ಭೈರಾಮಡಗಿಯಲ್ಲಿ ಅಂಬೇಡ್ಕರ್ ಪಂಚ ಲೋಹ ಮೂರ್ತಿ ಸ್ಥಾಪನೆ
Team Udayavani, Nov 18, 2020, 5:03 PM IST
ಕಲಬುರಗಿ: ರಾಷ್ಟ್ರ ನಾಯಕರನ್ನು ಹಾಗೂ ತತ್ವಜ್ಞಾನಿಗಳನ್ನು ವರ್ಗಕ್ಕೆ ಹಾಗೂ ಪ್ರಾದೇಶಿಕತೆಗೆ ಸಿಮೀತ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ಅವರ ನೂತನ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್, ರವೀಂದ್ರನಾಥ ಟ್ಯಾಗೋರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಇತರರನ್ನು ಅವರ ವರ್ಗಕ್ಕೆ ಹಾಗೂ ಆಯಾ ಭಾಗಕ್ಕೆ ಸಿಮೀತ ಮಾಡಲಾಗಿದೆ ಎಂದರು.
ಬುದ್ಧನ ತತ್ವ ತಿಳಿದುಕೊಂಡರೆ, ಬಸವಣ್ಣ ಹೇಳಿದ ಮಾತು ಕೇಳಿದ್ದರೆ ಹಾಗೂ ಡಾ| ಅಂಬೇಡ್ಕರ್ ರಚಿಸಿದ ಸಂವಿಧಾನಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ ದೇಶದಲ್ಲಿಂದು ಒಡಕಿನ ಮಾತುಗಳುಕೇಳಿ ಬರುತ್ತಿರಲಿಲ್ಲ. ಆದ್ದರಿಂದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಡಾ| ಅಂಬೇಡ್ಕರ್ ಪ್ರತಿಮೆ ಸಾರ್ಥಕತೆ ಪಡೆಯಬೇಕಾದರೆ ಅವರ ತತ್ವಗಳನ್ನುಅನುಸರಿಸಿದಾಗ ಮಾತ್ರ ಸಾಧ್ಯ. ಲೋಕಸಭೆ ಚುನಾವಣೆಯಲ್ಲಿ ಹಿರಿಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ದೊಡ್ಡ ಅನ್ಯಾಯ ಮಾಡಿಕೊಂಡಿದ್ದೇವೆ. ಗೆದ್ದಿದ್ದರೆಈ ಭಾಗಕ್ಕೆ ಹಲವು ಅಭಿವೃದ್ಧಿ ಕಾರ್ಯಗಳು ಬರುತ್ತಿದ್ದವು ಎಂದರು.
ಸಾನ್ನಿಧ್ಯ ವಹಿಸಿದ್ದ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಮಹಾ ಸ್ವಾಮೀಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಒಂದು ವರ್ಗಕ್ಕೆಸಿಮೀತವಾಗಿಲ್ಲ. ಬುದ್ಧ ಶಾಂತಿ-ಸಮಾಧಾನಕಲಿಸಿದ್ದರೆ, ಬಸವಣ್ಣ ಸಮಾಜಕ್ಕೆ ಕ್ರಾಂತಿ ನೀಡಿದ್ದರೆ, ಡಾ| ಅಂಬೇಡ್ಕರ್ ಜಾÒನದೀಪ ಹಚ್ಚಿದ್ದಾರೆ. ಇವರ ತತ್ವ, ಮಾರ್ಗದರ್ಶನ ಎಲ್ಲ ವರ್ಗಕ್ಕೆ ಸಂಬಂಧಿಸಿದೆಯಲ್ಲದೇ ಇಡೀ ಮಾನವ ಸಂಕುಲಕ್ಕೆ ಜ್ಞಾನದೀವಿಗೆಯಾಗಿದೆ ಎಂದರು.
ಸಮಾಜ ಸೇವಕ ಜೆ.ಎಂ. ಕೊರಬು ಮಾತನಾಡಿ, ಚುನಾವಣೆಯಲ್ಲಿ ಅನ್ಯ ವಿಷಯಗಳತ್ತ ಗಮನ ಕೊಡದೇ ಅಭಿವೃದ್ಧಿ ವಿಷಯಗಳ ಗಮನ ಕೊಟ್ಟಿದ್ದೆಯಾದರೆ ಸರ್ವ ನಿಟಿxನಲ್ಲೂ ಅಭಿವೃದ್ಧಿ ಆಗುತ್ತದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸರ್ಕಾರ ಅತಿವೃಷ್ಟಿಗೆ ಪರಿಹಾರವಾಗಿ ನಯಾ ಪೈಸೆ ಕೊಟ್ಟಿಲ್ಲ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಶೋಷಿತರು ತೀವ್ರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಕಷ್ಟಕ್ಕೆ ನಾಂದಿ ಹಾಡಬೇಕೆಂದರು.
ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ತಾ.ಪಂ ಉಪಾಧ್ಯಕ್ಷ ಸಿದ್ಧರಾಮ ಹೊನ್ನಿಕೇರಿ, ಶಿವಕುಮಾರ ನಾಟಿಕಾರ, ಮಹಾಂತೇಶ ಪಾಟೀಲ, ಗುರುಶಾಂತ ಪಟ್ಟೇದಾರ, ರಾಜಕುಮಾರ ಕಪನೂರ, ರಾಜೇಂದ್ರ ಪಾಟೀಲ, ಜಿ.ಪಂ ಸದಸ್ಯರಾದ ಶರಣಗೌಡ ಪಾಟೀಲ, ವಿ.ಕೆ. ಸಲಗರ, ದಿಲೀಪ ಪಾಟೀಲ, ಸಿದ್ದರಾಮ ಪ್ಯಾಟಿ, ಶಿವಾನಂದ ಪಾಟೀಲ ಮರತೂರ, ಪ್ರಮುಖರಾದ ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಡಾ| ಎಂ.ಎಸ್. ಜೋಗದ ಮುಂತಾದವರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶರಣ ಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಡಾ| ಅಂಬೇಡ್ಕರ್ ಜೀವನ ಚರಿತ್ರೆಯನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದರು. ಶರಣಬಸಪ್ಪ ಚಕ್ರವರ್ತಿ ನಿರೂಪಿಸಿದರು. ಮಚೇಂದ್ರ ಎಸ್. ಅಳ್ಳಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.