ಅಳಿದುಳಿದವುಗಳಲ್ಲಿ ಅಮ್ಮ ಪ್ರಶಸ್ತಿ ಶ್ರೇಷ್ಠ: ವಿಶುಕುಮಾರ
Team Udayavani, Nov 28, 2017, 10:40 AM IST
ಸೇಡಂ: ವಾಸ್ತವಿಕತೆ ಅರಿಯುವ ಮನೋಭಾವ ಕಡಿಮೆಯಾಗುತ್ತಿರುವ ದಿನಗಳಲ್ಲಿ ಅಳಿದುಳಿದ ಪ್ರಶಸ್ತಿಗಳಲ್ಲಿ ಅಮ್ಮ ಪ್ರಶಸ್ತಿ ಶ್ರೇಷ್ಠ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ ಹೇಳಿದರು.
ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ಏರ್ಪಡಿಸಿದ್ದ 17ನೇ ವರ್ಷದ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು
ಮಾತನಾಡಿದರು.
ಇಡೀ ದೇಶದಲ್ಲಿ ನೀಡಲ್ಪಡುವ ಪ್ರಶಸ್ತಿಗಳ ಪೈಕಿ ಬಹುತೇಕವು ಲಾಬಿಯಿಂದ ಕೂಡಿರುತ್ತವೆ. ಇನ್ನೂ ಕೆಲವು ಹಣಕ್ಕೆ ಮಾರಾಟವಾಗುತ್ತವೆ. ಇವುಗಳ ಮಧ್ಯೆ ನಿಜವಾದ ಕಲೆಯುಳ್ಳ ಕಲಾವಿದರು, ಸಾಹಿತಿಗಳು, ಕವಿಗಳಿಗೆ ಪ್ರೋತ್ಸಾಹ ಇಲ್ಲವಾದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲೆಯನ್ನು ಪ್ರಾಮಾಣಿಕ ರೀತಿಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಮ್ಮ ಪ್ರಶಸ್ತಿ ಉತ್ತಮವಾದುದು. ಪ್ರಶಸ್ತಿಗಳು ಶಾಶ್ವತವಲ್ಲ. ಆದರೆ ಅದನ್ನು ಪಡೆಯಲು ಮಾಡಿದ ಸೇವೆ ಶಾಶ್ವತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ ನೆಲ, ಜಲ ಮತ್ತು ಭಾಷೆ ಉಳಿಸಲು ಅನೇಕ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿದರು. ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸಮನಿ, ರಾಜಗೋಪಾಲರೆಡ್ಡಿ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಇದ್ದರು.
ಗೌರವ ಪುರಸ್ಕಾರ: ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಡಾ| ಚನ್ನಣ್ಣ ವಾಲಿಕಾರ, ಎ. ರಮೇಶ ಉಡುಪು, ಡಾ| ಎಸ್.ಎಸ್. ಗುಬ್ಬಿ, ಡಾ| ರಮೇಶ ಐನಾಪುರ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು.
ರಂಗಕರ್ಮಿ ಪ್ರಭಾಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿಯ ಕಿರಣ ಪಾಟೀಲ, ಶ್ರವಣಕುಮಾರ ಮಠ, ರೆಹಮಾನ್ ಮಸ್ಕಿ ಅಮ್ಮನ ಕುರಿತು ಹಾಡು ಹಾಡಿದರು. ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ವಂದಿಸಿದರು.
ನಾಲ್ವರಿಗೆ ಪ್ರದಾನ
17ನೇ ವರ್ಷದ ಅಮ್ಮ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಎಂ.ಆರ್. ಕಮಲ, ರಾಜಾರಾಂ ತಲ್ಲೂರ, ರೇಖಾ ಕಾಖಂಡಕಿ, ಎಚ್.ಆರ್. ಸುಜಾತಾ, ಗಿರೀಶ ಜಕಾಪುರೆ ಅವರಿಗೆ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.