ಅಂಬೇಡ್ಕರ್ ಮಹಾನ್ ಚೇತನ: ವಗ್ಗನ್
Team Udayavani, Feb 7, 2018, 11:23 AM IST
ಚಿತ್ತಾಪುರ: ಭಾರತ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನ, ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಯುವಪೀಳಿಗೆ ಸಮರ್ಪಣಾ ಭಾವದಿಂದ ದುಡಿಯಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ವಿಠ್ಠಲ್ ವಗ್ಗನ್ ಹೇಳಿದರು.
ತಾಲೂಕಿನ ಗುಂಡಗುರ್ತಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಸಂವಿಧಾನ ಜಾರಿಗೆ ಬಂದ ದಿನದ ಅಂಗವಾಗಿ ಭಾರತೀಯ ದಲಿತ ಪ್ಯಾಂಥರ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಶ್ರೇಷ್ಠ ಮಾನವತಾವಾದಿ, ಜನಪರ ಚಿಂತಕ ಡಾ| ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ದೇಶದ ಪ್ರಗತಿಗೆ ಯುವ ಜನಾಂಗದ ಕನಸುಗಳನ್ನು ಕಟ್ಟಿಕೊಳ್ಳಬೇಕಿದೆ. ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಒಂದು ಗುಂಪಿನ ನಾಯಕರಂತೆ ಕಾಣುತ್ತಿರುವುದು ದುರಂತ. ಮಹಾನ್ ಚೇತನಗಳ ಜಯಂತಿಗಳಲ್ಲಿ ಕುಡಿದು ಕುಣಿಯುವುದು ಸಭ್ಯತೆಯಲ್ಲ ಎಂದರು. ಡಾ| ಬಿ.ಆರ್. ಅಂಬೇಡ್ಕರ್ ಮೀಸಲಾತಿ ಮೂಲಕ ಅಸಮಾನತೆ ತೊಡೆದು ಹಾಕಲು ಮುಂದಾದರು.
ಆದರೆ ಅದು ಇಂದಿಗೂ ಸಂಪೂರ್ಣ ಸಾಧ್ಯವಾಗದೇ ಮೀಸಲಾತಿ ಆರ್ಥಿಕ ಸದೃಢರಾದ ದಲಿತರ ಕೈ ಸೇರುತ್ತಿರುವುದು ಸರಿಯಲ್ಲ. ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದರೂ ಅಂಬೇಡ್ಕರ್ ಅವರ ಚಿಂತನೆ ಸಾಮಾಜಿಕ ಅಸಮಾನತೆ ಸಂಪೂರ್ಣ ತೊಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಅವರ ಚಿಂತನೆಗಳನ್ನು ಮರೆತಿರುವುದು ದುರಂತ. ಆರ್ಥಿಕವಾಗಿ ಹಿಂದುಳಿದವರು ಅಧ್ಯಯನಕ್ಕೆ ಒತ್ತು ನೀಡಿ, ಜ್ಞಾನ ವೃದ್ಧಿಸಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ಆಲ್ದಾರ್ಥಿ, ಕಾವೇರಿ ಗುತ್ತೇದಾರ, ಶಿಕ್ಷಕರಾದ ಲೋಕೇಶ, ಜಗದೀಶ, ಸಿದ್ರಾಜ ಮಾತನಾಡಿದರು. ಭಾರತೀಯ ದಲಿತ ಪ್ಯಾಂಥರ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಗಂಗಾಧರ ಮಾಡಬೂಳ ಮಾತನಾಡಿದರು. ಗುಂಡಗುರ್ತಿ ಗ್ರಾಪಂ ಅಧ್ಯಕ್ಷ ರೋಹಿತ್ ಎಂ. ಗಂಜಗೇರಿ ಉದ್ಘಾಟಿಸಿದರು.
ಭಾರತೀಯ ದಲಿತ ಪ್ಯಾಂಥರ್ ವಿಭಾಗೀಯ ಉಪಾಧ್ಯಕ್ಷ ಕಲ್ಯಾಣರಾವ ಡೋಣ್ಣೂರ್, ಜಿಲ್ಲಾಧ್ಯಕ್ಷ ರಮೇಶ ಚಿಮ್ಮಾಇದಲಾಯಿ, ತಾಲೂಕು ಅಧ್ಯಕ್ಷ ಕಾಶಿನಾಥ ಶೆಳ್ಳಗಿ, ರಾಹುಲ್ ಕಟ್ಟಿಮನಿ, ವಿಶ್ವನಾಥ, ನಾಗರಾಜ ಗಾಯಕವಾಡ, ವಿಜಯಲಕ್ಷ್ಮೀ, ದೇವು ತಳವಾರ, ಶಿವಕುಮಾರ ಚಿಂತಕೋಟಿ, ಕಾಶಿನಾಥ ವಚ್ಚಾ, ಮಹೇಶ ಓಂಕಾರ ಇದ್ದರು. ಶಿಕ್ಷಕ ಲೋಕೇಶ ಸ್ವಾಗತಿಸಿದರು. ಉಮೇಶ ಸಜ್ಜನ್‌ಕರ್ ನಿರೂಪಿಸಿ, ವಂದಿಸಿದರು.
ಡಾ| ಅಂಬೇಡ್ಕರ್ ಅವರು ಕತ್ತಲಲ್ಲಿ ಓದಿ ಇಡೀ ಜಗತ್ತಿಗೆ ಬೆಳಕನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅದೇ ರೀತಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಹೈದ್ರಾಬಾದ್ ಕರ್ನಾಟಕಕ್ಕೆ 371ನೇ (ಜೆ) ಕಲಂ ಜಾರಿಗೆ ತಂದು ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಟ್ಟು ಮಹಾನ್ ನಾಯಕರೆನಿಕೊಂಡಿದ್ದಾರೆ. ಆದ್ದರಿಂದ ಈ ಭಾಗದ ವಿದ್ಯಾರ್ಥಿಗಳು 371ನೇ (ಜೆ) ಕಲಂನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡಿಸಿಕೊಂಡು ಉನ್ನತ ಉದ್ದೆಗಳನ್ನು ಪಡೆದುಕೊಳ್ಳಬೇಕು.
ಮಲ್ಲಪ್ಪ ಹೊಸ್ಮನಿ, ಭಾರತೀಯ ದಲಿತ ಪ್ಯಾಂಥರ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.