ಮೊಸಳೆಕಣ್ಣೀರು ಸುರಿಸುವರ ಬಗ್ಗೆ ಎಚ್ಚರವಿರಲಿ
Team Udayavani, Mar 19, 2017, 2:52 PM IST
ಕಲಬುರಗಿ: ಇಷ್ಟು ದಿನ ಅಂಬೇಡ್ಕರ್ ಬಗ್ಗೆ ಒಂದೂ ಶಬ್ದ ಮಾತನಾಡದಿರುವರು ಈಗ ಜ್ಞಾನೋದಯವಾಗಿರುವಂತೆ ಮಾತನಾಡುತ್ತಿರುವ ಬಗ್ಗೆ ಹಾಗೂ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಇಲ್ಲ-ಸಲ್ಲದ್ದನ್ನು ಹೇಳುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವವರ ಬಗ್ಗೆ ಎಚ್ಚರದಿಂದರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಚಿತ್ತಾಪುರ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ ಅವರ 125ನೇ ಜಯಂತ್ಯುತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಡಾ| ಅಂಬೇಡ್ಕರ ಅವರುಜಾತಿ- ವರ್ಗ ರಹಿತ ಸಮಾಜ ನಿರ್ಮಾಣ ಪರಿಕಲ್ಪನೆ ಹಾಗೂ ಸಂಪತ್ತು ಎಲ್ಲರಿಗೂ ಸಮಾನವಾಗಿ ಸಿಗಲಿ, ಒಂದೇ ಕಡೆ-ಒಬ್ಬರ ಬಳಿಯೇ ಕೇಂದ್ರಿಕೃತವಾಗದಿರಲೆಂದು ಇಡೀ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ.
ಹೀಗಾಗಿ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಾಗಿದೆ ಎಂದರು. ರಾಜ್ಯ ಸರ್ಕಾರ ಸರ್ವರಿಗೂ ಅನುಕೂಲವಾಗುವ ಬಜೆಟ್ ನೀಡಿದ್ದರೂ ಬಿಜೆಪಿಯವರು ಬೀದಿಗಿಳಿದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕ್ಷುಲ್ಲಕ ವಿಷಯ ತೆಗೆದುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಹೀಗಾಗಿ ಅವರ ಬಗ್ಗೆ ಎಚ್ಚರವಿರುವುದು ಅಗತ್ಯವಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಕರೆ ನೀಡಿದರು.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕಳೆದ ವರ್ಷ 19543 ಕೋಟಿ ರೂ. ಅನುದಾನ ಒದಗಿಸಿದ್ದರೆ, 2017-18ನೇ ಸಾಲಿನಲ್ಲಿ 27704 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 47ರಷ್ಟು ಹೆಚ್ಚಾಗಿರುವುದು ಒಂದು ಐತಿಹಾಸಿಕ ದಾಖಲೆಯಾಗಿದೆ. ಡಾ| ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ಶತಮಾನೋತ್ಸವ ಅಂಗವಾಗಿ ರಾಜ್ಯದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ 125 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಹೋಬಳಿಗೊಂದು ವಸತಿ ಶಾಲೆ ನಿರ್ಮಿಸಲಾಗುವುದು. ಇತ್ತೀಚೆಗೆ ಸಂಸದ ಖರ್ಗೆ ಅವರು ಈ ಭಾಗದ ಅಭಿವೃದ್ಧಿ ಸಂಬಂಧವಾಗಿ ಕೇಳಲಾದ ಎಲ್ಲ ಬೇಡಿಕೆಗಳಿಗೆ ಘೋಷಣೆಯಲ್ಲಿ ಅಸ್ತು ನೀಡಲಾಗಿದೆ ಎಂದು ಹೇಳಿದರು. ಲೋಕಸಭಾ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಸಕ್ತ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಕೋಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿಜಶರಣ ಅಂಬಿಗರ ಚೌಡಯ್ಯ ನಿಗಮವನ್ನು ಸ್ಥಾಪಿಸುವ ಬಗ್ಗೆ ಘೋಷಿಸಿರುವುದು ಸ್ವಾಗತಾರ್ಹ.
ಇದಲ್ಲದೇ ಆಡಳಿತ ವಿಕೇಂದ್ರೀಕರಣದ ಹಿತದೃಷ್ಟಿಯಿಂದ ಸರ್ಕಾರ ರಾಜ್ಯದಲ್ಲಿ 49 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ ಪ್ರಕಟಿಸಿದ್ದು, ಇದರಲ್ಲಿ ನಾಲ್ಕು ತಾಲೂಕುಗಳು ಕಲಬುರಗಿ ಜಿಲ್ಲೆಗೆ ಸೇರಿವೆ. ಈ ಭಾಗದ ದಶಕಗಳಿಂದ ನನೆಗುದ್ದಿಗೆಬಿದ್ದ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇದರಿಂದ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಡಾ| ಬಿ.ಆರ್. ಅಂಬೇಡ್ಕರವರ 125ನೇ ಜನ್ಮ ಶತಮಾನೋತ್ಸವ ಅಂಗವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ರಾಜ್ಯ ಸರ್ಕಾರವು 150 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರರ ಹೆಸರಿನಲ್ಲಿ ಎಕನಾಮಿಕ್ಸ್ ಕಾಲೇಜು ಪ್ರಾರಂಭಿಸಲಿದೆ ಎಂದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದಕ್ಕಾಗಿ ಕೋಲಿ ಸಮಾಜದ ಮುಖಂಡ ತಿಪ್ಪಣ್ಣಪ್ಪ ಕಮಕನೂರ, ಕಾಳಗಿ ನೂತನ ತಾಲೂಕವನ್ನಾಗಿಸಿದ್ದಕ್ಕೆ ಜಿ.ಪಂ ಸದಸ್ಯ ಜೇಶ ಗುತ್ತೇದಾರ, ಬಸವರಾಜ ಪಾಟೀಲ ಬೆಣ್ಣೂರ ಮತ್ತು ಶಹಾಬಾದ ತಾಲೂಕು ಮಾಡಿದ್ದಕ್ಕೆ ರಶೀದಸಾಬಮುಂತಾದವರು ಮುಖ್ಯಮಂತ್ರಿಯವರನ್ನು ಸನ್ಮಾನಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಶಾಸಕರಾದ ಡಾ| ಉಮೇಶ ಜಾಧವ, ಶಾಸಕರಾದ ಡಾ| ಅಜಯಸಿಂಗ, ಜಿ. ರಾಮಕೃಷ್ಣ, ಶರಣಪ್ಪ ಮಟ್ಟೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗನಗೌಡ ಸಂಕನೂರ, ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು,
ಮುಖಂಡರಾದ ನಾಗರಡ್ಡಿ ಪಾಟೀಲ ಕರದಾಳ, ಮಾಪಣ್ಣ ಗಂಜಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಿಪ್ಪಣ್ಣಪ್ಪ ಕಮಕನೂರ, ಲಿಂಗಾರೆಡ್ಡಿ ಭಾಸರೆಡ್ಡಿ, ರಮೇಶ ಮರಗೋಳ, ಸೋಮಶೇಖರ ಪಾಟೀಲ್, ವೀರಣ್ಣಗೌಡ ಪರಸರೆಡ್ಡಿ, ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್, ಜಿಪಂ ಸದಸ್ಯರಾದ ಶಶಿಕಲಾ ತಿಮ್ಮನಾಯಕ, ಸುರೇಖಾ ನಿಂಬೆಣಪ್ಪ, ಬಸವರಾಜ ಪಾಟೀಲ ಹೇರೂರ, ತಾ.ಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ,
ಉಪಾಧ್ಯಕ್ಷ ಹರೀನಾಥ ಚವ್ಹಾಣ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಉಪಾಧ್ಯಕ್ಷ ಮಹ್ಮದ ರಸೂಲ್ ಮುಸ್ತಫಾ, ಮುಕ್ತಾರ ಪಟೇಲ್, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಸೂರ್ಯಕಾಂತ ಪೂಜಾರಿ, ಜಯಂತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವರುದ್ರ ಭೀಣಿ, ಗೌರವ ಅಧ್ಯಕ್ಷ ಟೋಪಣ್ಣ ಕೋಮಟೆ, ಶಿವಕಾಂತ ಬೆಣ್ಣೂರಕರ್, ಸುನೀಲ್ ದೊಡ್ಮನಿ, ಆಸ್ತೀಕ ಮೌರ್ಯ, ಮಲ್ಲಿಕಾರ್ಜುನ ಬೆಣ್ಣೂರಕರ್,
ಡಾ| ಬಿ.ಆರ್. ಅಂಬೇಡ್ಕರವರ 125ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಬಡಿಗೇರ ಮತ್ತು ತಂಡದವರು ನಾಡಗೀತೆ ಹಾಡಿದರು. ಸಮಿತಿ ಅಧ್ಯಕ್ಷ ಮಾಪಣ್ಣ ಗಂಜಗೀರಿ ಸ್ವಾಗತಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.