ಅಫಜಲಪುರ: ಹನಿ ನೀರಿಗೂ ಬರ
Team Udayavani, Mar 17, 2019, 10:26 AM IST
ಅಫಜಲಪುರ: ನೀರಿಲ್ಲದೆ ತಾಲೂಕಿನ ಕರೆ ಕಟ್ಟೆಗಳು ಬತ್ತಿ ಹೋಗಿವೆ. ನೀರಿಗಾಗಿ ಜನರು ಪರದಾಡುತ್ತಿದ್ದರೆ, ಜಾನುವಾರುಗಳು ಪರಿತಪಿಸುತ್ತಿವೆ. ಎಲ್ಲಿ ನೋಡಿದರೂ ಹಾಹಾಕಾರ ಶುರುವಾಗಿದೆ.
ತಗ್ಗಿದ ಅಂತರ್ಜಲ: ಮಳೆ ಕೊರತೆಯಿಂದಾಗಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಅಂತರ್ಜಲ ಇಲ್ಲದ್ದರಿಂದ ಕೆರೆ, ಬಾವಿ, ಕೊಳವೆ ಬಾವಿಗಳ ನೀರು ಬತ್ತಿ ಹೋಗಿವೆ. ಅಲ್ಲದೇ ಹೊಸದಾಗಿ ಎಷ್ಟು ಕೊಳವೆ ಬಾವಿ ಕೊರೆದರೂ ಹನಿ ನೀರಿನ ಅಂಶವೂ ಕಾಣುತ್ತಿಲ್ಲ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ ಶುರುವಾಗಿದ್ದರಿಂದ ಜನ ಸಾಮಾನ್ಯರು ಬಿಂದಿಗೆ ನೀರು ತರಲು ಕಿಲೋ ಮಿಟರ್‌ಗಟ್ಟಲೇ ಅಲೆದಾಡುವಂತೆ ಆಗಿದೆ.
ಖಾಸಗಿಯವರ ಹೊಲ ಗದ್ದೆಗಳಲ್ಲಿ ಮಾಲೀಕರಿಂದ ನೂರು ಮಾತು ಆಡಿಸಿಕೊಂಡು ಕೊಡ ನೀರು ತರಬೇಕಾದ ಪರಿಸ್ಥಿತಿ ಇದೆ. ಅಲ್ಲದೇ ಅವರು ನೀರು ಕೊಟ್ಟರೆ ಪುಣ್ಯ ಎನ್ನುವಂತಾಗಿದೆ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.
ನೀರಿಗಾಗಿ ಬಾಯಿ ತೆರೆಯುತ್ತಿರುವ ಜನ: ಕಳೆದ ವರ್ಷವೂ ತಾಲೂಕಿನಲ್ಲಿ ಬರ ಆವರಿಸಿತ್ತು. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಭೀಕರ ಬರಗಾಲ ಆವರಿಸಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಬಾಯ್ತೆರೆದು ಮುಗಿಲ ಕಡೆ ಮುಖ ಮಾಡುವಂತಾಗಿದೆ. ಎಲ್ಲಿ ನೋಡಿದರೂ ಹನಿ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕೆರೆಗಳ ಮಾಹಿತಿ: ಅಫಜಲಪುರ ತಾಲೂಕಿನಲ್ಲಿ ಒಟ್ಟು 12 ಕೆರೆಗಳಿವೆ. ಅದರಲ್ಲಿ ಐದು ದೊಡ್ಡ ಕೆರೆಗಳು, ಜಿನುಗು ಕೆರೆ, ಸಣ್ಣ ಕೆರೆಗಳ ಸಂಖ್ಯೆ ಒಟ್ಟು ಏಳು. ಈ ಪೈಕಿ ಗೊಬ್ಬೂರ (ಕೆ) ಗ್ರಾಮದಲ್ಲಿ ಅತಿ ದೊಡ್ಡ ಕೆರೆ ಇದೆ. ಇದರ ವಿಸ್ತೀರ್ಣ 415 ಎಕರೆ ಪ್ರದೇಶವಾಗಿದ್ದು, 84.40 ಕ್ಯೂಸೆಕ್ ನೀರು ಸಂಗ್ರಹವಾಗುತ್ತದೆ.
ಬಡದಾಳ ಗ್ರಾಮದಲ್ಲಿ 9.9 ಎಕರೆ ವಿಸ್ತೀರ್ಣದ ಅತೀ ಸಣ್ಣ ಕೆರೆ ಇದ್ದು, 1.25 ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ತಾಲೂಕಿನ 12 ಕೆರೆಗಳು 939.175 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಕೆರೆಗಳಲ್ಲಿ ಒಟ್ಟು 274.5 ಕ್ಯೂಸೆಕ್ಸ್ ನೀರು ಸಂಗ್ರಹವಾಗುತ್ತದೆ. ಆದರೆ ಮಳೆ ಕೊರತೆಯಿಂದಾಗಿ ಅಫಜಲಪುರ ಪಟ್ಟಣದ ಕೆರೆ ಹೊರತುಪಡಿಸಿ ಉಳಿದ ಎಲ್ಲ ಕೆರೆಗಳು ಬತ್ತಿ ಹೋಗಿವೆ.
ಅಫಜಲಪುರ ಕೆರೆಯಲ್ಲಿ ನೀರು ನಿಲ್ಲಲು ಭೀಮಾ ಬ್ಯಾರೇಜ್ ಕಾರಣವಾಗಿದ್ದು ಆಗಾಗ ಬ್ಯಾರೇಜ್ ನೀರನ್ನು ಕಾಲುವೆ ಮೂಲಕ ನೀರು ತುಂಬಿಸಲಾಗುತ್ತದೆ. ಹೀಗಾಗಿ ಅಫಜಲಪುರ ಕೆರೆಯಲ್ಲಿ ನೀರಿದೆ. ಉಳಿದ ಕೆರೆಗಳು ಹನಿ ನೀರಿಲ್ಲದೆ ಸೊರಗಿ ಹೋಗಿವೆ.
ಮೇವು ಬ್ಯಾಂಕ್ ಸ್ಥಾಪಿಸಿ: ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ. ಹಣ ನೀಡಿದರೂ ಮೇವು ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಜಾನುವಾರುಗಳನ್ನು ಮಾರಿ ಗುಳೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಸಂಬಂಧಪಟ್ಟವರು ಎಚ್ಚೆತ್ತು ದನಕರುಗಳಿಗೆ ಮೇವು, ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.
ಬರಗಾಲ ಇರುವುದರಿಂದ ಜನ ಗುಳೆ ಹೋಗಲು ಮುಂದಾ ಗುತ್ತಿದ್ದಾರೆ. ಗುಳೆ ತಪ್ಪಿಸಲು ನರೇಗಾ ಅಡಿಯಲ್ಲಿ ಕೂಲಿ ಕೆಲಸ ನೀಡಲಾಗುತ್ತಿದೆ. ಕೆರೆ ಕುಂಟೆಗಳ ಹೂಳೆತ್ತುವುದರಿಂದ ಜನರಿಗೆ ಕೆಲಸ ಸಿಗುತ್ತಿದೆ. ಅಲ್ಲದೆ ಕೆರೆಯಲ್ಲಿನ ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ನೀರು ನಿಂತು ಅಂತರ್ಜಲ ಹೆಚ್ಚಳವಾಗಲಿದೆ.
ಆನಂದಕುಮಾರ, ಪ್ರಭಾರಿ ಎಇ, ಸಣ್ಣ ನೀರಾವರಿ ಇಲಾಖೆ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.