ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಗಳ ನೇಮಕ
Team Udayavani, Apr 18, 2021, 7:25 PM IST
ಸೇಡಂ: ತಾಲೂಕಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟರ್‌ಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಿಯಂತ್ರಿತ ಪ್ರದೇಶ ಹಾಗೂ ಘಟನಾ ನಿಯಂತ್ರಕರಾಗಿ ಜಿಲ್ಲಾ ಧಿಕಾರಿಯಿಂದ ನೇಮಕವಾದ ಅ ಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾಹಿತಿ ನೀಡಿದರು. ಜಿಲ್ಲಾ ಧಿಕಾರಿಗಳ ಆದೇಶದಂತೆ ಪಟ್ಟಣದ ನಾಲ್ಕು ವಾರ್ಡ್‌ಗೆ ಒಬ್ಬರು, ಗ್ರಾಮೀಣಕ್ಕೆ ಮೂವರು ಅಥವಾ ನಾಲ್ಕು ಗ್ರಾಪಂ ಕೇಂದ್ರ ಒಳಗೊಂಡಂತೆ ಅಧಿಕಾರಿಗಳನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೆಟ್‌ಗಳಾಗಿ ನೇಮಕ ಮಾಡಲಾಗಿದೆ. ಯಾವ ಪ್ರದೇಶದಲ್ಲಿ ಹೆಚ್ಚಿನ ಸೊಂಕಿತರು ಕಂಡು ಬರುತ್ತಾರೆಯೋ ಅದನ್ನು ನಿಯಂತ್ರಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗುತ್ತಿದೆ.
ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಎರಡು ಪ್ರದೇಶವನ್ನು ನಿಯಂತ್ರಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ನಿಯಂತ್ರಿತ ಪ್ರದೇಶದಲ್ಲಿನ ಸೋಂಕಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಮನೆಯಿಂದ ಹೊರ ಬಾರದಂತೆ ನಿಗಾವಹಿಸಲು ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ.
ಸೋಂಕಿತರು ಉಢಾಪೆ ಮಾಡಿದರೆ ಪ್ರಕರಣ ದಾಖಲಿಸುವ ಹಕ್ಕು ಮ್ಯಾಜಿಸ್ಟ್ರೇಟ್‌ಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಿಡಿಪಿಒ ಮುರುಗೇಶ ಗುಣಾರಿ, ಪುರಸಭೆ ಮುಖ್ಯಾಧಿ ಕಾರಿ ಸತೀಶ ಗುಡ್ಡೆ, ಗ್ವಾಲೇಶ ಹೊನ್ನಳ್ಳಿ, ಲೊಕೋಪಯೋಗಿ ಇಲಾಖೆ ಇಇ ಕೃಷ್ಣ ಅಗ್ನಿಹೋತ್ರಿ, ಎಇಇ ಚಂದ್ರಶೇಖರ ಮೋತಕಪಲ್ಲಿ, ಪ್ರಭಾರ ಗೊಬ್ಬೂರ, ರಾಮಚಂದ್ರ ಬಸೂದೆ, ರವಿಕುಮಾರರೆಡ್ಡಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಸತ್ಯಕುಮಾರ ಭಾಗೋಡಿ, ಗೋರಕನಾಥ, ಶರಣಬಸಪ್ಪ ಪಾಟೀಲ, ಪ್ರಶಾಂತ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್