ಎಸಿಸಿ ಕಾರ್ಮಿಕರಿಂದ ಜಾಗೃತಿ ಜಾಥಾ
Team Udayavani, Mar 7, 2019, 7:05 AM IST
ವಾಡಿ: ರಾಷ್ಟ್ರೀಯ ಸುರಕ್ಷತಾ ದಿನದ ನಿಮಿತ್ತ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನೂರಾರು ಕಾರ್ಮಿಕರು ಬುಧವಾರ ಬೆಳಗ್ಗೆ ಕಾರ್ಖಾನೆ ವಿವಿಧ ವಿಭಾಗಗಳಲ್ಲಿ ಜಾಥಾ ನಡೆಸುವ ಮೂಲಕ ಕೆಲಸದ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ, ಅಪಘಾತ ನಿಯಂತ್ರಣ ಕುರಿತು ಘೋಷಣೆ ಕೂಗಿದರು.
ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಎಸಿಸಿ ಘಟಕ ಮುಖ್ಯಸ್ಥ ಕೆ.ಆರ್.ರೆಡ್ಡಿ, ಭಾರತ ಸ್ವಾತಂತ್ರ್ಯಾವಾದ ನಂತರ ದೇಶದಲ್ಲಿ ಸಾಕಷ್ಟು ಕಂಪನಿಗಳು ಸ್ಥಾಪನೆಯಾದವು. ಕೆಲಸದಲ್ಲಿ ಪಾಲಿಸಲಾದ ಅಸುರಕ್ಷತಾ ನಿಯಮಗಳಿಂದ ಪದೆ ಪದೇ ಅಪಘಾತಗಳು ಸಂಭವಿಸಿ ಕಾರ್ಮಿಕರು ಮೃತಪಡುವ ಪ್ರಸಂಗಗಳು ಹೆಚ್ಚಾದವು.
ಬಾಬು ಜಗಜೀವನರಾಮ ಅವರು ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಕುರಿತು ವಿಶೇಷ ಚಿಂತನೆಗಳು ನಡೆದವು. ಕಾರ್ಖಾನೆಗಳಲ್ಲಿ ಘಟಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು 1966 ರಲ್ಲಿ ಕಾರ್ಮಿಕ ಸಮಿತಿ ಸ್ಥಾಪನೆಯಾಯಿತು. ಅಂದಿನಿಂದ ಪ್ರತಿ ವರ್ಷ ಮಾ.4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನಾಗಿ ಚರಿಸಲಾಗುತ್ತಿದೆ ಎಂದರು. ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು. ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ನೋವುಗಳು ಸಂಭವಿಸುತ್ತಿವೆ. ಚಾಲಕರ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಮದ್ಯ ಸೇವನೆ ಮಾಡಿ ವಾಹನ ಸವಾರಿ ಹೊರಡುವುದರಿಂದ ಹಾಗೂ ಹೆಲ್ಮೆಟ್, ಬೆಲ್ಟ್ ಧರಿಸದೆ ಇರುವುದು ಪ್ರಾಣ ಹಾನಿಗೆ ಕಾರಣವಾಗುತ್ತದೆ.
ಪ್ರತಿ ದಿನವೂ ನಮಗೆ ಸುರಕ್ಷತಾ ದಿನವಾಗಬೇಕು. ಸುರಕ್ಷತೆ ಕುರಿತು ಸರಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ನಿರ್ಲಕ್ಷಿಸುತ್ತಿದ್ದಾರೆ. ಕಾನೂನುಗಳು ಪ್ರಾಮಾಣಿಕವಾಗಿ ಜಾರಿಗೆ ಬಂದಾಗ ಮಾತ್ರ ಇದನ್ನು ತಡೆಯಬಹುದು ಎಂದು ವಿವರಿಸಿದರು.
ಎಸಿಸಿಯ ಆಪರೇಷನ್ ಹೆಡ್ ಜೀತೇಂದ್ರ ಕುಮಾರ, ಸುರಕ್ಷತಾ ವಿಭಾಗದ ಮುಖ್ಯಸ್ಥ ವಿ. ಶ್ರೀಕಾಂತ, ಕ್ಯಾಪ್ಟೀವ್ ಪವರ್ ಪ್ಲಾಂಟ್ (ಸಿಪಿಪಿ) ಮುಖ್ಯಸ್ಥ ಸಮರ್ಪಣ ದವನ್, ಇಲೆಕ್ಟ್ರಿಕಲ್ ಇನ್ಸೂಟ್ರೂಮೆಂಟೇಷನ್ ಮುಖ್ಯಸ್ಥ ಸುರೇಶ ಶೆಟ್ಟಿ, ಪ್ರಾಣೇಶ, ವೇಣುಗೋಪಾಲ, ಸೋಯಬ್, ಕೊಂಡ್ಲಿಬಾ ಭೋಸಲೆ, ನೀರಜ್ ಜೋಶಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.