![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 20, 2020, 10:51 AM IST
ಆಳಂದ: ಕೊರೊನಾ ವೈರಸ್ ಹರಡದಿರಲು ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಂಗಡಿ, ಮುಗ್ಗಟ್ಟನ್ನು ಬಂದ್ ಮಾಡಿದ್ದರಿಂದ ಹಾಗೂ ಗುರುವಾರ ಸಂತೆ ರದ್ದು ಮಾಡಿದ್ದರಿಂದ ಕೋಟ್ಯಂತರ ರೂ.ಗಳ ಆರ್ಥಿಕ ವಹಿವಾಟಿನಲ್ಲಿ ನಷ್ಟ ಉಂಟಾಗಿದ್ದು, ಜನ- ಜೀವನ ಸಂಕಷ್ಟದಿಂದ ಬಳಲುವಂತಾಗಿತ್ತು.
ಬೆಳಗ್ಗೆಯಿಂದಲೇ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಟ್ಟಣಕ್ಕೆ ಬರುತ್ತಿದ್ದ ವ್ಯಾಪಾರಿಗಳನ್ನು ದೂರದಲ್ಲೇ ತಡೆದು ವಾಪಸ್ ಕಳುಹಿಸಲಾಯಿತು. ತರಕಾರಿ, ಬಟ್ಟೆ, ದವಸ-ಧಾನ್ಯಗಳ ಸಂತೆ ತೆರೆಯದಂತೆ ಪುರಸಭೆ ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.
ಪಟ್ಟಣ ಒಳ ಹಾಗೂ ಹೊರಭಾಗದಲ್ಲಿ ಸಂಪೂರ್ಣ ಬಂದ್ ಆಗಿದ್ದರೂ ಜನರ ಓಡಾಟ ಮಾತ್ರ ಎಂದಿನಂತೆ ಇತ್ತು. ಔಷಧಿ ಅಂಗಡಿ, ಆಸ್ಪತ್ರೆಗಳನ್ನು ಹೊರತು ಪಡಿಸಿ ಕಿರಾಣಿ, ತರಕಾರಿ, ಹೋಟೆಲ್ ಮುಚ್ಚಿದ್ದರಿಂದ ಹಾಲು, ಹಣ್ಣು, ತರಕಾರಿ, ಚಹಾ, ಗುಟ್ಕಾ ಸೇರಿದಂತೆ ದಿನ ಬಳಕೆ ವಸ್ತುಗಳು ದೊರೆಯದೆ ಜನರು
ಪರದಾಡಿದರು.
ಮತ್ತೊಂದೆಡೆ ಮಹಾರಾಷ್ಟ್ರಕ್ಕೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿತ್ತು. ಅಲ್ಲದೇ ಖಾಸಗಿ ಜೀಪು, ಬಸ್‌ಗಳು ಸಂಚರಿಸಿದಂತೆ ನೋಡಿಕೊಳ್ಳಬೇಕು. ಮಂದಿರ, ಮಸೀದಿಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಹೆಚ್ಚಿನ ಜನರು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳದೇ ಇರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದಾರೆ.
ಸಿಪಿಐ ಶಿವಾನದ ಗಾಣಿಗರ್, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ, ತಾ.ಪಂ ಇಒ ಡಾ| ಸಂಜಯ ರೆಡ್ಡಿ, ಆರೋಗ್ಯಾಧಿಕಾರಿ ಡಾ| ಜಿ.ಅಭಯಕುಮಾರ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಮಡಿವಾಳ ಮತ್ತಿತರರು ಸಭೆಯಲ್ಲಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.