ಅಫಜಲಪುರ: ಹಂದಿಗಳ ಕಾಟಕ್ಕೆ ಬೇಸತ್ತ ಸಾರ್ವಜನಿಕರು
Team Udayavani, Dec 1, 2019, 9:57 AM IST
ಅಫಜಲಪುರ: ಸ್ವಚ್ಛತೆಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಪಟ್ಟಣ ಮಾತ್ರ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.ಪಟ್ಟಣದ ಬಹುತೇಕ ಬಡಾವಣೆಗಳು ಸೇರಿದಂತೆ ಸಾರ್ವಜನಿಕ ಉದ್ಯಾನ, ಸರ್ಕಾರಿಆಸ್ಪತ್ರೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.
ಪುರಸಭೆಯಿಂದ ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ. ಸಾರ್ವಜನಿಕರು ಕಸವನ್ನು ರಸ್ತೆ ಮೇಲೆ ಎಸೆಯುತ್ತಿದ್ದಾರೆ. ಇದರಿಂದ ಹಂದಿಗಳು ಮನೆ ಮಾಡಿಕೊಂಡುಕಸ, ಚರಂಡಿಯಲ್ಲಿ ಒದ್ದಾಡಿ ಇನ್ನಷ್ಟು ಹೊಲಸು ಎಬ್ಬಿಸುತ್ತಿವೆ. ಪಟ್ಟಣದ ಸಾರ್ವಜನಿಕ ಉದ್ಯಾನವನ್ನುಪುರಸಭೆಯಿಂದ ನಿರ್ಮಿಸಲಾಗಿದೆ. ಸಾರ್ವಜನಿಕ ಉದ್ಯಾನದಲ್ಲಿ ಜನರು ಕುಳಿತು ವಿಶ್ರಾಂತಿ ಪಡೆಯುವಂತಿಲ್ಲ. ಏಕೆಂದರೆ ಉದ್ಯಾನವನದ ತುಂಬಾ ಹಂದಿಗಳೇ ಕಾಣುತ್ತಿರುತ್ತವೆ.ಸರ್ಕಾರಿ ಆಸ್ಪತ್ರೆಯಲ್ಲೂ ಹಂದಿಗಳು ಮನೆ ಮಾಡಿಕೊಂಡಿವೆ. ಆಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆ ಎದುರಿನ ಉದ್ಯಾನದಲ್ಲಿ ಕುಳಿತುಕೊಳ್ಳಬೇಕಾದರೆ ಹಂದಿಗಳ ಪಕ್ಕದಲ್ಲೇ ಕುಳಿತುಕೊಳ್ಳಬೇಕಾದ ದುಸ್ಥಿತಿ ಇಲ್ಲಿದೆ.
ಪುರಸಭೆ ಜಾಣ ಕುರುಡುತನ: ಪಟ್ಟಣದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಮಸ್ಯೆ ನಿವಾರಣೆಗೆಪುರಸಭೆ ಮುಂದಾಗುತ್ತಿಲ್ಲ. ನೈರ್ಮಲ್ಯ ಸಮಸ್ಯೆ ಇರುವ ಕಡೆ ಬ್ಲೀಚಿಂಗ್ ಪೌಡರ್ ಬಳಸುತ್ತಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡುತ್ತಿಲ್ಲ, ಚರಂಡಿಗಳ ಸ್ವತ್ಛತೆ ಮರೆತಿದ್ದಾರೆ. ಪಟ್ಟಣಕ್ಕೆ ಸಚಿವರು, ಅಧಿ ಕಾರಿಗಳು ಬಂದಾಗ ಮಾತ್ರ ಫಾಗಿಂಗ್ ಮಾಡುತ್ತಿದ್ದು, ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಹಾರಿಕೆ ಉತ್ತರ ನೀಡುವಲ್ಲಿ ಕಾಲ ಕಳೆಯುತ್ತಿದ್ದಾರೆ.
ವಾರ್ಡ್ ನಂ. 8ರಲ್ಲಿ ಕೊಳವೆ ಬಾವಿ ಕೊರೆಸಿದ್ದೇವೆ. ಆದರೆ ಜನರುಸ್ಪಂದಿಸುತ್ತಿಲ್ಲ. ಕೊಳವೆ ಬಾವಿಯಲ್ಲಿ ಕಲ್ಲು ಹಾಕಿದ್ದಾರೆ. ನೈರ್ಮಲ್ಯ ಸಮಸ್ಯೆಗೆ ವಾರದೊಳಗೆ ಪರಿಹಾರ ಕಲ್ಪಿಸಲಾಗುವುದು. ಸಾರ್ವಜನಿಕರುಸಹಕರಿಸಬೇಕು. ಕಸವನ್ನು ಪುರಸಭೆ ಕಸದ ವಾಹನದಲ್ಲಿ ಹಾಕುವ ಮೂಲಕ ನೈರ್ಮಲ್ಯ ಕಾಪಾಡುವಲ್ಲಿ ಸಹಕಾರ ನೀಡಬೇಕು. –ಅಶೋಕ ಬಿಲಗುಂದಿ, ಪುರಸಭೆ ಮುಖ್ಯಾಧಿಕಾರಿ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.