ಕೂಡಿಸುವುದೇ ಧರ್ಮ-ಪ್ರತ್ಯೇಕಿಸುವುದೇ ಅಧರ್ಮ
Team Udayavani, Nov 25, 2017, 10:21 AM IST
ಕಲಬುರಗಿ: ಒಡೆದ ಮನಸ್ಸುಗಳನ್ನು ಕೂಡಿಸುವುದು ಹಾಗೂ ಅವು ಒಡೆಯದಂತೆ ನೋಡಿಕೊಳ್ಳುವುದೇ ಧರ್ಮ, ಒಂದಾಗಿರುವ ಮನಸ್ಸುಗಳನ್ನು ಸ್ವಾರ್ಥಕ್ಕಾಗಿ ಪ್ರತ್ಯೇಕಗೊಳಿಸುವುದೇ ಅಧರ್ಮ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಇಟಗಾದಲ್ಲಿ ಸಾಧು ಶಿವಲಿಂಗೇಶ್ವರರ 59 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಶೀರ್ವಚನ ನೀಡಿ, ವಿರೋಧ ರಹಿತಂ-ವೀರಶೈವಂ ಎಂದು ಹೇಳುವ ಮೂಲಕ ಯಾರನ್ನು ಯಾವ ಸಮುದಾಯವನ್ನು ವಿರೋಧಿಸದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬದುಕಬೇಕೆಂಬ ತತ್ವ ಸಿದ್ಧಾಂತವನ್ನು ಸನಾತನ ಕಾಲದಿಂದಲೂ ವೀರಶೈವ ಲಿಂಗಾಯತ ಧರ್ಮ ಸಾರುತ್ತ ಬಂದಿದೆ ಎಂದರು.
ಸ್ತ್ರೀ-ಪುರುಷರೆಂಬ ಲಿಂಗಬೇಧವಾಗಲಿ-ಉತ್ಛ, ನೀಚವೆಂಬ ಕುಲಬೇಧವಾಗಲಿ, ಬ್ರಾಹ್ಮಣ-ಶೂದ್ರ ಎನ್ನುವ ಜಾತಿಬೇಧವಾಗಲಿ ಈ ಧರ್ಮದಲ್ಲಿಲ್ಲ. ಅಷ್ಟಾವರಣ ಪಂಚಾಚಾರ್ಯ, ಷಟಸ್ಥಳವೆಂಬ ತತ್ವತ್ರೇಯಗಳ ತಳಹದಿ ಮೇಲೆ ಧರ್ಮ ಆಚರಣೆಯ ಅಧಿಕಾರವನ್ನು ಸರ್ವರಿಗೂ ಸಮಾನವಾಗಿ ನೀಡಲಾಗಿದೆ ಎಂದು ಹೇಳಿದರು.
ಶಖಾಪೂರ ತಪೋವನ ಮಠದ ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಚಿಣಮಗೇರಿಯ ಮರಿದೇವರು, ಸಿದ್ರಾಮಪ್ಪ ಆಲಗೂಡಕರ, ವೀರಭದ್ರಪ್ಪ ವರದಾನಿ, ರಾಯಗುಂಡಪ್ಪ ವಾಡಿ, ಶರಣಪ್ಪ ಪಾಟೀಲ, ಆನಂದಪ್ಪ ಮುಣಜಗಿ, ಶ್ರೀನಿವಾಸ ಕುಲಕರ್ಣಿ, ಬಾಬುರಾವ್ ಮುಕರಂಬಿ, ಶಿವಪುತ್ರ ಕೆಂಭಾವಿ, ರೇವಣಸಿದ್ದಪ್ಪ ಕೆಂಭಾವಿ, ಮಹಾಂತಗೌಡ ಸೊನ್ನದ, ಈಶ್ವರಗೌಡ ಸೊನ್ನದ, ಮಲ್ಲಯ್ಯ ಗುತ್ತೇದಾರ, ಭೀಮರಾಯ ನಾಟೀಕಾರ, ಅಶೋಕ ಹಲಕಟ್ಟಿ, ಖಾಸೀಂಸಾಬ್ ಮುಲ್ಲಾ ಹಾಗೂ ಇತರರಿದ್ದರು.
ಸಾಧು ಶಿವಲಿಂಗೇಶ್ವರರ ಪುರಾಣ ಸುಮಿತ್ರಾಬಾಯಿ ಕೊಪ್ಪಳ ನಡೆಸಿಕೊಟ್ಟರು. ಸಿದ್ದಣ್ಣ ದೇಸಾಯಿ ಕೊಲ್ಲೂರರಿಂದ ಸಂಗೀತ ಜರುಗಿತು. ಸುಭಾಷ ಮಕರಂಬಿ ಸ್ವಾಗತಿಸಿದರು. ಶಿವಕುಮಾರ ಹಿರೇಮಠ ನಿರೂಪಿಸಿದರು. ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಭಾ ಮಂಟಪದವರೆಗೆ
ನಡೆಯಿತು.
ವೀರಶೈವ ಧರ್ಮದ ಅಖಂಡತೆಗೆ ಕೈಜೋಡಿಸಿ ಶಿವಾಗಮಗಳ ಮೂಲಕ ಆರಂಭವಾದ ವೀರಶೈವ ಧರ್ಮಕ್ಕೆ ಆದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಯುಗ ಪ್ರವರ್ತಕರಾದರೆ ಬಸವಾದಿ ಶಿವಶರಣರು ಪುನರೋದ್ಧಾರಕರಾಗಿದ್ದಾರೆ. ಇಂತಹ ವಿಶಾಲ ಮತ್ತು ಅತ್ಯಂತ ಪ್ರಾಚೀನವಾದ ವೀರಶೈವ ಲಿಂಗಾಯತ ಧರ್ಮವನ್ನು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಲಾಭಕ್ಕಾಗಿ ಇಬ್ಭಾಗ ಮಾಡುತ್ತಿರುವಯತ್ನ ಫಲಿಸದು. ಇದಕ್ಕೆ ಕೆಲ ಧಾರ್ಮಿಕ ಮುಖಂಡರು ಕೈಜೋಡಿಸುತ್ತಿರುವುದು ದುರಾದೃಷ್ಟಕರ. ಎಲ್ಲಾ ಸದ್ಭಕ್ತರು ಧರ್ಮದ ಅಖಂಡತೆ ಒಗ್ಗೂಡಿಸಲು ಕೈಜೋಡಿಸಬೇಕು.
ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀಶೈಲ ಜಗದ್ಗುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.