ತರಕಾರಿ ವ್ಯಾಪಾರಿಗಳಿಗೆ ಕಿರಿಕಿರಿ
Team Udayavani, Mar 8, 2019, 5:50 AM IST
ವಾಡಿ: ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತಿದ್ದು, ತರಕಾರಿ ವ್ಯಾಪಾರಿಗಳು ಪುರಸಭೆ ಕಾಂಗ್ರೆಸ್ ಆಡಳಿತದ ಕಿರಿಕಿರಿಗೆ ಬೇಸತ್ತು ಹೋಗಿದ್ದಾರೆ. ತರಕಾರಿ ಮಾರಲು ಬಂದವರನ್ನು ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಪದೇಪದೆ ಒಕ್ಕಲೆಬ್ಬಿಸುತ್ತಿರುವುದು ವ್ಯಾಪಾರಿಗಳ ಪರದಾಟಕ್ಕೆ ಕಾರಣವಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಾರದ ಸಂತೆಗೆ ಸೂಕ್ತ ಮಾರುಕಟ್ಟೆ ನಿರ್ಮಿಸಿಲ್ಲ. ವ್ಯಾಪಾರಿಗಳಿಗೆ ಮಳಿಗೆಗಳ ಸೌಲಭ್ಯವನ್ನು ಒದಗಿಸಿಲ್ಲ. ದೂರದ ಗ್ರಾಮಗಳಿಂದ ತರಕಾರಿಗಳ ಗಂಟು ಹೊತ್ತು ಬರುವ ಬೀದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ನೆರಳು ಹಾಗೂ ಶೌಚಾಲಯ ಸೌಲಭ್ಯ ಒದಗಿಸದೆ ಕಷ್ಟದ ಕೂಪಕ್ಕೆ ತಳ್ಳಿರುವ ಪುರಸಭೆ ಆಡಳಿತ, ಪುರಸಭೆ ಸದಸ್ಯರ ಒತ್ತಡಕ್ಕೆ ಮಣಿದು ವ್ಯಾಪಾರಿಗಳ ಗಂಟು-ಮೂಟೆಗಳನ್ನು ಬೀದಿಗೆಸೆದು ರಂಪಾಟ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸಿದ ಘಟನೆ ಗುರುವಾರ ಸಂತೆಯಲ್ಲಿ ನಡೆದಿದೆ.
ಗುರುವಾರ ಎಂದಿನಂತೆ ಆಜಾದ್ ವೃತ್ತ-ರೈಲು ನಿಲ್ದಾಣ ರಸ್ತೆಯಲ್ಲಿ ತರಕಾರಿ ಮಾರಾಟಕ್ಕೆ ಅಣಿಯಾಗಿದ್ದ ನೂರಾರು ಜನ ಬೀದಿ ವ್ಯಾಪಾರಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದಾರೆ. ಈ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡದೆ, ಮಾಂಸ ಮಾರುಕಟ್ಟೆ ರಸ್ತೆಯಲ್ಲಿ ವ್ಯಾಪಾರ ಮಾಡಬೇಕು.
ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಪುರಸಭೆ ಸಿಬ್ಬಂದಿ ಅಮಾನುಷವಾಗಿ ವರ್ತಿಸಿದ್ದಾರೆ. ವ್ಯಾಪಾರಿಗಳ ಗಂಟು ಮೂಟೆ ರಸ್ತೆಗೆ ಎಸೆದು ದರ್ಪ ಮೆರೆದಿದ್ದಾರೆ. ಮುಖ್ಯಾಧಿಕಾರಿಗಳು ಮತ್ತು ಪುರಸಭೆ ಸದಸ್ಯ ಗೌಸ್ ನಮಗೆ ಈ ಆದೇಶ ನೀಡಿದ್ದಾರೆ. ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಮ್ಮೂರ ಸಂತೆಗೆ ಬರಬೇಡಿ ಎಂದು ಗದರಿದ್ದಾರೆ ಎಂದು ತರಕಾರಿ ವ್ಯಾಪಾರಿಗಳಾದ ಸುವರ್ಣ ಯರಗೋಳ, ನಿಂಗಮ್ಮ, ದಾನಮ್ಮ ಶಹಾಬಾದ, ಅಂಜಮ್ಮ ರಾವೂರ, ಮಲ್ಲಮ್ಮ ಗಾಣಗಾಪುರ, ದೇವಿಂದ್ರಪ್ಪ ಅಲ್ಲಿಪುರ, ಖಾಜಾ ಮೈನೋದ್ದೀನ್ ಶಹಾಬಾದ, ಜ್ಞಾನಮಿತ್ರ ಅಲ್ಲಿಪುರ ಹಾಗೂ ಮತ್ತಿರರು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರ ಎದುರು ಅಳಲು ತೋಡಿಕೊಂಡರು.
ಪುರಸಭೆ ಆಡಳಿತದಿಂದ ತರಕಾರಿ ವ್ಯಾಪಾರಿಗಳಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಿ ಕಣ್ಣೀರು ಒರೆಸುವವರು ಯಾರೂ ಇಲ್ಲದಿರುವುದು ವಿಪರ್ಯಾಸದ ಸಂಗತಿ.
ನಾವು ಐದಾರು ವರ್ಷಗಳಿಂದ ವಾಡಿ ಸಂತೆಗೆ ಬರುತ್ತಿದ್ದೇವೆ. ಎಲ್ಲೆಂದರಲ್ಲಿ ಚರಂಡಿ ನೀರು, ಗಬ್ಬು ವಾಸನೆ ಇರುತ್ತದೆ. ಅಂತಹ ಜಾಗದಲ್ಲಿ ಕುಳಿತು ತರಕಾರಿ ಮಾರಿದರೆ ವ್ಯಾಪಾರ ಆಗುವುದಿಲ್ಲ. ಮಾಂಸ ಮಾರುಕಟ್ಟೆ ರಸ್ತೆಯಲ್ಲಿ ಕೂಡಲು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲಿ ಪರಿಸರ ಸರಿಯಾಗಿಲ್ಲ. ಮಾಂಸದ ಮೇಲೆ ಕುಳಿತ ಹಾಗೂ ಗಟಾರದೊಳಗಿನ ನೊಣಗಳು ಬಂದು ತರಕಾರಿ ಮೇಲೆ ಕೂಡುತ್ತವೆ. ಇಡೀ ದಿನ ನಾವು ಗಬ್ಬು ವಾಸನೆ ಸೇವಿಸಬೇಕು. ವ್ಯಾಪಾರವೂ ನಷ್ಟವಾಗುತ್ತದೆ. ವ್ಯಾಪಾರ ಆಗುವ ಜಾಗದಲ್ಲಿ ಕೂಡಲು ಪುರಸಭೆಯವರು ಬಿಡುತ್ತಿಲ್ಲ. ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ. ನಮಗೆ ಸೂಕ್ತ ಮಾರುಕಟ್ಟೆ ಬೇಕು. ಕಿರಿಕಿರಿ ಮುಂದುವರಿಸಿದರೆ ಜಿಲ್ಲಾಧಿಕಾರಿಗೆ ದೂರು ಕೊಡುತ್ತೇವೆ.
ಮಲ್ಲಿಕಾರ್ಜುನ ದೊಡ್ಡಮನಿ, ತರಕಾರಿ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.