ದಾಖಲೆಯಲ್ಲೇ ಕಾಮಗಾರಿ ಮುಗಿಸಿದ ಬಿದನೂರ ಗ್ರಾಪಂ!

ಬೋಗಸ್‌ ಬಿಲ್‌ ಸೃಷ್ಟಿಸಿ ಹಣ ದುರ್ಬಳಕೆ

Team Udayavani, Jul 18, 2020, 1:13 PM IST

ದಾಖಲೆಯಲ್ಲೇ ಕಾಮಗಾರಿ ಮುಗಿಸಿದ ಬಿದನೂರ ಗ್ರಾಪಂ!

ಕಲಬುರಗಿ: ಗ್ರಾಪಂ ಚುನಾಯಿತ ಆಡಳಿತಾವಧಿ ಮುಕ್ತಾಯವಾಗಿದ್ದು, ಈಗ ಪಿಡಿಒ ಅಧಿಕಾರಿಗಳದ್ದೇ ಆಟ ಎನ್ನುವಂತಾಗಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಹಲವು ಗ್ರಾಪಂಗಳಲ್ಲಿ ಹಲವು ಕಾಮಗಾರಿಗಳು ಕಾಗದದಲ್ಲೇ ಮುಗಿದಿವೆ. ಕಾಗದದಲ್ಲೇ ಮುಗಿದ ಕುಡಿಯುವ ನೀರಿನ ಕಾಮಗಾರಿಗಳಂತು ಲೆಕ್ಕವೇ ಇಲ್ಲ ಎನ್ನುವಂತಿದೆ.

ಅದರಂತೆ ಮನೆ ಇದ್ದವರಿಗೆ ಮನೆ ಹಂಚಿಕೆ, ಅದರಲ್ಲೂ ಒಂದೇ ಮನೆಯವರಿಗೆ ಎರಡೆರಡು ಮನೆ, ಶೌಚಾಲಯ ಪ್ರೋತ್ಸಾಹ ಧನದಲ್ಲೂ ಗೋಲ್‌ ಮಾಲ್‌ ನಡೆದಿದೆ. ಸಾಮಾನ್ಯ ವರ್ಗದ ಜನರಿಗೆ ಪರಿಶಿಷ್ಟ ವರ್ಗದ ಪ್ರೋತ್ಸಾಹ ಧನ ಮಂಜೂರಾತಿ ಮಾಡಿ ಹಿಂದಿನಿಂದ ಹೆಚ್ಚುವರಿ ಹಣ ಪಡೆದಿರುವಂತಹ ಘೋರ ಪ್ರಕರಣಗಳು ಸಹ ನಡೆದಿವೆ. ಇದೆಲ್ಲದರ ಕಾರಣಕ್ಕೆ ಇನ್ನೂ ಗ್ರಾಮಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೇ ಯಥಾಸ್ಥಿತಿಯಲ್ಲಿವೆ.

ಬೋಗಸ್‌ ಬಿಲ್‌ ಸೃಷ್ಟಿಸಿ ಹಣ ದುರ್ಬಳಕೆ ಹಾಗೂ ಕಾಗದದಲ್ಲೇ ಕಾಮಗಾರಿ ಪೂರ್ಣಗೊಂಡಿರುವ ಹಾಗೂ ಇತರ ಅವ್ಯವಹಾರ ಆರೋಪ ಹಿನ್ನೆಲೆಯಲ್ಲಿ ಅಫ‌ಜಲಪುರ ತಾಲೂಕಿನ ಬಿದನೂರ ಗ್ರಾಪಂನಲ್ಲಿ ಪಿಡಿಒ ವಿರುದ್ಧ ತನಿಖಾ ವರದಿ ರೂಪಿಸಿ ವಾರದೊಳಗೆ ಸಲ್ಲಿಸುವಂತೆ ಜಿಪಂ ಸಿಇಒ ಅಫ‌ಜಲಪುರ ತಾಪಂ ಇಒಗೆ ಸೂಚಿಸಿದ್ದಾರೆ.

ಅವ್ಯವಹಾರಗಳ ವಿವರ: ಪಿಡಿಒ ಲಕ್ಷ್ಮೀ ಅವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೇ ತಮಗೆ ಬೇಕಾದ ವ್ಯಕ್ತಿಗಳಿಗೆ ಕೂಲಿ ಕೆಲಸ ಕೊಟ್ಟು ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡಿಕೊಂಡಿರುವುದು, 14ನೇ ಹಣಕಾಸು ಯೋಜನೆ ಅಡಿಯಲ್ಲಿ ಕೆಲವು ಕಾಮಗಾರಿಗಳು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೇ ಬೇಕಾದ ವ್ಯಕ್ತಿಯಿಂದ ಕೆಲಸ ಕೈಗೊಂಡು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳಿವೆ.

ಬಹು ಮುಖ್ಯವಾಗಿ ಕುಡಿಯುವ ಕರ (ಟ್ಯಾಕ್ಸ್‌) ವಸೂಲಾತಿ ಕೈಗೊಂಡು ಅದನ್ನು ಸರ್ಕಾರಕ್ಕೆ ಜಮಾ ಮಾಡದೇ ವೈಯಕ್ತಿಕವಾಗಿ ಬಳಸಿಕೊಂಡು ಕುಡಿಯುವ ನೀರಿನ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆಯೆಂದು ಕಲಬುರಗಿ ನಗರದ ಎಂಟರ್‌ ಪ್ರೈಸೆಸ್‌ನಿಂದ ಬೋಗಸ್‌ ಬಿಲ್‌ ಪಡೆದು ಹಚ್ಚಿ ಹಣ ಎತ್ತಿ ಹಾಕಲಾಗಿದೆ. ಏಕೆಂದರೆ ಬಿದನೂರ ಗ್ರಾಮದಲ್ಲಿ ಬಾವಿ ನೀರೆ ಬಳಕೆ ಮಾಡಲಾಗುತ್ತದೆ. ಬೋರ್‌ವೆಲ್‌, ಮೋಟಾರ್‌ ರಿಪೇರಿ ಹಾಗೂ ವಿದ್ಯುತ್‌ ಉಪಕರಣ ಸಾಮಾನುಗಳನ್ನು ಖರೀದಿಸಲಾಗಿದೆ ಎಂದು ಬಿಲ್‌ ಹಚ್ಚಿ ಹಣ ದುರ್ಬಳಕೆ ಮಾಡಿಕೊಂಡಿಲ್ಲದೇ ಕಾಮಗಾರಿಗಳ ಬಿಲ್ಲುಗಳಲ್ಲಿನ ಟಿಡಿಎಸ್‌ನ ಹಣವು ಸಹ ಸರ್ಕಾರಕ್ಕೆ ಸಂದಾಯ ಮಾಡದೇ ಈ ಹಣವನ್ನು ಡ್ರಾ ಮಾಡಿಕೊಂಡಿರುವುದು ಸೇರಿದಂತೆ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಸೇರಿದಂತೆ ಇತರ ಸಾಲು-ಸಾಲು ಅವ್ಯವಹಾರದ ಆರೋಪಗಳ ಕುರಿತು ವಿಚಾರಣೆಗೈದು ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ತಾಪಂ ಇಒ ಅವರಿಗೆ ಸೂಚಿಸಲಾಗಿದೆ.

ಬಿದನೂರ ಪಿಡಿಒ ವಿರುದ್ಧ ತನಿಖೆಗೆ ಸಿಇಒ ಆದೇಶ ನೀಡಿದ್ದಾರೆಂದು ಗೊತ್ತಾಗಿದೆ. ಆದರೆ ಆದೇಶ ಕೈ ಸೇರಿಲ್ಲ. ಆದೇಶ ಸಿಕ್ಕ ನಂತರ ತನಿಖೆ ಕೈಗೆತ್ತಿಕೊಂಡು ವರದಿ ಸಲ್ಲಿಸಲಾಗುವುದು. ಆದರೆ ಗೊಬ್ಬುರ ಬಿ. ಗ್ರಾಪಂನಲ್ಲಿ ಶೌಚಾಲಯ ಅನುದಾನ ದುರ್ಬಳಕೆ ಸೇರಿ ಇತರ ಅವ್ಯವಹಾರ ತನಿಖೆ ಪ್ರಗತಿಯಲ್ಲಿದೆ.  -ಡಾ.ಶಂಕರ ಕಣ್ಣೆ, ಇಒ, ತಾಪಂ ಅಫ‌ಜಲಪುರ.

 

-ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.