ಸಕಾರಾತ್ಮಕ ಆಲೋಚನೆ ರೂಢಿಸಿಕೊಳ್ಳಿ
Team Udayavani, Aug 29, 2022, 11:42 AM IST
ಕಲಬುರಗಿ: ವಿದ್ಯಾರ್ಥಿಗಳು ಸದಾ ರಚನಾತ್ಮಕ ಮತ್ತು ಸಕಾರಾತ್ಮಕವಾಗಿ ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳುವುದು ಈ ಕಾಲದ ಅವಶ್ಯಕತೆಯಾಗಿದೆ. ಇದನ್ನು ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪಾಲಕರು ತಿಳಿ ಹೇಳುವ ಕೆಲಸ ಮಾಡಬೇಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.
ನಗರದ ಕನ್ನಡ ಭವನದಲ್ಲಿ ರವಿವಾರ ಚಿಗುರು ಶೈಕ್ಷಣಿಕ, ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೃಹತ್ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆ ಅವಕಾಶಕ್ಕಾಗಿ ಕಾಯುತ್ತದೆ. ಯಾವಾಗ ಸಕಾರಾತ್ಮಕ ಅವಕಾಶಗಳು ಸಿಗುತ್ತವೆಯೋ ಆಗ ಅದು ತನ್ನ ಮೂಲ ನೆಲೆಯಲ್ಲಿ ಪ್ರಜ್ವಲಿಸುತ್ತದೆ. ಆಗ ಆ ವಿದ್ಯಾರ್ಥಿ ಅಥವಾ ಮಗು ತನ್ನ ಹಾದಿ ಕಂಡುಕೊಳ್ಳಲು ಸುಲಭವಾಗುತ್ತದೆ. ಆದರೂ, ಅದು ಗುರಿ ಮುಟ್ಟುವತನಕ ನಾವು ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕು ಎಂದರು.
ಅವಕಾಶಗಳು ತಾನಾಗಿಯೇ ಬರುವುದಕ್ಕೆ ಕಾಯದೆ, ಅವಕಾಶವನ್ನು ಖುದ್ದು ನಾವಾಗಿಯೇ ಸೃಷ್ಟಿಸಿಕೊಳ್ಳಬೇಕು. ಅದಕ್ಕಾಗಿ ನಿರಂತರ ಪರಿಶ್ರಮ ಪಡುವ ಮೂಲಕ ಸಾಧನೆ ಮಾಡಬೇಕು. ಬೇರೊಬ್ಬರ ಮೇಲೆ ಅವಲಂಬಿತರಾಗದೆ ನಮ್ಮ ಸ್ವಂತ ಶಕ್ತಿಯಿಂದ ಬೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹೆಲ್ದಿ ಮೈಂಡ್ ಆಸ್ಪತ್ರೆ ಮುಖ್ಯಸ್ಥೆ ಹಾಗೂ ಮನೋವೈದ್ಯೆ ಡಾ|ಪ್ರಫುಲ್ಲಾ ಎಸ್. ಗುಬ್ಬಿ ಮಾತನಾಡಿ, ಸಕಾರಾತ್ಮಕ ಚಿಂತನೆಗಳು ನಮ್ಮ ಜೀವನವನ್ನು ಉದಾತ್ತ ಧ್ಯೇಯದತ್ತ ಒಯ್ಯುತ್ತವೆ. ಆದ್ದರಿಂದ ನಾವು ಕ್ರೀಯಾಶೀಲವಾಗಿದ್ದುಕೊಂಡು ನಕಾರಾತ್ಮಕ ಚಿಂತನೆಗಳಿಂದ ದೂರ ಇರಬೇಕು ಎಂದರು.
ಚಿಗುರು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ರಶ್ಮಿ ರಾಜಗಿರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳನ್ನು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡುವಂತೆ ಮಾಡಲು ನಮ್ಮ ತಂಡ ಶ್ರಮಿಸುತ್ತಿದೆ. ಜತೆಗೆ ಇಂತಹ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ನಿರಂತವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಹೈದರಾಬಾದ್‌ನ ದೂಸ್ರಾ ಡಾಟ್ ಕಾಮ್ ಸಂಸ್ಥೆ ಕಾರ್ಯಕ್ರಮ ಅಧಿಕಾರಿ ಸಾಯಿರಾಮ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರಸ್ಟ್‌ನ ಜ್ಯೋತಿ ಶರ್ಮಾ, ನಮ್ರತಾ ಪೋದ್ದಾರ, ಸಿದ್ದಾರ್ಥ ಹೇರೂರಕರ್, ಆರತಿ ರಾಜ್, ಸಂಜನಾ ರಮ್ಯಾ, ಶಾಂತಾ, ಸಿಪಿಐ ಮಹಾಂತೇಶ ಪಾಟೀಲ್, ಜಾಗತಿಕ ಲಿಂಗಾಯಿತ ಮಹಾಸಭಾ ಸಂಚಾಲಕ ರವೀಂದ್ರ ಶಾಬಾದಿ, ನ್ಯಾಯವಾದಿ ಅಂಬು ಡಿಗ್ಗಿ ಮತ್ತಿತರರು ಇದ್ದರು.
ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಇಟ್ಟುಕೊಂಡು ಸಾಧಿಸಲು ಮೊದಲು ಜಾಲತಾಣ ಮತ್ತು ಮೊಬೈಲ್ ಗೀಳಿನಿಂದ ದೂರವಿರಿ. ದೈಹಿಕ ಶ್ರಮ ಅವಶ್ಯ. ಧಾನ್ಯ ಮಾಡಿ, ಓದಿದ್ದನ್ನು ನೆನಪಿಸಿಕೊಳ್ಳುವುದು ಮತ್ತು ಏಕಾಗ್ರತೆ ಯಿಂದ ವಿಷಯದ ತಿಳಿಯುವುದು ಮುಖ್ಯ. –ಡಾ|ಪ್ರಫುಲ್ಲಾ ಎಸ್.ಗುಬ್ಬಿ, ಮುಖ್ಯಸ್ಥೆ, ಹೆಲ್ದಿ ಮೈಂಡ್ ಆಸ್ಪತ್ರೆ
ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವ ಮೂಲಕ ಹೊಸತನದೊಂದಿಗೆ ಕಲಿಸುವ ಪ್ರಯತ್ನವನ್ನು ಚಿಗುರು ಟ್ರಸ್ಟ್ ನವರು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸಲು ಚರ್ಚಾ ಸ್ಪರ್ಧೆ ಆಯೋಜಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಮಾದರಿ. ಮಕ್ಕಳಿಗೆ ಶಿಕ್ಷಕರು, ಪಾಲಕರು ಬೆಂಬಲಿಸಿ ಬೆನ್ನು ತಟ್ಟಿದರೆ ದೇಶದ ಒಳ್ಳೆಯ ಸಾಧಕರು ನಮ್ಮವರೇ ಆಗುತ್ತಾರೆ. –ಬಾಬುರಾವ್ ಯಡ್ರಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.