ಮತ್ತೆ ಗುಲ್ವರ್ಗ ವಿವಿ ಪರೀಕ್ಷೆ ಅವಾಂತರ
Team Udayavani, May 22, 2018, 10:49 AM IST
ಕಲಬುರಗಿ: ಸತತ ಪ್ರಶ್ನೆ ಪತ್ರಿಕೆ ಬಹಿರಂಗದಿಂದ ಕಂಗೆಟ್ಟಿದ್ದ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಹೇಗೆ ನಡೆಸಬೇಕೆಂಬುದೇ ತಿಳಿಯದಂತಾಗಿದೆ. ಇದಕ್ಕೆ ಸೋಮವಾರ ನಡೆಯಬೇಕಿದ್ದ ಬಿಎಸ್ಸಿ ದ್ವಿತೀಯ ಸೆಮಿಸ್ಟಾರ್‌ನ ಕನ್ನಡ ಪತ್ರಿಕೆ ದಿಢೀರನೇ ಮುಂದೂಡಿಕೆಯಾಗಿರುವುದೇ ಸಾಕ್ಷಿಯಾಗಿದೆ.
ಪ್ರಶ್ನೆ ಪತ್ರಿಕೆ ಮುದ್ರಣವಾಗದ ಕಾರಣ ಪರೀಕೆ ಮುಂದೂಡಲಾಗಿದೆ ಎಂದು ವಿವಿ ಪರೀಕ್ಷಾಂಗದ ಅಧಿಕಾರಿಗಳು ಹೇಳುತ್ತಿದ್ದರೆ, ಇದಕ್ಕೆ ಪ್ರಶ್ನೆ ಪತ್ರಿಕೆ ಬಹಿರಂಗ ಇಲ್ಲವೇ ಮತ್ತೂಂದು ಕಾರಣ ಎನ್ನಲಾಗುತ್ತಿದೆ.
ಕಳೆದ ವರ್ಷ ಬಿಕಾಂ ಮೂರನೇ ಸೆಮಿಸ್ಟಾರ್‌ನ ಎರಡು ಪತ್ರಿಕೆಗಳು ಹಾಗೂ ಅದರ ಹಿಂದಿನ ವರ್ಷ ಬಿಇಡಿ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿರುವುದು ಸೇರಿದಂತೆ ವರ್ಷಂಪ್ರತಿ ಪರೀಕ್ಷೆಯಲ್ಲಿ ಒಂದಿಲ್ಲ ಒಂದು ಅವಾಂತರ ಸೃಷ್ಟಿಯಾಗಿ ಇಡೀ ವಿವಿಗೆ ಸವಾಲು ಹಾಕುತ್ತಿರುವ ಘಟನೆಗಳು ಪದೇ-ಪದೇ ನಡೆಯುತ್ತಿರುವುದು ವಿವಿಯ ನೈತಿಕತೆ ಪ್ರಶ್ನಿಸುವಂತಾಗಿದೆ.
ಪದೇ ಪದೇ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಳ್ಳುವ ದಂಧೆಗೆ ಕಡಿವಾಣ ಹಾಕುವ ಜತೆಗೆ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ವ್ಯವಸ್ಥೆ ತೊಗಲಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪ್ರಸಕ್ತವಾಗಿ ಕ್ಲಸ್ಟರ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ಕ್ಲಸ್ಟರ್ ಪದ್ಧತಿಗೆ ಬಹುತೇಕ ಖಾಸಗಿ ಕಾಲೇಜುಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ಜತೆಗೆ ಪರೀಕ್ಷೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವುದು ಪ್ರಜ್ಞಾವಂತ ಸಮಾಜ ಆತ್ಮಾವಲೋಕನ ಮಾಡುವಂತಾಗಿದೆ.
ಕ್ಲಸ್ಟರ್ ಪರೀಕ್ಷೆ ಸುಸೂತ್ರವಾಗಿ ನಡೆದರೆ ಎಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಾಸಾಗುವುದಿಲ್ಲವೋ ಎನ್ನುವ ಆತಂಕದಲ್ಲಿ ಪರೀಕ್ಷೆಗೆ ಒಂದಿಲ್ಲ ಒಂದು ರೀತಿಯಲ್ಲಿ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿಷ್ಠಿತ ಕಾಲೇಜುಗಳು ಹಾಗೂ ಸರ್ಕಾರಿ ಕಾಲೇಜುಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಸರಿಯಾಗಿ ತರಗತಿಗಳನ್ನು ನಡೆಸದೆ ಹಾಗೂ ಪಾಸ್ ಮಾಡಿಕೊಡುತ್ತೇವೆ ಎನ್ನುವ ಭರವಸೆಯೊಂದಿಗೆ ಪ್ರವೇಶಾತಿ ಪಡೆಯುವ ಕೆಲ ಕಾಲೇಜುಗಳು ಕ್ಲಸ್ಟರ್ ಪದ್ಧತಿಗೆ ವಿರೋಧ ವ್ಯಕ್ತಪಡಿಸುತ್ತಿವೆ.
ಅಲ್ಲದೇ ಕ್ಲಸ್ಟರ್ ಪದ್ಧತಿ ಉಲ್ಲಂಘನೆ (ವೈಲೆನ್ಸ್ ) ನಿಯಮದಡಿ ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ರೂ. ದಂಡ ಕಟ್ಟಿಸಿ ತಮ್ಮ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲಾರಂಭಿಸಿದ್ದನ್ನು ನೋಡಿದರೆ ಪರೀಕ್ಷೆ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಕೊನೆ ಘಳಿಗೆಯಲ್ಲಿ ಪರೀಕ್ಷೆಗೆ ಕೂಡಲಿಕ್ಕಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಕ್ಲಸ್ಟರ್ ವೈಲೆನ್ಸ್ ನಿಯಮವೊಂದನ್ನು ರೂಪಿಸಲಾಗಿದೆ. ಇದೇ ನಿಯಮದಡಿ ಬಹುತೇಕ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದು ಕ್ಲಸ್ಟರ್ ಪದ್ಧತಿಯನ್ನೇ ಅಣಕಿಸುವಂತಾಗಿದೆ.
ಪರೀಕ್ಷೆ ಸೂಸುತ್ರವಾಗಿ ನಡೆಯದಿದ್ದಕ್ಕೆ ಹಾಗೂ ಕ್ಲಸ್ಟರ್ ಪದ್ಧತಿಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ಮುಂದಿನ ವರ್ಷದಿಂದ ಪ್ರವೇಶಾತಿ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಪಾಸು ಮಾಡುವ ನಿರ್ಣಯವನ್ನು ವಿವಿ ಸಿಂಡಿಕೆಟ್ -ಸಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರಂತೆ. ಇದನ್ನು ನೋಡಿದರೆ ಪರೀಕ್ಷೆ ಸುಸೂತ್ರವಾಗಿ ನಡೆಯದೇ ಅಡ್ಡ ದಾರಿಯಲ್ಲಿ ನಡೆದಿರುವುದು ನಿರೂಪಿಸುತ್ತದೆ.
ಒಟ್ಟಾರೆ ಪ್ರತಿ ವರ್ಷ ಪರೀಕ್ಷೆ ಸಮಯದಲ್ಲಿ ಒಂದಿಲ್ಲ ಒಂದು ಅವಾಂತರ ಸೃಷ್ಟಿಸುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸಲು ಯೋಗ್ಯವೇ ಎನ್ನುವ ಪ್ರಶ್ನೆ ಹುಟ್ಟು ಹಾಕಿ¨
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.