ಉಪ್ಪಾರ ಸಮಾಜ ಎಸ್‌ಟಿಗೆ ಸೇರಿಸಿ
Team Udayavani, Jan 4, 2018, 11:34 AM IST
ಕಲಬುರಗಿ: ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು
ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಸಮುದಾಯಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಇತಿಹಾಸವಿದೆ. ಸುಮಾರು 15 ಜನರನ್ನು ಬ್ರಿಟಿಷರ ಸೇನೆ ನೇಣಿಗೇರಿಸುವ ಮೂಲಕ ಸಮುದಾಯದವರ ಬಲಿದಾನ ಪಡೆದಿದೆ. ಆದರೆ ಈ ಇತಿಹಾಸ ಮುಚ್ಚಿಹಾಕಲಾಗಿದೆ.
ದಂಡಿಯಾತ್ರೆಯಲ್ಲಿ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಉಪ್ಪಾರರು ಭಾಗವಹಿಸಿದ್ದರು. ನಂತರ
ಅದೇ ಸ್ವಾತಂತ್ರ್ಯ ಚಳವಳಿ ಉಗ್ರ ಸ್ವರೂಪ ಪಡೆದಾಗ ಸಮಾಜವರು ಗೋಲಿಬಾರ್ ನಲ್ಲಿ ವೀರಸ್ವರ್ಗ ಕಂಡರು. ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ಉಪ್ಪಾರ ಸಮಾಜವನ್ನು ಅಲಕ್ಷಿಸಿವೆ ಎಂದು ಆರೋಪಿಸಿದರು.
ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಉದ್ಯೋಗದಲ್ಲಿ ವಡ್ಡರ್ ಸಮುದಾಯ, ಉಪ್ಪಾರ ಸಮುದಾಯದವರ ಕೆಲಸ ಒಂದೇ ಆದರೂ ವಡ್ಡರ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಉಪ್ಪಾರ ಸಮುದಾಯವನ್ನು ಮೀಸಲಾತಿ ಯಿಂದ ವಂಚಿಸಲಾಗಿದೆ ಎಂದರು.
ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳು ಉಪ್ಪಾರ ಸಮಾಜ ಹಿಂದುಳಿದ ಸಮಾಜವೆಂದು ವರದಿ ನೀಡಿದರೂ ಯಾವುದೇ ಸರ್ಕಾರಗಳು ಈ ವರೆಗೆ ಈ ಸಮಾಜವನ್ನು ಕಣ್ಣೆತ್ತಿಯೂ ನೋಡಿಲ್ಲ. ರಾಜ್ಯದ ಕಾರವಾರ, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಉಪ್ಪಾರ ಸಮಾಜ (ಪೂಸಾ, ಮುಂಡಾಳ, ಪಟದಾ) ಪರಿಶಿಷ್ಟ ಜಾತಿಯಲ್ಲಿದೆ. ಪಶ್ಚಿಮ ಬಂಗಾಳದಲ್ಲೂ ಎಸ್.ಟಿ.ಯಲ್ಲಿದೆ. ಬಿಹಾರದಲ್ಲಿ ಎಸ್.ಟಿ.ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ.
2006ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸಮಾಜವನ್ನು ಎಸ್.ಟಿ.ಗೆ ಸೇರಿಸುವ ಭರವಸೆ ನೀಡಿದ್ದರು. ಬೆಂಗಳೂರಲ್ಲಿ ನಡೆದ ಸಮಾವೇಶದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾನ ಮಾಡಿದ್ದರು. ಎಲ್ಲರ ಭರವಸೆಗಳು ಹುಸಿಯಾಗಿವೆ ಎಂದರು.
ಕೂಡಲೇ ಸಮಾಜವನ್ನು ಎಸ್ .ಟಿ.ಗೆ ಸೇರಿಸಬೇಕು. ಸಮಾಜಕ್ಕೆ ಈಗಿರುವ ಆದಾಯ ಮಿತಿ ತೆಗೆದುಹಾಕಬೇಕು. ಉಪ್ಪಾರ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷೆ ಡಾ| ಸರಸ್ವತಿ ಚಿಮ್ಮಲಗಿ, ರಾಜ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಸತೀಶ ಮುರಗೋಡ, ಗೋವಿಂದ ರಾವೂರ, ಅಮರೇಶ ಸಾಹುಕಾರ ಕಟ್ಟಿಮನಿ, ಶ್ರೀನಿವಾಸ ಸಗರ ರಾವೂರ, ವೆಂಕಟೇಶ ನಿರಡಗಿ, ಮಹಾದೇವ ಉಪ್ಪಾರ, ಹನುಮಾಕ್ಷಿ ಗೋಗಿ, ಶ್ರೀನಿವಾಸ ಮಸರಕಲ್, ಗೋಪಣ್ಣ ನೀರಡಗಿ, ನಿಂಗಣ್ಣ ಹೊರಪೇಟ್, ವಿಠೊಬಾ ಗೌಂಡಿ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.