ಎಪಿಎಂಸಿ: ಕಾಂಗ್ರೆಸ್‌ ಹೊಡೆತಕ್ಕೆ ಬಿಜೆಪಿ ಧೂಳಿಪಟ


Team Udayavani, Mar 8, 2017, 3:06 PM IST

gul3.jpg

ಸೇಡಂ: ಮುಂಬರುವ ವಿಧಾನಸಭಾ ಚುನಾವಣೆ ದಿಕ್ಸೂಚಿ ಎಂದೇ ಹೇಳಲ್ಪಡುತ್ತಿದ್ದ ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಎಪಿಎಂಸಿ) ಚುನಾವಣೆಯಲ್ಲೇ ಬಿಜೆಪಿ ಬೆಂಬಲಿಗರು ಮುಗ್ಗರಿಸಿದ್ದಾರೆ. 13 ಸ್ಥಾನಗಳ ಪೈಕಿ ಒಂದೂ  ಸ್ಥಾನ ಪಡೆಯದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಅಲ್ಲದೆ, ಮುಧೋಳ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲ ಪಡೆದರೂ  ಜಯಗಳಿಸುವಲ್ಲಿ ವಿಫಲವಾಗಿದೆ. ಮಾ.14 ರಂದು ಎಪಿಎಂಸಿಯ ಒಂಭತ್ತು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮಂಗಳವಾರ ನಡೆದ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ. ಚುನಾವಣೆಗೂ ಮುಂಚೆ ನಾಲ್ವರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಇಟಕಾಲ, ಕೋಲಕುಂದಾ, ರಂಜೋಳ ಹಾಗೂ ಸಹಕಾರ ಕ್ಷೇತ್ರದಿಂದ  ವಿರೋಧ ಆಯ್ಕೆಯಾಗಿದ್ದರು. 

ಇನ್ನುಳಿದ ಒಂಭತ್ತು ಕ್ಷೇತ್ರಗಳಲ್ಲಿ ಒಂದು  ಪಕ್ಷೇತರ ಮತ್ತು 8 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿವೆ. ಮಳಖೇಡ ಕ್ಷೇತ್ರದಿಂದ ನಾಗೇಶ ಹಲಚೇರಿ 1421 ಮತ ಪಡೆದು ಜಯ ಗಳಿಸಿದರೆ, ಸಿದ್ದಪ್ಪ 305 ಮತ ಪಡೆದು ಸೋಲೊಪ್ಪಿಕೊಂಡಿದ್ದಾರೆ. ತೆಲಕೂರ ಕ್ಷೇತ್ರದಿಂದ ಬಸವಂತರೆಡ್ಡಿ ನರಸರೆಡ್ಡಿ 1432 ಮತ ಪಡೆದು ಗೆಲುವು ಸಾಧಿಸಿದರೆ, ಎದುರಾಳಿ ಶಿವಶರಣಪ್ಪ 1349 ಮತ ಪಡೆದು ಪರಾಭವಗೊಂಡಿದ್ದಾರೆ. 

ಮೇದಕ ಕ್ಷೇತ್ರದಿಂದ ಹರ್ಷವರ್ಧನರೆಡ್ಡಿ 1506 ಮತ  ಪಡೆದು ಜಯಗಳಿಸಿದರೆ, ಪೆಂಟಾರೆಡ್ಡಿ 671 ಪಡೆದು ಪರಾಭವಗೊಂಡರು. ಮುಧೋಳ ಕ್ಷೇತ್ರದಿಂದ ಕೃಷ್ಣವೇಣಿ ಸದಾಶಿವರೆಡ್ಡಿ 1769 ಪಡೆದು ಜಯಗಳಿಸಿದರೆ, ಎದುರಾಳಿ ಸಾಹೇಬಿಮೌಲಾನ 343 ಮತ ಪಡೆದರು.  

ಮದನಾ ಕ್ಷೇತ್ರದಿಂದ ವಿಷ್ಣುಕಾಂತರೆಡ್ಡಿ 1321 ಪಡೆದು ಜಯಗಳಿಸಿದರೆ, ಎದುರಾಳಿ ಮುರುಗೇಂದ್ರರೆಡ್ಡಿ 1175 ಮತ ಪಡೆದರು. ಕೋಡ್ಲಾ ಕ್ಷೇತ್ರದಿಂದ ಸಿದ್ದಲಿಂಗಪ್ಪ ಬಾನರ್‌ 1458 ಮತ  ಪಡೆದು ಜಯಗಳಿಸಿದರೆ, ಎದುರಾಳಿ ಅರುಣಕುಮಾರ ಬಜೇಪ್‌ 1023 ಮತ ಪಡೆದರು. ಸೇಡಂ ಕ್ಷೇತ್ರದಿಂದ ರಾಮಯ್ಯ ಪೂಜಾರಿ 1361 ಮತ ಪಡೆದು ಜಯಗಳಿಸಿದರೆ, ಎದುರಾಳಿ ಮಲ್ಕಪ್ಪ  ಕೊಡದೂರ 1166 ಮತ ಪಡೆದರು. 

ಆಡಕಿ ಕ್ಷೇತ್ರದಿಂದ ಗುರುನಾಥರೆಡ್ಡಿ 1966 ಮತ ಪಡೆದು ಜಯಗಳಿಸಿದರೆ, ಎದುರಾಳಿ ಗೋವಿಂದ ಮುಡಗುಲ್‌ 672 ಮತ  ಪಡೆದರು. ವರ್ತಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ (ಬಿಜೆಪಿ ಬೆಂಬಲಿತ ಎಂದು ಹೇಳಲ್ಪಟ್ಟ) ವಿದ್ಯಾಸಾಗರ ಪಾಟೀಲ 125 ಮತ ಪಡೆದು ಜಯಗಳಿಸಿದರೆ, ಎದುರಾಳಿ ಶಿವಶರಣಪ್ಪ ಪಂತಲು 110 ಮತ ಪಡೆದರು.

ಕಾರ್ಯಕರ್ತರೇ ಗೆಲುವಿಗೆ ಕಾರಣ: ಕಾರ್ಯಕರ್ತರು ಪ್ರಾಮಾಣಿಕ ರೀತಿಯಲ್ಲಿ ದುಡಿದ ಕಾರ್ಯದ ಫಲವಾಗಿ ಎಪಿಎಂಸಿಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

ಎಪಿಎಂಸಿ ಚುನಾವಣೆಗೆ ತಾವು ಪ್ರಚಾರ ಮಾಡಿಲ್ಲ. ಆದರೂ ಎಲ್ಲಾ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಈ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಕಾರ್ಯಕ್ಷಮತೆ ಅರಿಯಬಹುದು ಎಂದು ಹೇಳಿದರು. 

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಹಿರಿಯ ಮುಖಂಡ ಶಂಭುರೆಡ್ಡಿ ಮದ್ನಿ, ಶರಣಭೂಪಾಲರೆಡ್ಡಿ ಪಾಟೀಲ, ಸತೀಶರೆಡ್ಡಿ ಪಾಟೀಲ ರಂಜೋಳ, ಹಾಪಕಾಮ್ಸ್‌ ರಾಜ್ಯ  ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಹಾಗೂ  ಮತ್ತಿತರರು ಇದ್ದರು. 

ಸನ್ಮಾನ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನಲಾಗಿದ್ದ ಪಕ್ಷೇತರ ಅಭ್ಯರ್ಥಿ ವಿದ್ಯಾಸಾಗರ ಪಾಟೀಲ ತಮ್ಮ  ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಕಚೇರಿಗೆ ಬಂದು ಸಚಿವರನ್ನು ಸನ್ಮಾನಿಸಿದರು.   

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.