ಬಿಲ್ ಬಾಕಿ: ಕೆಕೆಆರ್‌ಡಿಬಿ 300 ಕಾಮಗಾರಿ ಸ್ಥಗಿತ
Team Udayavani, Sep 8, 2020, 5:45 PM IST
ಕಲಬುರಗಿ: ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಳೆದ 5 ತಿಂಗಳು ಒಂದೇ ಒಂದು ಕಾಮಗಾರಿ ಬಿಲ್ ಆಗದಿರುವುದು ಹಾಗೂ ಜತೆಗೆ ಸಮಯ ವಿಸ್ತರಣೆ ಮಾಡದಿರುವುದು ಗುತ್ತಿಗೆದಾರರ ಅಸಮಾಧಾನಕ್ಕೆ ಕಾರಣವಾಗಿದ್ದು, ತಾಳ್ಮೆ ಪರೀಕ್ಷೆಸದಿರುವಂತೆ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೇಗಜಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಗುತ್ತಿಗೆದಾರರು, ಕೆಕೆಆರ್ ಡಿಬಿಯಲ್ಲಿ 2020ರ ಏಪ್ರೀಲ್ ಟೆಂಡರ್ ಪಡೆದ ಕಾಮಗಾರಿಗಳಿಗೆ ಈಗ ಅರ್ಧಕ್ಕೆ ನಿಂತಿವೆ. ಕೆಲಸ ಮುಗಿದು ಮೂರನೇ ತಂಡದ ಪರಿವೀಕ್ಷಣ ವರದಿ ಜತೆಗೆ ಆಯಾ ವಿಭಾಗದ ಕಾಮಗಾರಿಗಳ ಬಿಲ್‌ಸಲ್ಲಿಕೆಯಾದರೂ ಪಾವತಿಯಾಗಿಲ್ಲ. ಒಟ್ಟಾರೆ ಕೆಕೆಆರ್‌ಡಿಬಿ ಕಾಮಗಾರಿಗಳು ಪಡೆದಿರುವ ಗುತ್ತಿಗೆದಾರರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಅಳಲು ತೋಡಿಕೊಂಡರು.
ಕೆಕೆಆರ್‌ಡಿಬಿ ಅಧ್ಯಕ್ಷರು ಜಿಲ್ಲೆಯವರೇ ಆಗಿದ್ದಾರೆ. ಈಗಲಾದರೂ ಕಾಮಗಾರಿಗಳತ್ತ ಕಣ್ಣು ಹಾಯಿಸಿ ಸ್ಥಗಿತಗೊಂಡಿರುವ 300 ಕಾಮರಿಗಳ ಚಾಲನೆಗೆ ಕ್ರಮ ಕೈಗೊಳ್ಳಬೇಕೆಂದು ಶೇಗಜಿ ಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರದ ವಿಳಂಬ ಹಾಗೂ ನಿರ್ಲಕ್ಷ್ಯ ನೀತಿಯಿಂದ ಮಾರುಕಟ್ಟೆಯಲ್ಲಿ ದರಗಳು ಏರುತ್ತಿವೆ. ಇದಕ್ಕೆಲ್ಲ ನಷ್ಟ ಭರಿಸುವರ್ಯಾರು? ಆದ್ದರಿಂದ ಕೆಕೆಆರ್‌ಡಿಬಿ ಎಚ್ಚೆತ್ತು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದರು.
ಗುತ್ತಿಗೆದಾರರಾದ ಎಂ.ಕೆ. ಪಾಟೀಲ್, ಸಂಜಯ್ ಆರ್.ಕೆ ಸೇರಿದಂತೆ ಮುಂತಾದ ಗುತ್ತಿಗೆದಾರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Begging-free ಇಂದೋರ್ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!
Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್ ಕಿಡಿ
Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್
Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್ ಕರೆ
T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.