ಕಲಬುರಗಿ: ಸಿಯುಕೆ ಸ್ನಾತಕ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
Team Udayavani, Feb 22, 2023, 1:28 PM IST
ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರೀಯ ವಿವಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಮೇ 21ರಿಂದ 31ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಇಲ್ಲಿನ ಕಡಗಂಚಿ ಸಮೀಪದ ಸಿಯುಕೆ ಕ್ಯಾಂಪಸ್ ನಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಇದೇ ಫೆಬ್ರವರಿ 9ರಿಂದ ಆನ್ ಲೈನ್ ಮೂಲಕ ಅರ್ಜಿ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮಾರ್ಚ್ 12ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು www.nta.ac.in, http://cuet.samarth.ac.in ಮೂಲಕ ಸಲ್ಲಿಸಬೇಕಿದ್ದು, ಪರೀಕ್ಷೆಯು ಆನ್ ಲೈನ್ ಮೂಲಕವೇ ನಡೆಯಲಿದೆ. ಮೇ ಎರಡನೇ ವಾರದಲ್ಲಿ ಎನ್.ಟಿ.ಎ ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದರು.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಪುನಃ ಏನಾದರೂ ತಿದ್ದುಪಡಿಗೆ ಬಯಸುವುದಾದರೆ ಮಾರ್ಚ್ 15ರಿಂದ 18ರ ರಾತ್ರಿ 11.50ರವರೆಗೆ ಅವಕಾಶ ನೀಡಲಾಗುವುದು. ಏಪ್ರಿಲ್ 30ರಂದು ಪರೀಕ್ಷೆ ಕೈಗೊಳ್ಳುವ ಸ್ಥಳ ಮತ್ತು ನಗರಗಳ ಕುರಿತು ವೆಬ್ ಸೈಟ್ ನಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಇಡೀ ವ್ಯವಸ್ಥೆ ಹಾಳು ಮಾಡಿದ್ದಾರೆ: ಶೋಭಾ ಕರಂದ್ಲಾಜೆ
ಪ್ರಸ್ತುತ ಸಿಯುಕೆ 10 ಸ್ನಾತಕ ಕೋರ್ಸ್‌ಗಳನ್ನು ನಡೆಸಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಬಿ.ಟೆಕ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಬಿ.ಟೆಕ್ ಎಲೆಕ್ಟ್ರಾನಿಕ್ ಅ್ಯಂಡ್ ಕಮ್ಯುನಿಕೇಷನ್, ಬಿ.ಎಸ್ಸಿ (ಭೌತಶಾಸ್ತ್ರ ಸಿಂಗಲ್ ಮೇಜರ್), ಬಿಎಸ್ಸಿ (ಕೆಮಿಸ್ಟ್ರಿ ಸಿಂಗಲ್ ಮೇಜರ್), ಬಿಎಸ್ಸಿ (ಭೂ ವಿಜ್ಞಾನ ಮತ್ತು ಜೀವ ವಿಜ್ಞಾನ), ಬಿಎಸ್ಸಿ (ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ), ಬಿಎಸ್ಸಿ/ಬಿಎ (ಮನೋವಿಜ್ಞಾನ ಮತ್ತು ಇಂಗ್ಲಿಷ್), ಬಿಎಸ್ಸಿ (ಭೂಗೋಳ ಮತ್ತು ಇತಿಹಾಸ) ಮತ್ತು ಬಿಎ (ಅರ್ಥಶಾಸ್ತ್ರ ಮತ್ತು ಸಮಾಜ ಕಾರ್ಯ) ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಎಲ್ಲ ಕೋರ್ಸ್ ಗಳಿಗೆ 40 ಸೀಮಿತ ಪ್ರವೇಶಾತಿಗೆ ಮಾತ್ರ ಅವಕಾಶವಿದ್ದು, 15 ಸಾಮಾನ್ಯ, ಎಂಟು ಒಬಿಸಿ, ಐದು ಎಸ್ಸಿ, ಎರಡು ಎಸ್ಟಿ, ಮೂರು ಇಡಬ್ಲ್ಯುಎಸ್ ಮತ್ತು ಮೂರು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಎನ್.ಸಿ.ಸಿ/ಎನ್.ಎಸ್.ಎಸ್, ಕ್ರೀಡಾಪಟುಗಳು, ಅಂಗವಿಕಲರು, ಕಾಶ್ಮೀರಿ ವಲಸಿಗರು ಮತ್ತು ರಕ್ಷಣಾ ಸಿಬ್ಬಂದಿಯ ಮಕ್ಕಳಿಗೆ ತಲಾ ಒಂದು ಪ್ರವೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು, ಬಿಟೆಕ್ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಸಿಯುಇಟಿ ಮತ್ತು ಜೆಇಇ ಮೂಲಕ ನಡೆಸಲಾಗುತ್ತದೆ. ಶೇ.50ರಷ್ಟು ಸೀಟುಗಳನ್ನು ಸಿಯುಇಟಿ ಮತ್ತು ಶೇ.50 ಸೀಟುಗಳನ್ನು ಜೆಇಇ ಮೂಲಕ ಭರ್ತಿ ಮಾಡಲಾಗುವುದು ಎಂದು ಪ್ರೊ.ಬಟ್ಟು ತಿಳಿಸಿದರು.
ಸಿಯುಕೆ ಕುಲಸಚಿವ ಡಾ.ಬಸವರಾಜ ಡೋಣೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಸಿನ್ನೂರ್ ಇದ್ದರು.
13 ಭಾಷೆಗಳಲ್ಲಿ ಪರೀಕ್ಷೆ:
ಪ್ರವೇಶ ಪರೀಕ್ಷೆಯನ್ನು 13 ಭಾಷೆಗಳಲ್ಲಿ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಎಂದು ಸಿಯುಕೆ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.