ಪ್ರವಾಹ ತಗ್ಗಿದ ಮೇಲೆ ಪರಿಹಾರಕ್ಕೆ ಪರದಾಟ
ಮತ್ತೆ ಕಮರಿತು ಕಡಬೂರ ಗ್ರಾಮ ಸ್ಥಳಾಂತರ ಭರವಸೆ
Team Udayavani, Nov 4, 2020, 4:57 PM IST
ವಾಡಿ: ಭೀಕರ ಭೀಮಾ ಪ್ರವಾಹಕ್ಕೆ ನಲುಗಿದ್ದ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮಸ್ಥರು ಪ್ರವಾಹ ಇಳಿದ ಮೇಲೆ ಪರಿಹಾರಕ್ಕೆ ಪರದಾಡುವಂತೆ ಆಗಿದೆ.
ಸಂಕಷ್ಟಕ್ಕೆ ಸ್ಪಂದಿಸುವ, ಗ್ರಾಮ ಸ್ಥಳಾಂತರಿಸುವ ಭರವಸೆ ನೀಡಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಗ್ರಾಮದಲ್ಲಿ ಸುಮಾರು 500 ಮನೆಗಳಿದ್ದು, ಸುಮಾರು 2000 ಜನಸಂಖ್ಯೆಯಿದ್ದು, ಒಟ್ಟು1250 ಮತದಾರರಿದ್ದಾರೆ. ಎತ್ತರದಲ್ಲಿದ್ದ ಊರ ಪ್ರಮುಖರ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಕೆಳಭಾಗದಲ್ಲಿರುವ ಅಲ್ಪಸಂಖ್ಯಾತರು, ಹಿಂದುಳಿದಸಮುದಾಯಗಳ ನೂರಾರು ಮನೆಗಳು ನೀರುಪಾಲಾಗಿವೆ.
ಮನೆಬಾಗಿಲಿಗೆ ನೀರು ಬರುತ್ತಿದ್ದಂತೆ ಬಾಗಿಲುಮುಚ್ಚಿ ಬೀಗ ಹಾಕಿ ಗಂಜಿಕೇಂದ್ರಗಳತ್ತ ಓಡಿದ್ದರು ಗ್ರಾಮಸ್ಥರು. ಪ್ರವಾಹ ತಗ್ಗಿದ ಮೇಲೆ ಮನೆಗೆ ಬಂದಾಗ ಎಲ್ಲವೂ ಖಾಲಿಯಾಗಿತ್ತು. ದವಸದಾನ್ಯ, ಬಟ್ಟೆ, ಪಾತ್ರೆ, ದಿನಸಿ, ದಾಖಲೆ ಪತ್ರಗಳು, ಕೃಷಿ ಸಲಕರಣೆ ಹೀಗೆ ಎಲ್ಲವೂ ನೀರುಪಾಲಾಗಿದ್ದವು. ಸರ್ಕಾರ ಪ್ರಕಟಿಸಿದ ಪರಿಹಾರ ಧನ ಇಂದಿಗೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಮೂರಾಬಟ್ಟೆಯಾದ ಮನೆ ದುರಸ್ತಿಗೆ ಜನರು ಪರದಾಡುತ್ತಿದ್ದಾರೆ. ಕೆಲವರು ಸಾಲ ಮಾಡಿ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಪರಿಹಾರಕ್ಕಿಂತ ಗ್ರಾಮ ಸ್ಥಳಾಂತರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಕಡಬೂರ ಗ್ರಾಮ ಪದೇಪದೆ ಭೀಮಾನದಿ ಪ್ರವಾಹಕ್ಕೆ ತುತ್ತಾಗುತ್ತಿದೆ. ಇಲ್ಲಿನ ನಿವಾಸಿಗಳು ಒಕ್ಕಲೇಳುವುದು ಸಾಮಾನ್ಯವಾಗಿದೆ. ಅಧಿ ಕಾರಿಗಳು, ಜನಪ್ರತಿನಿಧಿಗಳು ಗ್ರಾಮ ಸ್ಥಳಂತರದ ಭರವಸೆ ನೀಡುತ್ತಿದ್ದಾರೆ ಹೊರತು ಜಾರಿಗೆ ತರುತ್ತಿಲ್ಲ. ಭೀಮಾನದಿಯಲ್ಲಿ ಊರು ಮುಳುಗುವಷ್ಟು ನೀರಿದ್ದರೂ ಬೋರ್‌ವೆಲ್ ನೀರು ಕುಡಿಯಬೇಕಾದ ದುಸ್ಥಿತಿಯಿದೆ. ನೀರು ಶುದ್ಧೀಕರಣ ಘಟಕ ದಶಕಗಳಿಂದ ಪಾಳುಬಿದ್ದಿದೆ. ಜಿಲ್ಲಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. –ಹಣಮಂತ ಚವ್ಹಾಣ, ಗ್ರಾಪಂ ಮಾಜಿ ಉಪಾಧ್ಯಕ್ಷ, ಕಡಬೂರ
–ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.