ಹೆಲಿಕಾಪ್ಟರ್‌ಗಾಗಿ ಒಂದು ಗಂಟೆ ಕಾದ ಸಿಎಂ
Team Udayavani, Dec 18, 2017, 6:05 AM IST
ಕಲಬುರಗಿ: ಹೆಲಿಕಾಪ್ಟರ್‌ಗೆ ಸಕಾಲಕ್ಕೆ ಇಂಧನ ಬಾರದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.ಬೆಳಗ್ಗೆ 11ಕ್ಕೆ ಮಹಿಳಾ ಕೈಗಾರಿಕಾ ಪಾರ್ಕ್ ಹಾಗೂ ಎಚ್‌ಕೆಇ ಸಂಸ್ಥೆ ಸಭಾಂಗಣ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಅವರು ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣಕ್ಕೆ ತೆರಳಬೇಕಿತ್ತು. ಆದರೆ, ಹೆಲಿಕಾಪ್ಟರ್‌ಗೆ ಇಂಧನ ಇರದಿದ್ದರಿಂದ ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸುಮ್ಮನೆ ಕೂರಬೇಕಾಯಿತು.
ಹೆಲಿಕಾಪ್ಟರ್‌ಗೆ ತುಂಬಿಸುವ ಇಂಧನವನ್ನು ತೋರಣಗಲ್ಲಿನಿಂದ ವಾಹನದಲ್ಲಿ ಶನಿವಾರ ರಾತ್ರಿಯೇ ಕಳುಹಿಸಿಕೊಡಲಾಗಿತ್ತು. ಆದರೆ, ನಗರಕ್ಕೆ ಬರುವುದು ತಡವಾಯಿತು. ಕೊನೆಗೆ ಬೀದರ ಏರ್‌ಬೇಸ್‌ನಿಂದ ಇಂಧನ ತರಿಸಲಾಯಿತು. ಮಧ್ಯಾಹ್ನ 12:28ಕ್ಕೆ ಸಿಎಂ ಹುಣಸಗಿಗೆ ತೆರಳಿದರು.
ಇದರಿಂದ ಬೇಸರಗೊಂಡ ಸಿಎಂ, “ನೀವೆಲ್ಲಾ ಬೆಳಗ್ಗೆಯಿಂದ ಏನು ಮಾಡಿದ್ದೀರಿ? ಮೊದಲೇ ವಿಚಾರಣೆ ಮಾಡಬೇಕಿತ್ತು. ಹೀಗೆ ಲೋಪ ಮಾಡಿದರೆ ಹೇಗೆ’ ಎಂದು ಪ್ರಾದೇಶಿಕ ಆಯುಕ್ತ, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.