ಬಸವಾದಿ ಪ್ರಮಥರು ಸರ್ವ ಜನಾಂಗದ ಚೇತನ
Team Udayavani, Dec 18, 2017, 10:47 AM IST
ಆಳಂದ: ಬಸವಾದಿ ಪ್ರಮಥರು ಸರ್ವ ಜನಾಂಗದ ಚೇತನ. ಅವರ ತತ್ವ ವಚನ ಸಾಹಿತ್ಯ ನಡೆ, ನುಡಿ ಆದರ್ಶ ಪ್ರತಿಯೊಬ್ಬರಿಗೂ ಸನ್ಮಾರ್ಗದ ರಹದಾರಿಯಾಗಿದೆ. ಅರಿತು ಆಚರಣೆಗೆ ತರಬೇಕು ಎಂದು ಖಜೂರಿ ಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ಹೇಳಿದರು.
ತಾಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ಮಠದ ಪೀಠಾಧಿಕಾರ ವಹಿಸಿಕೊಂಡ 22ನೇ ವರ್ಷಾಚರಣೆ ಪ್ರಯುಕ್ತ
ಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು.
ಶರಣ ಪರಂಪರೆ ಮುಂದುವರಿಸಿದ ಖಜೂರಿ ಕೋರಣೇಶ್ವರರು ಮಾನವ ಜನಾಂಗದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಬೇಡಿದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಹೀಗಾಗಿ ಖಜೂರಿ ಮಠ ಅಪರೂಪದ ಕ್ಷೇತ್ರವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಆದರ್ಶ ಜೀವನಕ್ಕೆ ಗುರಿ ಮತ್ತು ಗುರು ಅತ್ಯಗತ್ಯವಾಗಿದೆ. ಮಠದ ಅಧಿಕಾರ ವಹಿಸಿಕೊಂಡ ಆರಂಭದ ವರ್ಷಗಳಿಂದ ಹಲವು ತೊಂದರೆಗಳ ನಡುವೆ 22 ವರ್ಷಗಳ ಕಾಲ ಭಕ್ತರ ಭಕ್ತಿ ಶ್ರಮದಿಂದ ಶ್ರೀಮಠ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದರು.
ಶಿವಾನಂದ ಸ್ವಾಮಿಗಳು, ಶರಣಿ ನೀಲಲೋಚನ ತಾಯಿ, ನಮ್ಮ ಕರುನಾಡು ವೇದಿಕೆ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಬಾರ ಮಾತನಾಡಿ, ಶ್ರೀಗಳ ಧಾರ್ಮಿಕ ಮತ್ತು ಸಮಾಜ ಕಾರ್ಯ ಶ್ಲಾಘಿಸಿದರು. ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಯ್ಯ ಗುತ್ತೇದಾರ ಶ್ರೀಗಳನ್ನು ಸನ್ಮಾನಿಸಿದರು.
ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಗುರು ಎಸ್. ಬಂಗರಗಿ, ಮುಖಂಡ ಶರಣು ಪಾಟೀಲ ಕೊಡಲಹಂಗರಗಾ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಕಂದಗುಳೆ, ನಿಜಾಚರಣೆ ವಸತಿ ಶಾಲೆ ಮುಖ್ಯ ಶಿಕ್ಷಕ ಸುಭಾಷ ಹರಳಯ್ಯ, ಶಿವುಕುಮಾರ ಹಳ್ಳೆ, ಶಂಕರ ಬಂಡೆ, ಪ್ರಭು ಅಲ್ದಿ ಇದ್ದರು. ಕೊರಣೇಶ್ವರ ಭಜನಾ ಸಂಘದ ದಾನಯ್ಯಸ್ವಾಮಿ, ಕರಬಸಪ್ಪ ಬಂಗರಗಿ, ಶಿವಶರಣಪ್ಪ ಸುಲ್ತಾನಪುರ, ನರಸಿಂಗ ನಗರೆ, ಸಂಜು ಫುಲಾರ, ಭೀಮಾಶಂಕರ ಹಳ್ಳೆ, ಲಿಂಗಣ್ಣ ವಾರಿಕ, ಶ್ರೀಕಾಂತ ಬಂಗರಗೆ, ಹಣಮಂತಪ್ಪ ಔರಾದೆ ಸೇರಿದಂತೆ ಶರಣಿಯರಿಂದ ಶರಣರ ಜೀವನ ಕುರಿತು ಭಕ್ತಿಗೀತೆ ಭಜನೆ ಕಾರ್ಯಕ್ರಮ ನಡೆಯಿತು. ಕುಮಾರ ಬಂಡೆ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ ಪ್ರಜಾರಿ ಸ್ವಾಗತಿಸಿದರು. ಮಹಾ ಮಂಗಲ, ಭಕ್ತಾದಿಗಳಿಗೆ ದಾಸೋಹ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.