ಮಾನವೀಯ ಮೌಲ್ಯ ಬೋ ಧಿಸಿದ ಬಸವಣ್ಣ
Team Udayavani, Feb 3, 2018, 11:07 AM IST
ಜೇವರ್ಗಿ: 12ನೇ ಶತಮಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ ತಳಹದಿಯ ಮೇಲೆ ಸರ್ವ ಶೋಷಣಾಮುಕ್ತ ಸಮಾಜವನ್ನು ಕಟ್ಟಿ ಮಾನವೀಯ ಮೌಲ್ಯಗಳನ್ನು ಬೋಧಿಸಿದವರು ಮಂತ್ರಪುರುಷ ವಿಶ್ವಗುರು ಬಸವಣ್ಣ ಎಂದು ಸಾಹಿತಿ ಪ್ರೊ| ಆರ್.ಕೆ.ಹುಡಗಿ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು. ಬಸವಾದಿ ಶರಣರು ರಚಿಸಿದ ವಚನಗಳು ಭರವಸೆಯ ಬೆಳಕಾಗಿ ಬದುಕನ್ನು ಹಸನುಗೊಳಿಸುತ್ತವೆ. ಶರಣರು ರಚಿಸಿದ ವಚನ ಸಾಹಿತ್ಯ ಕನ್ನಡದಲ್ಲಿರುವುದು ನಮ್ಮೆಲ್ಲರ ಪುಣ್ಯ. ವಚನ ಸಾಹಿತ್ಯದಿಂದ ಕನ್ನಡ ಧರ್ಮಭಾಷೆಯ ಸ್ಥಾನ ಪಡೆದಿದೆ.
ವಚನ ಸಾಹಿತ್ಯ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವಂಥ ಪ್ರಜ್ಞೆಯ ಪ್ರತೀಕ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಜ್ಞಾನಗನ್ನಡಿ. ವೈಚಾರಿಕ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜ ಸ್ಥಾಪಿಸಬೇಕೆಂಬ ಉದ್ದೇಶದಿಂದ ಶರಣರು ಸಾಮಾಜಿಕ ಕ್ರಾಂತಿ ಮಾಡಿದರು. ಮೌಡ್ಯ ಧಿಕ್ಕರಿಸಿ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದವರು ವಿಶ್ವಗುರು ಬಸವಣ್ಣ ಎಂದರು.
ಪತ್ರಕರ್ತ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಡಾ| ನಿಂಗರಾಜ ಮೂಲಿಮನಿ
ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಲಿಂ. ಹಣಮಂತಪ್ಪ ರಾಜಳ್ಳಿ ಅವರ ಏಳನೇ ಪುಣ್ಯಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗ ಕಾರ್ಯಕ್ರಮದ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಗಾಯಕರಾದ ಗುರುಬಸಯ್ಯ ಹಿರೇಮಠ ವಡಗೇರಾ, ಚನ್ನಯ್ಯ ಸೊಲ್ಲಾಪುರಮಠ ಅವರಿಂದ ವಚನಗಾಯನ, ಜಾನಪದ ಗಾಯನ ಕಾರ್ಯಕ್ರಮ ಜರುಗಿತು.
ಕಸಾಪ ಅಧ್ಯಕ್ಷ ಶಿವಣ್ಣಗೌಡ ಪಾಟೀಲ ಹಂಗರಗಿ, ನಾಗನಗೌಡ ಪಾಟೀಲ ಜೈನಾಪುರ, ರಾಮಣ್ಣ ಮಾಸ್ತರ ಹೂಗಾರ, ಮಹಾಂತಗೌಡ ಚನ್ನೂರ, ಸಿದ್ಧು ಯಂಕಂಚಿ, ವಿಶ್ವನಾಥರೆಡ್ಡಿ ರಾಜಳ್ಳಿ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ವೀರಣ್ಣ ಭೂತಪೂರ, ನಿಂಗಣ್ಣ ಹಳಿಮನಿ, ಅಶೋಕ ಸನಗುಂದಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಲಕ್ಷ್ಮೀಕಾಂತ ನಾಗರವತ್, ಸುರೇಶ ಹಳ್ಳಿ, ರಾಮಣ್ಣ ತೊನ್ಸಳ್ಳಿಕರ್, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ಅಖಂಡೆಪ್ಪ ಕಲ್ಲಾ ಹಾಗೂ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಪಂಡಿತ ನೆಲ್ಲಗಿ ಸ್ವಾಗತಿಸಿದರು, ಬಸವಕೇಂದ್ರದ ಅಧ್ಯಕ್ಷ ಶರಣಬಸಪ್ಪ ಕಲ್ಲಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.