ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ
Team Udayavani, Oct 31, 2021, 6:08 PM IST
ಕಲಬುರಗಿ: ಕಲಬುರಗಿ ಕಂಪು, ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆಯಲ್ಲದೇ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹತ್ತಾರು ಕಾರ್ಯಗಳನ್ನು ಕೈಗೊಂಡಿರುವ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಅದೇ ರೀತಿ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಹೋರಾಟಗಾರ, ಶಿಕ್ಷಕ, ಪತ್ರಕರ್ತ, ಉದ್ಯಮಿ, ಸಮಾಜ ಸೇವಕ ಸಂಘ ಪರಿವಾರದ ಒಡನಾಡಿ 90 ವಯಸ್ಸಿನ ಮಹಾದೇವಪ್ಪ ಕಡೆಚೂರ ಪ್ರಸಕ್ತ 2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ನಾಲ್ಕುವರೆ ದಶಕಗಳ ಹಿಂದೆ ಗಡಿನಾಡು ಸೇಡಂದಲ್ಲಿ ಕನ್ನಡ ಶಾಲೆ ಆರಂಭಿಸುವುದರೊಂದಿಗೆ ಆರಂಭಗೊಂಡ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ತನ್ನ ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದು, ಈಚೆಗಂತು ಸಮಗ್ರ ಕಲ್ಯಾಣ ಕರ್ನಾಟಕ ವಿಕಾಸಕ್ಕಾಗಿ ಹತ್ತಾರು ಬೃಹತ್ ಕಾರ್ಯಕ್ರಮಗಳನ್ನು ಜತೆಗೆ ಯೋಜನೆ ರೂಪಿಸಿರುವ ಸಂಸ್ಥೆ ಇಂದು ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದೆ.
ಇಡೀ ರಾಷ್ಟ್ರವೇ ಕಲಬುರಗಿಯತ್ತ ನೋಡುವ ಹಾಗೆ ಕಲಬುರಗಿ ಕಂಪು ನಡೆಸಿರುವ ಸಮಿತಿಯು ತದನಂತರ ಕಲ್ಯಾಣ ಕರ್ನಾಟಕ ವಿಕಾಸ ಯಾತ್ರೆ ನಡೆಸಿ ಈ ಭಾಗವನ್ನು ಕಲ್ಯಾಣ ಕರ್ನಾಟಕ ಹಾಗೂ ಗುಲ್ಬರ್ಗ ಇರುವುದನ್ನು ಕಲಬುರಗಿ ಎಂಬುದಾಗಿ ನಾಮಕರಣವಾಗಬೇಕೆಂದು ಕಹಳೆ ಮೊಳಗಿಸಿದ್ದೇ ಈ ಯಾತ್ರೆಯಲ್ಲಿ.
ಇದನ್ನೂ ಓದಿ:- ತೀರ್ಥಹಳ್ಳಿ ಗೋಪಾಲ್ ಆಚಾರ್ಯರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ
ಮಾಜಿ ಸಂಸದ, ಹಿರಿಯ ನಾಯಕ ಡಾ. ಬಸವರಾಜ ಪಾಟೀಲ್ ಸೇಡಂ ಈ ಸಮಿತಿಯ ಅಧ್ಯಕ್ಷರಾದ ವೇಳೆಯಲ್ಲಿ ಸೇವಾ ಕಾರ್ಯಗಳು ಬಹಳಷ್ಟು ವಿಶಾಲಗೊಂಡವು. ಸೇಡಂ ಸಮಿತಿಗೆ ಈಗ ಸಂರಕ್ಷರಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ ಹೆಚ್ಚಳ, ಕೌಶಲ್ಯಾಭಿವೃದ್ದಿ , ಕೃಷಿ, ಧಾರ್ಮಿಕ ಹೆಚ್ಚಳ ಜತೆಗೇ ಕಲೆ ಸಾಂಸ್ಕೃತಿಕ ಹೆಚ್ಚಳಕ್ಕೆ ಸಮಿತಿ ಅವಿತರವಾಗಿ ಶ್ರಮಿಸುತ್ತಿದೆ. ಕಳೆದ ಆರು ವರ್ಷಗಳಿಂದ ಸದಾನಂದ ಮಹಾಸ್ವಾಮಿಗಳವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ರಾಜ್ಯೋತ್ಸವ ಬಂದಿರುವುದು ಹಾಗೂ ತಮ್ಮ ಸೇವಾ ಕಾರ್ಯ ಗುರುತಿಸಿ ರಾಜ್ಯೋತ್ಸವ ಬಂದಿರುವುದು ಸೌಭಾಗ್ಯ ವಾಗಿದೆ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.
ನವಂಬರ ೧ ರಂದು ನಡೆಯುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸದಾಶಿವ ಸ್ವಾಮಿಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
90 ವಯಸ್ಸಿನ ಮಹಾದೇವಪ್ಪ ಕಡೇಚೂರು ಅವರು ಕಲಬುರಗಿ ಕಹಳೆ ಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ದುಡಿದಿದ್ದಾರೆ. ಹೈ.ಕವಿಮೋಚನಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಂಘ ಪರಿವಾರದ ಜತೆ ಉತ್ತಮ ಒಡನಾಟ ಹೊಂದಿರುವ ಕಡೇಚೂರ ಅವರು ಈ ಹಿಂದೆ ಬಿಜೆಪಿ ಜಿಲ್ಲಾ ಘಟಕ ಖಜಾಂಚಿ ಯಾಗಿ ಹಾಗೂ ಜಿಲ್ಲಾ ಅರ್ಯ ಈಡಿಗ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆರು ಕೃತಿಗಳನ್ನು ಹೊರ ತಂದಿರುವ ಕಡೇಚೂರ ಮತ್ತೆ ರಡು ಕೃತಿಗಳು ಅಂಚಿಗೆ ಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.