ನಂದಿನಿ ಹಾಲು ಬಳಕೆಗೆ ಜನಜಾಗೃತಿ
Team Udayavani, Dec 20, 2019, 12:37 PM IST
ಕಲಬುರಗಿ: ಹಾಲು ಉತ್ಪಾದನಾ ಹೆಚ್ಚಳ ಹಾಗೂ ನಂದಿನಿ ಹಾಲು ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ಕಲಬುರಗಿ, ಬೀದರ, ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಲ್ಯಾಣರಾವ್ (ಆರ್.ಕೆ. ಪಾಟೀಲ) ಪಾಟೀಲ ತಿಳಿಸಿದರು.
ಒಕ್ಕೂಟದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ 62 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವುದರ ಜತೆಗೆ ಕೆಮಿಕಲ್ ಮಿಶ್ರಿತ ಅದರಲ್ಲೂ ಕ್ಯಾನ್ಸರ್‌ಗೆ ಆಹ್ವಾನ ನೀಡುವ ಹಾಲುಗಳನ್ನು ತ್ಯಜಿಸುವಂತೆ ಹಾಗೂ ಒಕ್ಕೂಟದ ನಂದಿನಿ ಹಾಲು ಉಪಯೋಗಿಸುವಂತೆ ಹಳ್ಳಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಲಾಗಿದೆ ಎಂದು ವಿವರಿಸಿದರು.
ದೇಶದಲ್ಲಿ ಕಲಬೆರೆಕೆ ಆಹಾರ ಪದಾರ್ಥಗಳ ಸೇವನೆಯಿಂದ ಕ್ಯಾನ್ಸರ್‌ದಂತ ಮಾರಕ ರೋಗಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಾಲಿನಲ್ಲಿ ಕನಿಷ್ಠ 3.5 ಪ್ಯಾಟ್ ಮತ್ತು ಕನಿಷ್ಠ 8.5 ಎಸ್‌ಎನ್ ಎಫ್ ಇರಬೇಕು. ಆದರೆ ಖಾಸಗಿ ಹಾಲಿನಲ್ಲಿ ಈ ಅಂಶಗಳನ್ನು ಉಲ್ಲಂ ಸಲಾಗುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಪೂರೈಕೆಯಾಗುವ ಕಳಪೆ ಮಟ್ಟದ ಹಾಲು ತಡೆಗಟ್ಟುವಂತೆ ಪಾಲಿಕೆ ಆಯುಕ್ತರು, ಜಿಲ್ಲಾಡಳಿತ ಹಾಗೂ ಸಂಬಂಧಿಸಿದವರಿಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ ಎಂದು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟ ವ್ಯಾಪ್ತಿಯಲ್ಲಿ ರೈತರಿಗೆ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಉತ್ಪಾದನೆಗೆ ಬೇಕಾಗುವ ತರಬೇತಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿದೆ. ಮುಖ್ಯವಾಗಿ ಹುಲ್ಲು ಬೆಳೆಯಲು ಬೀಜವನ್ನು ಶೇ. 50ರಷ್ಟು ದರದಲ್ಲಿ ವಿತರಿಸಲು, ಹುಲ್ಲು ಕಟ್ ಮಾಡುವ ಯಂತ್ರ ವಿತರಿಸಲಾಗಿದೆ. ಇದು ಹಾಲು ಹೆಚ್ಚಳವಾಗಲು ಪೂರಕವಾಗಿದೆ. ಕಡಿಮೆ ಗುಣಮಟ್ಟದ ಹಾಲಿನ ಸರಬರಾಜು ನಿಯಂತ್ರಿಸಲು ಒಕ್ಕೂಟದ ಸಿಬ್ಬಂದಿ ಸಂಘದ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ಸರಬರಾಜು ಮಾಡಲೇಬೇಕಾಗಿದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ರೈತರಿಂದ ಕಲಬೆರಕೆ ಹಾಲು ಸರಬರಾಜು ಆದಾಗ ಗ್ರಾಹಕರ ಹಿತದೃಷ್ಟಿಯಿಂದ ತಿರಸ್ಕರಿಸಲಾಗುತ್ತಿದೆ. ಆದರೂ ಕಳೆದ ವರ್ಷದಿಂದ ಇದು ಕಡಿಮೆಯಾಗಿದೆ ಎಂದು ತಿಳಿಸಿದರು.
ಒಕ್ಕೂಟ ವ್ಯಾಪ್ತಿಯಲ್ಲಿ ಒಟ್ಟು 4.70 ಲಕ್ಷ ರೈತರು ಭೂಮಿಯನ್ನು ಹೊಂದಿದ ಕುಟುಂಬಗಳಿವೆ. ಈ ಪೈಕಿ 11200 ರೈತ ಕುಟುಂಬಗಳು (ಶೇ. 2.5) ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಪೂರೈಸುತ್ತಿವೆ. ಇದನ್ನು ವಿಸ್ತರಿಸಬೇಕಿದೆ. ಈಗಿರುವ 450 ಹಾಲು ಉತ್ಪಾದಕರ ಸಂಘಗಳಲ್ಲಿ ಇದರಲ್ಲಿ ಅರ್ಧ ಬಂದ್ ಆಗಿವೆ. 100ನ್ನು ಪುನಶ್ಚೇತನಗೊಳಿಸಲು ಮುಂದಾಗಲಾಗಿದೆ. 20 ಹೊಸದಾಗಿ ಸಂಘ ರಚಿಸಲು ಮುಂದಾಗಲಾಗಿದೆ ಎಂದರು.
ಬ್ಯಾಂಕ್‌ನ ನಿರ್ದೇಶಕರಾದ ಚಂದ್ರಕಾಂತ ಭೂಸನೂರು, ರೇವಣಸಿದ್ದಪ್ಪ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಈರಣ್ಣ ಝಳಕಿ, ವಿಠಲರೆಡ್ಡಿ, ಶ್ರೀಕಾಂತ ದಾನಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಮಕೇರಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.