ಬಸವ ಜಯಂತ್ಯುತ್ಸವಕ್ಕೆ ಸಮನ್ವಯ ಸಮಿತಿ
Team Udayavani, Apr 9, 2018, 11:52 AM IST
ಕಲಬುರಗಿ: ಇದೇ ಏ. 18ರಂದು ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಎಲ್ಲರೂ ಒಗ್ಗೂಡಿ ಮಾದರಿಯಾಗಿ ಹಾಗೂ ಸಂಘಟನಾತ್ಮಕವಾಗಿ ನೆರವೇರಿಸುವ ನಿಟ್ಟಿನಲ್ಲಿ ವೀರಶೈವ-ಲಿಂಗಾಯತ ಮುಖಂಡರ ಸಭೆ ಸೇರಿ ಸಮನ್ವಯ ಸಮಿತಿ ರಚಿಸಲಾಯಿತು.
ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಭಾನುವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅಖೀಲ ಭಾರತ ವೀರಶೈವ ಮಹಾಸಭಾ ಪ್ರತ್ಯೇಕವಾಗಿ ರಚಿಸಿದ್ದ ಬಸವ ಜಯಂತಿ ಉತ್ಸವ ಸಮಿತಿಗಳ ಎಲ್ಲ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರ ಸಭೆಯನ್ನು ನಡೆಸಿ ಬಸವ ಜಯಂತಿ ಉತ್ಸವದ ಸಮನ್ವಯ ಸಮಿತಿ ರಚಿಸಲಾಯಿತು.
ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧಪಡಿಸಲಿರುವ ಸಮಿತಿಯಲ್ಲಿ ಸೋಮಣ್ಣ ನಡಕಟ್ಟಿ, ಅರುಣಕುಮಾರ ಪಾಟೀಲ, ರವೀಂದ್ರ ಶಾಬಾದಿ, ಉತ್ಸವ ಸಮಿತಿ ಅಧ್ಯಕ್ಷರಾಗಿರುವ ಸುರೇಶ ಪಾಟೀಲ ಜೋಗೂರ, ಮಾರುತಿ ಗೋಖಲೆ, ಮಂಜುರೆಡ್ಡಿ, ಪ್ರಭುಲಿಂಗ ಮಹಾಗಾಂವಕರ್, ಕಲ್ಯಾಣಪ್ಪ ಪಾಟೀಲ ಮಳಖೇಡ, ಆರ್.ಜಿ. ಶೆಟಗಾರ ಮತ್ತು ಶ್ರೀಶೈಲ ಘೂಳಿ ಮುಂತಾದವರಿದ್ದಾರೆ. ಸರ್ವರೂ ಸೇರಿಕೊಂಡು ಕಾರ್ಯಕ್ರಮ ನಡೆಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಸೋಮವಾರ ಮತ್ತು ಮಂಗಳವಾರ ಸಭೆ ನಡೆಸಿ ಎರಡು ದಿನಗಳಲ್ಲಿ ಬಸವ ಜಯಂತಿ ಕಾರ್ಯಕ್ರಮದ ಸಮಗ್ರ ರೂಪುರೇಷೆಗಳನ್ನು ತಿಳಿಸಬೇಕು ಎನ್ನುವ ಸಲಹೆ ವ್ಯಕ್ತವಾಯಿತು. ಇದಕ್ಕೆ ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಅರುಣಕುಮಾರ ಪಾಟೀಲ ಧ್ವನಿಗೂಡಿಸಿದರು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಜಿಲ್ಲಾಡಳಿತ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಏ.18 ರಂದು ಸರಳವಾಗಿ ಆಚರಿಸುತ್ತಿದೆ. ಅಂದು ಬೆಳಗ್ಗೆ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಉಪನ್ಯಾಸ ನಡೆಯಲಿದೆ. ಹೀಗಾಗಿ ಉತ್ಸವ ಸಮಿತಿ ವತಿಯಿಂದ ಅದಕ್ಕೂ ಮೊದಲು ಮೂರು ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮ ನಡೆಸುವುದು ಇನ್ನಿತರ ನಿರ್ಧಾರಗಳನ್ನು ಸಮಿತಿ ಕೈಗೊಳ್ಳಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮಾಜದ ಮುಖಂಡರು ಮೆರವಣಿಗೆ ಮತ್ತು ಇನ್ನಿತರ ಖಾಸಗಿಯಾಗಿ ಆಚರಿಸುವ ಜಯಂತಿಯ ಸಭೆ-ಸಮಾರಂಭಗಳಿಗೆ ಸಂಬಂಧಿ ಸಿದ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಪಡೆಯಲು ನಿರ್ಧರಿಸಲಾಯಿತು.
ವಿಚಾರವಾದಿಗಳಾದ ಪ್ರೊ| ಆರ್. ಕೆ. ಹುಡಗಿ, ಡಾ| ಮೀನಾಕ್ಷಿ ಬಾಳಿ, ಶ್ರೀಶೈಲ ಘೂಳಿ ಮಾತನಾಡಿ, ಹಲವು ಸಲಹೆ ನೀಡಿದರು. ಇದಕ್ಕೆ ಮಹಾಸಭಾ ಅಧ್ಯಕ್ಷ ಅರುಣಕುಮಾರ ಪಾಟೀಲ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡೋಣ ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ನೀಲಕಂಠ ಮೂಲಗೆ, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಮುಖಂಡರಾದ ಉಮೇಶ ಶೆಟ್ಟಿ, ಸಂಗಮೇಶ ರಾಜೋಳಿ, ಶಿವಾನಂದ ತೊರವಿ, ಈರಣ್ಣ ಗುಳೇದ, ಕಲ್ಯಾಣಪ್ಪ ವಾಗ್ಧರಿ, ಅಂಬರೀಶ ನೂಲಾ, ಶಾಂತು ಖ್ಯಾಮಾ, ಗುರು ಕೋರವಾರ, ಚಂದ್ರಕಾಂತ ಕಾಳಗಿ, ಸಂತೋಷ ರಾಂಪುರೆ, ಶಾಂತು ಖ್ಯಾಮಾ, ಮಂಜುನಾಥ ಹಾಗರಗಿ, ಅಂಬಾರಾಯ ಡಿಗ್ಗಿ, ಶರಣಗೌಡ ಸಂಕನೂರ, ಮಂಜುನಾಥ ಹಾಗರಗಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.