ಶ್ರದ್ದೆಯಿಂದ ಮಾತ್ರ ಕಲೆ ಅನಾವರಣ
Team Udayavani, Jan 8, 2022, 8:24 PM IST
ಕಲಬುರಗಿ: ಚಿತ್ರಕಲೆ ಸುಲಭವಾಗಿ ಯಾರಿಗೂ ಒಗ್ಗುವಂತದ್ದಲ್ಲ. ಅತ್ಯಂತ ಸೂಕ್ಷ್ಮ, ಧ್ಯಾನ, ಶ್ರದ್ಧೆಯಿಂದ ಮಾತ್ರ ಕಲೆ ಅನಾವರಣ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಸಮೂಹ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯಲ್ಲೂ ಸ್ವದೇಶಿ ಕಲ್ಪನೆಯನ್ನು ನಾವು ಕಾಣಬಹುದು. ತನ್ನಲ್ಲಿರುವ ಕಲೆಯ ಜ್ಞಾನವನ್ನು ಕಲಾವಿದ ಹಂಚಿಕೊಳ್ಳಬೇಕು ಎಂದರು. ಸಂಗೀತ, ಕ್ರೀಡೆ, ಚಿತ್ರಕಲೆ ಅರ್ಥೈಸಿಕೊಳ್ಳುವುದು ಕಷ್ಟ. ಈ ಬಗ್ಗೆ ವಿಮರ್ಶೆ ಮಾಡುವವರು, ಮಾತನಾಡುವವರ ಅಗತ್ಯವಿದೆ. ಚಿತ್ರಕಲಾ ಕ್ಷೇತ್ರದಲ್ಲಿ ವಿಮರ್ಶಕರು ತಯಾರಾಗಬೇಕು. ಹೊಗಳಿಕೆ, ತೆಗಳಿಕೆ ಏನೇ ಇರಲಿ. ಕಲೆ ಬಗ್ಗೆ ಮಾತನಾಡುವವ ಅಗತ್ಯವಿದೆ. ವಿಮರ್ಶಕರಿಲ್ಲದೇ ನಮ್ಮ ಭಾಗದ ತತ್ವಪದಗಳು ಖ್ಯಾತಿಯಾಗಲಿಲ್ಲ.
ಪ್ರಸ್ತುತ ಕಲೆಯೂ ವಿಮರ್ಶಕರಿಲ್ಲದೆ ಬಡವಾಗಬಾರದು ಎಂದರು. ಖ್ಯಾತ ಕಲಾವಿದ ಡಾ| ವಿ.ಜಿ.ಅಂದಾನಿ ಮಾತನಾಡಿ, ಕಲೆಗಾರರು ನಿಜವಾದ ಚಿಂತಕರು. ಚಿತ್ರಕಲೆಯಲ್ಲಿ ವಿಚಾರವಂತಿಕೆ ಇದ್ದಾಗ ಮಾತ್ರ ಅದ್ಭುತ ಸೃಷ್ಟಿ ಸಾಧ್ಯ. ವಿಭಿನ್ನ ಕಾಲಘಟ್ಟದಲ್ಲಿ ಹಲವು ಶೈಲಿಗಳು ಹುಟ್ಟುತ್ತವೆ. ಯುವ ಕಲಾವಿದ ಪ್ರಯತ್ನ ಶ್ಲಾಘನೀಯ ಎಂದರು. ಕಲಾವಿದರು ಮತ್ತು ಪ್ರಮುಖರಾದ ವಿಜಯಕುಮಾರ, ಅರವಿಂದ ಕಾಂಬಳೆ, ಸಂಗಪ್ಪ ನಾಗೂರೆ, ನಿಂಗಣ್ಣಗೌಡ ಪಾಟೀಲ, ಸಂತೋಷ ಚಿಕ್ಕಣ್ಣ, ಕಾವೇರಿ ಪೂಜಾರ, ಗಂಗಮ್ಮ ವಾಲಿಕಾರ, ಪ್ರಶಾಂತ ಜಿ, ಅಮೀನ್ ರೆಡ್ಡಿ ರಾಯಚೂರು, ಜಲಜಾಕ್ಷಿ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.