ಐವರು ದರೋಡೆಕೋರರ ಬಂಧನ
Team Udayavani, Aug 3, 2022, 3:28 PM IST
ಚಿತ್ತಾಪುರ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ದರೋಡೆಕೋರರನ್ನು ತಾಲೂಕಿನ ಮಾಡಬೂಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 20 ಸಾವಿರ ರೂ. ನಗದು, ಐದು ಮೊಬೈಲ್ ಹಾಗೂ ಬಿಳಿ ಬಣ್ಣದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಡ್ರಾಮಿ ತಾಲೂಕಿನ ಮಾಸಣಗಿ ಗ್ರಾಮದ ಅರವಿಂದ ಶಾಂತಪ್ಪ ಕೂಡಿ (29), ಕಲಬುರಗಿಯ ಅಜಯ ಅಂಬಾದಾಸ ಗಾಯಕವಾಡ (27), ಚಿಂಚೋಳಿ ತಾಲೂಕಿನ ಗಡಿಕೇಶ್ವರದ ಸಂತೋಷ ಶರಣಪ್ಪ ಸಜ್ಜನ (34), ಕಲಬುರಗಿಯ ಗುಲಾಬವಾಡಿಯ ಜಗನ್ನಾಥ ಅಮೃತ ಕಟ್ಟಿಮನಿ (24), ಶಹಾಬಾದ ತಾಲೂಕಿನ ದೇವನತೆಗನೂರಿನ ರೋಶನ ಶಿವಯೋಗಿ ಗುಡೂರ (20) ಬಂಧಿತ ಆರೋಪಿಗಳು.
ಜುಲೈ 11ರಂದು ಬೆಳಗ್ಗೆ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿಯ ಗುಂಡಗುರ್ತಿ ಸಮೀಪ ಬೆಳಗ್ಗೆ ಹಾಲಿನ ವಾಹನಕ್ಕೆ ಅಡ್ಡಗಟ್ಟಿ ವಾಹನದೊಳಗೆ ಇದ್ದವರಿಗೆ ರಾಡಿನಿಂದ ಹೊಡೆದು ನಗದು ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದರು. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆದಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.