ಹಕ್ಕಿ ಜ್ವರ ಭೀತಿಗೆ ಆಳಂದ ತಾಲೂಕು ಗಡಿಯಲ್ಲಿ ಕಟ್ಟೆಚರ
Team Udayavani, Mar 1, 2022, 9:44 AM IST
ಆಳಂದ: ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ತಾಲೂಕಿನ ಗಡಿಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪಂಚಾಯತ್ ಆಡಳಿತವು ಚೆಕ್‌ಪೋಸ್ಟ್ ಸ್ಥಾಪಿಸಿ ಕಟ್ಟೆಚ್ಚರ ವಹಿಸಿದೆ.
ಹೊರರಾಜ್ಯಗಳಿಂದ ಕೋಳಿತುಂಬಿ ಕೊಂಡು ಬರುವ ವಾಹನಗಳನ್ನು ತಪಾಸಣೆ ಹಾಗೂ ಹಕ್ಕಿ ಮೇಲೆ ನಿಯಂತ್ರಣ ಕೈಗೊಳ್ಳಲು ಪಶು ಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಬಿರುಸಿನ ತಪಾಸಣೆ ಆರಂಭಿಸಿದ್ದಾರೆ. ಈ ಕುರಿತು ಜಿಪಂ ಸಿಇಒ ಆದೇಶದ ಮೆರೆಗೆ ಪಶು ಸಂಗೋಪನಾ ಇಲಾಖೆಯು ಈಗಾಗಲೇ ಫೆ. 25ರಿಂದ ತಾಲೂಕಿನ ಖಜೂರಿ ಗಡಿ ಮತ್ತು ಹಿರೋಳಿ ಗಡಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಕೋಳಿ ಸಾಗಾಣೆಕೆ ವಾಹನ ತಪಾಸಣೆ ಕೋಳಿಗಳ ಆರೋಗ್ಯದ ಬಗ್ಗೆ ವೈದ್ಯರ ದೃಢೀಕರಣ ಪ್ರಮಾಣ ಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಕೋಳಿ ಸಾಗಾಣಿಕೆಯ ವಾಹನ ತಪಾಸಣೆ ಮತ್ತು ವೈದ್ಯರ ಪ್ರಮಾಣಪತ್ರ ಹೊಂದಿರಬೇಕು. ತಪಾಸಣೆ ನಡೆಸಿದ ಕೋಳಿಗಳ ಆರೋಗ್ಯದ ಶಾಂಪಲಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ.
ಹಕ್ಕಿಜ್ವರಕ್ಕೆ ಚಿಕಿತ್ಸೆಯಿಲ್ಲ
ಇದೊಂದು ಅಂಟು ರೋಗವಾಗಿದ್ದರಿಂದ ಒಂದು ಕೋಳಿಗೆ ಹರಡಿದರೆ ಇನ್ನೂಳಿದವುಗಳಿಗೆ ಹರಡುತ್ತದೆ. ಚಿಕಿತ್ಸೆ ನಿಯಂತ್ರಣಕ್ಕೆ ತರುವುದು ಕಷ್ಟಕರವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಉಲ್ಬಣಗೊಂಡರೆ ಕೋಳಿ ಸಾವನ್ನಪ್ಪುತ್ತವೆ. ಒಮ್ಮೆ ಹರಡಿದರೆ ಸಾಮೂಹಿಕವಾಗಿ ಹರಡುತ್ತದೆ. ಹಕ್ಕಿಜ್ವರ ಲಕ್ಷಣದ ಮೇಲೆ ಪತ್ತೆ ಹಚ್ಚಲಾಗುತ್ತದೆ. ಹಕ್ಕಿಜ್ವರ ಕಾಣಿಸಿಕೊಂಡ ಕೋಳಿಗೆ ಚಿಕಿತ್ಸೆ ಇಲ್ಲ. ಹರಡಿದ ಕೋಳಿಗೆ ನಿಷ್ಟ್ರೀಯ ಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಚೆಕ್‌ಪೋಸ್ಟ್‌ಗೆ ನಿಯೋಜನೆ
ಖಜೂರಿ ಚೆಕ್ ಪೋಸ್ಟ್‌ನಲ್ಲಿ ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಯ ಡಾ| ಸಚಿನ್ ಪಾತಾಳೆ, ಡಾ| ಮಂಜುನಾಥ ಬಿರಾದಾರ, ಸಿಬ್ಬಂದಿ ಮಹಿಬೂಬಸಾಬ್, ಮಹೇಶ, ಜಯಾನಂದ ಜಮಾದಾರ, ರಾಜಕುಮಾರ, ಶಿವಲಿಂಗಪ್ಪ ಸಾವಳಗಿ, ವಿಜಯಕುಮಾರ ಕುಂಬಾರ, ಬಾಬುರಾವ್ ಚವಾಳೆ, ಶ್ರೀಪಾದ, ಜಗನಾಥ ಕುಂಬಾರ, ನಾಗರಾಜ, ನೀಲಕಂಠ ಕೋಟೆ, ಶ್ರೀಕಾಂತ ಕಾಪ್ಸೆ, ಅಬ್ದುಲ್ ಗಫರ್, ಶರಣಯ್ಯ ಸ್ವಾಮಿ ಅವರ ನಿಯೋಜಿಸಲಾಗಿದೆ.
ಹಿರೋಳಿ ಚೆಕ್‌ಪೋಸ್ಟ್‌ನಲ್ಲಿ ನೋಡಲ್ ಅಧಿಕಾರಿ ಡಾ| ಮಹಾಂತೇಶ ಪಾಟೀಲ, ಡಾ| ಉದಯಕುಮಾರ, ಸಿಬ್ಬಂದಿ ಆದಿಲ್ ಅನ್ಸಾರಿ, ದಯಾನಂದ, ವಿಠ್ಠಲ ರೆಡ್ಡಿ, ಮಹಾಂತಪ್ಪ ಕಂಬಾರ, ಷಣ್ಮುಯ್ಯ, ಕಾಶಿನಾಥ, ರಮೇಶ ಹಾರಕೂಡೆ, ರಾಜು, ರವೀಂದ್ರ ಹೂಗಾರ, ಶಿವಾನಂದ, ಶಾಂತಕುಮಾರ ಹಿರೇಮಠ, ಗಂಗಾಧರ ಹಿರೇಮಠ, ಚಂದ್ರಕಾಂತ ಕುಲಕರ್ಣಿ ಮತ್ತಿತರು ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿದೆ.
ಮುಂಜಾಗ್ರತ ಕ್ರಮ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಹಿರೋಳ್ಳಿ ಮತ್ತು ಖಜೂರಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಕೋಳಿಗಳ ಆರೋಗ್ಯವನ್ನು ತಪಾಸಣೆ ಕೈಗೊಳ್ಳಲಾಗುತ್ತಿದೆ. ಆದರೆ ಸಾಗಾಣೆಗೆ ಸಂಪೂರ್ಣವಾಗಿ ತಡೆಯೋಡ್ಡುತ್ತಿಲ್ಲ. ಕೋಳಿಗಳ ಪರೀಕ್ಷೆ ಮಾದರಿ ಪಡೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ನಮ್ಮಲ್ಲಿ ಹಕ್ಕಿಜ್ವರ ಬರುವುದು ತೀರಾ ಕಡಿಮೆ ಇದೆ. ಕೋಳಿ ಫಾರಂಗಳಿಲ್ಲ. ಮಹಾರಾಷ್ಟ್ರದಲ್ಲೇ ಹೆಚ್ಚಿನ ಕೋಳಿ ಫಾರಂ ಇರುವುದರಿಂದ ಅಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯೋಗಾಲಯಕ್ಕೆ ನಿರಂತರವಾಗಿ ಶಾಂಪಲ್‌ಗಳು ರವಾನಿಸಿ ಮುಂಜಾಗ್ರತೆ ಕ್ರಮ ವಹಿಸಲಾಗುತ್ತಿದೆ. -ಡಾ| ಸಂಜಯ ರೆಡ್ಡಿ, ತಾಪಂ ಪ್ರಭಾರಿ ಇಒ ಮತ್ತು ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಆಳಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.