ಕ್ಯಾನ್ಸರ್‌ಗೆ ಕಲಬುರಗಿಯಲ್ಲೇ ಉತ್ತಮ ಚಿಕಿತ್ಸೆ: ನಿಗ್ಗುಡಗಿ
Team Udayavani, Nov 27, 2017, 10:29 AM IST
ಕಲಬುರಗಿ: ಜೀವಮಾರಕ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಇನ್ನು ಬೆಂಗಳೂರು, ಹೈದ್ರಾಬಾದ ಸೇರಿದಂತೆ ದೂರದ ಊರುಗಳಿಗೆ ಕಲಬುರಗಿ ಜನತೆ ಹೋಗುವ ಅಗತ್ಯವಿಲ್ಲ. ಎಚ್‌ಸಿಜಿ (ಹೆಲ್ತ್ ಕೇರ್ ಗ್ಲೋಬಲ್)ಆಸ್ಪತ್ರೆಯಲ್ಲೇ ಬ್ರಾಕಿ ಥೆರಪಿ ಯಂತ್ರ ಸ್ಥಾಪಿಸಲಾಗಿದೆ ಎಂದು ರೆಡಿಯೇಷನ್ ಆಂಕೊಲಾಜಿ ತಜ್ಞ ಡಾ| ಶಾಂತಲಿಂಗ ನಿಗ್ಗುಡಗಿ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಖೂಬಾಪ್ಲಾಟ್‌ನಲ್ಲಿರುವ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರಾಕಿಥೆರಪಿ ಯಂತ್ರ ಅಳವಡಿಸಲಾಗಿದೆ. ಈ ಯಂತ್ರದಿಂದ ಕ್ಯಾನ್ಸರ್ ಯಾವ ಹಂತದಲ್ಲಿದೆ. ದೇಹದ ಯಾವ ಜಾಗೆಯಲ್ಲಿದೆ. ಅದಕ್ಕೆ ನಿಖರವಾಗಿ ವಿಕೀರಣ (ರೇಡಿಯೇಷನ್) ಚಿಕಿತ್ಸೆ ನೀಡುವ ಯಂತ್ರ ಇದಾಗಿದೆ. ಇದರಿಂದ ಇನ್ನು ಮುಂದೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು ಎಂದರು.
ಇಂತಹ ಯಂತ್ರ ಸುತ್ತಲಿನ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಸೊಲ್ಲಾಪುರದಲ್ಲೂ ಇಲ್ಲ. ಹುಬ್ಬಳ್ಳಿಯಲ್ಲಿ ಇದ್ದರೂ ನಮ್ಮ ಆಸ್ಪತ್ರೆಯಲ್ಲಿಲ್ಲ. ಬ್ರಾಕಿಥೆರಪಿಯನ್ನು ವಿಶೇಷವಾಗಿ ಪ್ರೊಸ್ಟೇಟ್, ತಲೆ ಕುತ್ತಿಗೆ, ನಾಲಿಗೆ, ಪಿತ್ತಕೋಶ, ಗರ್ಭಕೋಶ
ಮತ್ತು ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ. ಕ್ಯಾನ್ಸರ್ ಪೀಡಿತ ಭಾಗದ ಮೇಲೆ ನಿಖರವಾಗಿ ಮತ್ತು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ವಿಕಿರಣಗಳನ್ನು ಹಾಯಿಸಿ ಬ್ರಾಕಿ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ ಎಂದರು.
ಈ ಚಿಕಿತ್ಸೆಯನ್ನು ಮೊದಲು ಬೆಂಗಳೂರಿನಂತಹ ಮಹಾನಗರದಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ಈ ಯಂತ್ರ ಅಳವಡಿಸಲಾಗಿದೆ. ಇದರಿಂದ ಕಲಬುರಗಿ ಸುತ್ತಲಿನ ಜಿಲ್ಲೆಗಳಲ್ಲಿನ ರೋಗಿಗಳು ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಅತಿ ಕಡಿಮೆ ಹಣದಲ್ಲಿ ಚಿಕಿತ್ಸೆ ದೊರೆಯಲಿದೆ. ಆರೇಳು ಸಾವಿರದಲ್ಲಿ ಒಂದು ಸಿಟಿಂಗ್ ಮಾಡಬಹುದು. ಇಂತಹ ಮೂರ್‍ನಾಲ್ಕು ಸಿಟಿಂಗ್‌ಗಳಿಂದ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದರು.
ಇದರಿಂದ ಬಡ ರೋಗಿಗಳ ಹಣ ಮತ್ತು ಸಮಯ ಉಳಿತಾಯವಾಗಲಿದೆ. ಎಚ್‌ಸಿಜಿ ಆಸ್ಪತ್ರೆಯಲ್ಲಿ ಸರಕಾರದ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯಬಹುದಾಗಿದೆ
ಎಂದರು.
ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಬ್ರಾಕಿ ಥೆರಪಿ ಯಂತ್ರ ಉದ್ಘಾಟಿಸಲಾಯಿತು. ಡಾ| ನಂದೀಶಕುಮಾರ ಜೀವಣಗಿ, ಡಾ| ಶರಣ ಹಟ್ಟಿ, ಡಾ| ಸುದರ್ಶನ ಲಾಖೆ, ಎಚ್‌ಸಿಜಿ ಸೆಂಟರ್ ಮುಖ್ಯಸ್ಥ ಡಾ| ಅಬ್ದುಲ್ ರಹೀಮ್ ಸೆಲ್ಸ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಮಹೇಶ ಎಸ್., ಮಾರ್ಕೆಟಿಂಗ್ ಮುಕೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.