ಕೇಂದ್ರ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿಯಿಲ್ಲ: ಬಿ.ಆರ್.ಪಾಟೀಲ್ ವಾಗ್ದಾಳಿ
ನವದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಬೃಹತ್ ಬೈಕ್ ರ್ಯಾಲಿ
Team Udayavani, Jan 11, 2021, 1:15 PM IST
ಕಲಬುರಗಿ: ರೈತ ವಿರೋಧಿ ಕೃಷಿ ಮಸೂದೆಗಳ ವಾಪಸಾತಿ ಪಡೆಯುವಂತೆ ಆಗ್ರಹಿಸಿ ರೈತರ ಹೋರಾಟ ತಿಂಗಳಿನಿಂದ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿರುವುದು ದೇಶದ ದುರಂತ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಟೀಕಿಸಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಕ್ಕೆ ಬೆಂಬಲಿಸಿ ಆಳಂದ ತಾಲೂಕಿನ ಕಡಗಂಚಿಯಿಂದ ಆಳಂದ ಪಟ್ಟವರೆಗೆ ಹಮ್ಮಿಕೊಂಡ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ತಿಂಗಳುಗಟ್ಟಲೇ ರೈತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಎಳ್ಳಷ್ಟು ಕನಿಕರ ತೋರಿಸದಿರುವುದು ಕಣ್ಣು ಇಲ್ಲ – ಕಿವಿ ಇಲ್ಲ ಎಂಬುದು ನಿರೂಪಿಸುತ್ತದೆ. ಈ ಹಿಂದೆ ರೈತರ ಅನೇಕ ಹೋರಾಟಗಳು ನಡೆದಿವೆ. ಇಷ್ಟೊಂದು ನಿಟ್ಟಿನಲ್ಲಿ ಯಾವುದೇ ಸರಕಾರ ಮೊಂಡತನ ಹಾಗೂ ಹಠ ಸಾಧಿಸಿಲ್ಲ ಎಂದರು.
ಇದನ್ನೂ ಓದಿ:ಪ್ರತಿಷ್ಠೆ ಯಾಕೆ, ಕಾಯ್ದೆಯನ್ನು ತಾತ್ಕಾಲಿಕ ತಡೆ ಹಿಡಿಯಲು ಆಗಲ್ಲವೇ? ಕೇಂದ್ರಕ್ಕೆ ಸುಪ್ರೀಂ
ಪ್ರಧಾನಮಂತ್ರಿ ಹಾಗೂ ಪ್ರಮುಖ ಸಚಿವರಿಗೆ ರೈತರ ಹಿತಾಸಕ್ತಿಗಿಂತ ಉದ್ಯಮಿಗಳಾದ ಅದಾನಿ, ಅಂಬಾನಿ ಮತ್ತಿತರರ ಹಿತ ಕಾಪಾಡುವುದೇ ಆಗಿದೆ. ಜನಪರ ಸರ್ಕಾರ ಹೋಗಿ ಉದ್ಯಮಿಪರ ಸರ್ಕಾರವಾಗಿದೆ ಎಂದು ಬಿ.ಆರ್ ವಾಗ್ದಾಳಿ ನಡೆಸಿದರು.
ರೈತರಿಗೆ ಯಾರು ತಮ್ಮ ಹಿತ ಕಾಪಾಡುವರು ಎಂಬುದು ಈಗ ಮನವರಿಕೆಯಾಗಿದೆ. ಹೀಗಾಗಿಯೇ ದೇಶದ ಮೂಲೆ- ಮೂಲೆಗಳಿಂದ ಲಕ್ಷಾಂತರ ರೈತರು ನವದೆಹಲಿಯತ್ತ ಧಾವಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಡುಕ ಶುರುವಾಗಿದೆ. ಏನೇ ಆದರೂ ಕೃಷಿ ಮಸೂದೆಗಳು ವಾಪಸ್ಸು ಪಡೆಯುವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಹಣಮಂತ ಭೂಸನೂರ ಮಾತನಾಡಿ, ಬೈಕ್ ರ್ಯಾಲಿಗೆ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ ಎಂದರು.
ಆಳಂದ ತಾಲೂಕಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶರಣು ಭೂಸನೂರ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದರಾಮ ಪ್ಯಾಟಿ,ಮುಖಂಡರಾದ ಗಣೇಶ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.