ತ್ರಿವಳಿ ತಲಾಖ್‌ ಮಸೂದೆ ರದ್ದುಗೊಳಿಸಿ: ಪಟೇಲ್‌

Team Udayavani, Jan 13, 2018, 11:18 AM IST

gul-6.jpg

ಚಿತ್ತಾಪುರ: ಕೇಂದ್ರ ಸರ್ಕಾರಕ್ಕೆ ಅಲ್ಪಸಂಖ್ಯಾತರ ಕುರಿತು ವಿಶೇಷ ಕಾಳಜಿ ತೋರಿಸುತ್ತಿದ್ದು, ಅವರಿಗೆ ಒಳ್ಳೆಯದು ಮಾಡಬೇಕು ಎನ್ನುವ ಮನಸ್ಸಿದ್ದಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗೆ ಉದ್ಯೋಗ ಅವಕಾಶ, ಶಿಕ್ಷಣ ಸಿಗಲು ವಿಶೇಷ ಕಾನೂನು ಜಾರಿ ಮಾಡಿ ಎಂದು ಯುನೈಟೆಡ್‌ ಮುಸ್ಲಿಂ ಪೋರಂ ಅಧ್ಯಕ್ಷ ಮುಕ್ತಾರ ಪಟೇಲ್‌ ಹೇಳಿದರು.

ಪಟ್ಟಣದಲ್ಲಿ ತ್ರಿವಳಿ ತಲಾಖ್‌ ಕುರಿತು ನಡೆದ ಬೃಹತ್‌ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಮುಸ್ಲಿಂ ಸಮುದಾಯದವರು ತೀರ ಬಡತನ ರೇಖೆಗಿಂತ ಕೆಳಗಿದ್ದು, ಒಪ್ಪತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ.  ಇಂತಹವರ ವಿರುದ್ಧ ಕಾಳಜಿ ತೊರದೇ ಮುಸ್ಲಿಂ ಮಹಿಳೆಯರಿಗೆ ಮಾರಕವಾಗುವ ಕಾನೂನು ಮಂಡನೆಗೆ ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.

ತ್ರಿವಳಿ ತಲಾಖ್‌ ಮಸೂದೆ ಮಂಡನೆಯಿಂದ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ. ತ್ರಿವಳಿ ತಲಾಖ್‌ ಜಾರಿಯಿಂದ ಅಶಿಕ್ಷಕರಾಗಿರುವ ನಮ್ಮ ಸಮಾಜವು ಮತ್ತಷ್ಟು ತೊಂದರೆಗೆ ಒಳಗಾಗುತ್ತದೆ. ಮುಸ್ಲಿಂ  ಮುದಾಯದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಸದಸ್ಯ ಶಿವಾಜಿ ಕಾಶಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ಬಾಬು ಕಾಶಿ, ಜಿಲ್ಲಾ ಹೆಲ್ಪಲೈನ್‌ ಅಧ್ಯಕ್ಷ ಇಬ್ರಾಹಿಂ ಮಾತನಾಡಿದರು. ನಂತರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಮಲ್ಲೇಶಾ ತಂಗಾ ಅವರಿಗೆ ಸಲ್ಲಿಸಿದರು.

ಪುರಸಭೆ ಉಪಾಧ್ಯಕ್ಷ ಮಹ್ಮದ ರಸೂಲ್‌ ಮಸ್ತಫಾ, ಪುರಸಭೆ ಸದಸ್ಯರಾದ ಶಿವಕಾಂತ ಬೆಣ್ಣೂರಕರ್‌, ಜಫರುಲ್‌ ಹಸನ್‌, ಎಂ.ಎ. ರಶೀದ, ಶೇಖ ಬಬ್ಲೂ, ಡಾ| ಅಬ್ದುಲ್‌ ಕರೀಂ, ಫಾರೂಕ್‌ ಡಕಾರೆ, ರಶೀದ್‌ ಫಠಾಣ, ಅಯ್ಯುಬ್‌ ಕೇಬಲ್‌, ಎಂ.ಡಿ. ವಸೀಂಖಾನ್‌, ರಫಿಕ್‌ ಲಿಂಕ್‌, ಮಹ್ಮದ್‌ ಮೋಸಿನ್‌, ಮಹ್ಮದ ಇಬ್ರಾಹಿಂ ಶೇಖ್‌, ನಜೀರ್‌ ಆಡಕಿ, ಸಲೀಂ ಇಟಗಾ, ಭೀಮರಾಯ ಹೊತಿನಮಡಿ, ಅಷ್ಪಾಕ್‌ ಅಹ್ಮದ, ಅಜುಂ ಖಾಜಿ, ಎಂ.ಎ ಕಲೀಂ, ಮುಸ್ತಾಕ್‌ ಮೌಲಾನಾ, ಯಾಸಿನ್‌ ಮೌಲಾನಾ, ವಾಹಬ್‌ ಮೌಲಾನಾ ಇದ್ದರು. 

ಟಾಪ್ ನ್ಯೂಸ್

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Two more children test positive for HMP virus: Number of cases in the country rises to 7

HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌: ದೇಶದಲ್ಲಿ 7ಕ್ಕೇರಿದ ಕೇಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.