ಸಮಾನತೆಯಿಂದ ಬಸವ ತತ್ವ ಸಾರ್ಥಕ
Team Udayavani, Mar 3, 2018, 11:01 AM IST
ಜೇವರ್ಗಿ: ದೇವರು, ಧರ್ಮ ಉತ್ಛಕುಲದವರ ಸ್ವತ್ತಲ್ಲ. ದೀನ ದಲಿತರಿಗೆ ದೇವರನ್ನು ಪೂಜಿಸುವ ಹಾಗೂ ಆರಾಧಿಸುವ ಅವಕಾಶ ಸಮಾನವಾಗಿ ಸಿಕ್ಕಾಗ ಮಾತ್ರ ಬಸವ ತತ್ವದ ಆಶಯ ಹಾಗೂ ಕಲ್ಯಾಣ ಕ್ರಾಂತಿ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಕೋಟಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು. ಇತಿಹಾಸದ ಪರಂಪರೆ ಎಂದು ರಾಗ ಹಾಡುತ್ತ ಕುಳಿತರೆ ಬಸವ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಜನಸಾಮಾನ್ಯರನ್ನು ಮೂಢನಂಬಿಕೆ ಯಿಂದ ಹೊರತರುವ ಕೆಲಸವನ್ನು ಮಠಾಧಿಧೀಶರು ಮಾಡಬೇಕು.
12ನೇ ಶತಮಾನದಲ್ಲಿ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾಜ ಕಟ್ಟಿದ್ದರು. ಈಗ ಸಮಾಜವನ್ನು ಜಾತಿ ಧರ್ಮಗಳ ಆಧಾರದ ಮೇಲೆ ಒಡೆಯಲಾಗುತ್ತಿದೆ. ಜಾತಿ ರಹಿತ, ಲಿಂಗಭೇದ ಹಾಗೂ ಮುಕ್ತ ಧಾರ್ಮಿಕ ನೀತಿ ಅನುಸರಿಸಿದ ಶರಣರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಜಾತಿ ಅಹಂಕಾರ ಮತ್ತು ಜಾತಿ ಕೀಳರಿಮೆಯನ್ನು ಶರಣರು ವಿರೋಧಿಸಿದರು. ಎಲ್ಲ ಶೋಷಿತ ಸಮುದಾಯದ ಜನರು ಬಸವ ತತ್ವದ ಆಧಾರದ ಮೇಲೆ ಒಂದಾಗಿ ವೈಚಾರಿಕ ಕ್ರಾಂತಿ ಕಡೆಗೆ ಬರಬೇಕು.
ಬಸವಣ್ಣನವರ ಕಲ್ಪನೆಯನ್ನು ಡಾ| ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ವೈಚಾರಿಕ ಸಮಾಜ ಕಟ್ಟಲು ಕಾರಣರಾದರು. ಬೌದ್ಧ ಧರ್ಮದಲ್ಲಿ ಹೇಳಲಾಗುತ್ತಿರುವ ಸಂದೇಶ ಮತ್ತು ಬಸವೇಶ್ವರರ ಸಂದೇಶಗಳು ಒಂದೆಯಾಗಿದ್ದು, ಇಬ್ಬರ ಸಂದೇಶ ಬೆಸೆಯುವ ಕಾರ್ಯ ಅಗತ್ಯವಾಗಿದೆ ಎಂದು ಹೇಳಿದರು.
ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ತಾಲೂಕು ಅಧ್ಯಕ್ಷ ನಾನಾಗೌಡ ಕೂಡಿ ಅತಿಥಿಗಳಾಗಿ ಆಗಮಿಸಿದ್ದರು. ಲಿಂ| ಹಣಮಂತ್ರಾಯ ಕಲ್ಲಾ ಅವರ ಪುಣ್ಯಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು. ಕಸಾಪ ಅಧ್ಯಕ್ಷ ಶಿವಣ್ಣಗೌಡ ಪಾಟೀಲ, ಷಣ್ಮುಖಪ್ಪಗೌಡ ಹಿರೇಗೌಡ, ಮಹಾಂತಗೌಡ ಚನ್ನೂರ, ಸಿದ್ಧು ಯಂಕಂಚಿ, ಬಸವರಾಜ ಕಲ್ಲಾ, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ವಿಶ್ವನಾಥರೆಡ್ಡಿ ರಾಜಳ್ಳಿ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ಬಸವರಾಜ ಚಿನಗುಡಿ, ವೀರಣ್ಣ ಭೂತಪುರ, ನಿಂಗಣ್ಣ ಹಳಿಮನಿ, ಅಶೋಕ ಸನಗುಂದಿ, ಗುರು ಮಾಲಿಪಾಟೀಲ ಪಾಲ್ಗೊಂಡಿದ್ದರು. ಶಿಕ್ಷಕ ಬಸವರಾಜ ಕಲ್ಲಾ ಸ್ವಾಗತಿಸಿದರು. ಡಾ| ವಿಶ್ವನಾಥ ಡೋಣೂರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.