇಕು. ಹೀಗಾಗಿ ಜಿಲ್ಲೆಯಾದ್ಯಂತ ಕೋಲಿ ಸಮಾಜ ಬಾಂಧವರ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಶಂಕು ಮ್ಯಾಕೇರಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಬಡಾವಣೆಯಲ್ಲಿ ಲಕ್ಷ ಸಹಿ ಸಂಗ್ರಹ ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಅವರು, ಕೋಲಿ ಸಮಾಜದವರು ಭಾರತದ ಮೂಲನಿವಾಸಿಗಳು. ಎಲ್ಲಾ ರಾಜ್ಯಗಳಲ್ಲಿ ಕೋಲಿ ಸಮಾಜಕ್ಕೆ ಹೆಚ್ಚಿನ ಸವಲತ್ತುಗಳಿವೆ. ಕರ್ನಾಟದಲ್ಲಿ ಮಾತ್ರ ಸಮಾಜ ಸವಲತ್ತುಗಳಿಂದ ವಂಚಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮನ್ನಾಳುವ ಸರ್ಕಾರಗಳು ಕೋಲಿ ಸಮಾಜವನ್ನು ಕಡೆಗಣಿಸದೆ ಎಸ್‌ಟಿಗೆ ಸೇರಿಸಬೇಕು. ಸಂವಿಧಾನ ರಚನೆಯಾಗಿ 70 ವರ್ಷಗಳಾದರೂ ನಮಗೆ ಸಂವಿಧಾನ ಬದ್ದ ಹಕ್ಕು ಸಿಕ್ಕಿಲ್ಲ. ಹೀಗಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಲಕ್ಷ ಸಹಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು. ಕರ್ನಾಟಕ ಕೋಲಿ ಸೈನ್ಯದ ರಾಜ್ಯಾಧ್ಯಕ್ಷ ನಿಂಗಣ್ಣ ದೇವಣಗಾಂವ ಮಾತನಾಡಿ, ಕೋಲಿ ಸಮಾಜ ಹಿಂದುಳಿದ ಸಮಾಜವಾಗಿದೆ.
ಹೀಗಾಗಿ ಎಸ್‌ಟಿ ಪಂಗಡಕ್ಕೆ ಸೇರಿಸಿ ನ್ಯಾಯ ಒದಗಿಸುವ ಜವಾಬ್ದಾರಿ ಸರಕಾರದ್ದು ಎಂದರು. ಜಿಲ್ಲೆಯಾದ್ಯಂತ ಲಕ್ಷ ಸಹಿ ಸಂಗ್ರಹಿಸಿ ಮಾ. 18ರಂದು ಕಲಬುರಗಿ ನಗರದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ರಾಜೇಂದ್ರ ರಾಜವಾಳ, ಲಕ್ಷಿಪುತ್ರ ತಳವಾರ, ಬಾಬು ಬೈರಂಪಳ್ಳಿ, ಮಹಾರಾಯ ಅಗಸಿ, ಅಶೋಕ ದುದ್ದಗಿ, ಸುರೇಶ ಕಲ್ಲೂರ, ಶರಣಪ್ಪ ದುದ್ದಗಿ, ಮಹಾಂತೇಶ ಬಡಿಗೇರ, ಸಿದ್ದು ಸಿನ್ನೂರ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.