ಖರ್ಗೆ, ಶಿಂಧೆ ವಿರುದ ಬಿಜೆಪಿ ಅಭ್ಯರ್ಥಿ ತಲಾಶ್
Team Udayavani, Jan 2, 2019, 2:42 AM IST
ಕಲಬುರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಕ್ಷೇತ್ರಗಳು ಅದರಲ್ಲೂ ಕಾಂಗ್ರೆಸ್ ಹಿರಿಯ ನಾಯಕರು ಪ್ರತಿನಿಧಿಸುವ ಲೋಕಸಭೆ ಮೀಸಲು ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಪಿ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಸೂಕ್ತ ಹಾಗೂ ಪ್ರಬಲ ಪೈಪೋಟಿ
ನೀಡಬಲ್ಲ ಅಭ್ಯರ್ಥಿಗಳ ಶೋಧ ಕಾರ್ಯಕ್ಕೆ ಇಳಿದಿದೆ. ಕಾಂಗ್ರೆಸ್ ಸಂಸದೀಯ ನಾಯಕ ಡಾ.ಮಲ್ಲಿ ಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲಬುರಗಿ ಲೋಕ ಸಭೆ ಕ್ಷೇತ್ರ ಹಾಗೂ ಕೇಂದ್ರ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸುಶೀಲಕುಮಾರ ಶಿಂಧೆ
ಅವರ ಸೊಲ್ಲಾಪುರ ಕ್ಷೇತ್ರದಲ್ಲಿ ಅವರ ವಿರುದ್ಧ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದೆ.
ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ 3ನೇ ಬಾರಿಗೆ ಗೆಲುವು ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ. ಅದೇ ರೀತಿ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭೆ ಕ್ಷೇತ್ರದಿಂದ ಮಾಜಿ ಸಚಿವ ಸುಶೀಲಕುಮಾರ ಶಿಂಧೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಇದು ತಮ್ಮ ಕೊನೇ ಚುನಾವಣೆ ಎಂಬುದಾಗಿ ಘೋಷಿಸಿ ದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ರಾಷ್ಟ್ರ ನಾಯಕರಿಗೆ ಬಿಜೆಪಿಯಿಂದ ಎದುರಾಳಿ ಯಾರು ಎನ್ನುವುದೇ ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮಠಾಧೀಶರು ಕಣಕ್ಕೆ: ಸೊಲ್ಲಾಪುರ ಮೀಸಲು ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಶರದ್ ಬನಸೋಡೆ ಅವರನ್ನು ಕೈ ಬಿಟ್ಟು ಹೊಸಬರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಹೊಸ ಮುಖಗಳ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಕಳೆದ ಸಲ ನರೇಂದ್ರ ಮೋದಿ ಹವಾ ಜೋರಾಗಿತ್ತು. ಹೀಗಾಗಿ ಹೊಸಬರಾಗಿಯೂ ಬನಸೋಡೆ ಗೆಲುವು ಸಾಧಿಸಿದರು. ಆದರೆ ಈ ಸಲ ಮೋದಿ ಹೆಸರು ಜತೆಗೆ ಸ್ಥಳೀಯವಾಗಿ ಎಲ್ಲ ನಿಟ್ಟಿನಿಂದ ಬಲಿಷ್ಠರಾದರೆ ಗೆಲುವು ಸುಲಭವಾಗುತ್ತದೆ ಎಂಬುದಾಗಿ ಬಿಜೆಪಿ ವರಿಷ್ಠ
ಮಂಡಳಿ ನಂಬಿದ್ದರಿಂದ ಮಠಾಧೀಶರ ಹೆಸರು ಮುಂಚೂಣಿಗೆ ಬಂದಿವೆ. ಹೀಗಾಗಿ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಗೌಡಗಾಂವ ಮಠದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆ. ಗೌಡಗಾಂವದ ಡಾ.ಜಯಸಿದ್ದೇಶ್ವರ ಸ್ವಾಮೀಜಿ
ಈಗಾಗಲೇ ಹಲವು ಗ್ರಾಮಗಳನ್ನು ಸುತ್ತಾಡುತ್ತಿದ್ದು, ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಹೊಟಗಿ ಶ್ರೀಗಳನ್ನು ಪಕ್ಷದ ವರಿಷ್ಠರು ಸಂಪರ್ಕಿಸಿದ್ದಾರೆ.
ಡಾ.ಜಯಸಿಭ್ಯ ಸ್ವಾಮೀಜಿ ಭಾಷಾ ಪ್ರೌಢಿಮೆ ಜತೆಗೆ ವಾಕ್ಚಾತುರ್ಯ ಹೊಂದಿದ್ದು, ಹೆಚ್ಚಿನ ಭಕ್ತರ ಸಂಪರ್ಕ ಹೊಂದಿದ್ದಾರೆ. ಇವರು ಅಭ್ಯರ್ಥಿಯಾದರೆ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಬಲ್ಲರು ಎನ್ನುವುದು ಪಕ್ಷದಲ್ಲಿನ ಲೆಕ್ಕಾಚಾರ. ಬೇಡ ಜಂಗಮ ಆಧಾರದ
ಮೇಲೆ ಸ್ವಾಮೀಜಿ ಸ್ಪರ್ಧಿಸಿದರೆ ಮೇಲ್ವರ್ಗದ ಮತಗಳ ಜತೆಗೆ ಇತರ ಸಮುದಾಯಗಳ ಮತಗಳನ್ನು ಸರಳವಾಗಿ ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಇನ್ನುಳಿದಂತೆ ರಾಜ್ಯಸಭೆ ಸದಸ್ಯರಾಗಿರುವ ಪುಣೆಯ ಅಮರ ಸಾಬಳೆ ಸ್ಪರ್ಧಿಸುವ ಕುರಿತಾಗಿ
ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಹಾಲಿ ಸಂಸದರೂ ಮತ್ತೂಂದು ಅವಕಾಶಕ್ಕಾಗಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯಿಂದ ವಿಜಯಕುಮಾರ ದೇಶಮುಖ, ಸುಭಾಷ ದೇಶ ಮುಖ ಇಬ್ಬರೂ ಸಚಿವರು ಪ್ರತಿನಿಧಿಸುತ್ತಿದ್ದು, ಇವರಿ
ಬ್ಬರ ಮೇಲೆ ಅಭ್ಯರ್ಥಿ ಆಯ್ಕೆ ಹೆಚ್ಚು ಅವಲಂಬಿತವಾಗಿದೆ.
ಖರ್ಗೆ ಎದುರು ಯಾರು?: ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಎದುರು ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಕಳೆದ ಸಲ ಸ್ಪರ್ಧಿಸಿದ್ದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಇನ್ನುಳಿದಂತೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಬಾಬುರಾವ ಚವ್ಹಾಣ, ಮುಖಂಡರಾದ ಸುಭಾಷ ರಾಠೊಡ, ನಾಮದೇವ ರಾಠೊಡ ಸೇರಿದಂತೆ ಹಲವರ ಹೆಸರುಗಳು ಬಿಜೆಪಿಯಿಂದ ಕೇಳಿ ಬರುತ್ತಿದೆ. ಬಿಜೆಪಿ ವರಿಷ್ಠ ಮಂಡಳಿ ಚಿಂಚೋಳಿ ಕ್ಷೇತ್ರದ ಶಾಸಕ ಕಾಂಗ್ರೆಸ್ ಪಕ್ಷದ ಡಾ.ಉಮೇಶ ಜಾಧವ್ ಅವರಿಗೆ ಗಾಳ ಹಾಕಲು ಈಗಾಗಲೇ ಹಲವು ನಿಟ್ಟಿನ ಪ್ರಯತ್ನ ನಡೆಸಿದೆ. ಕೊನೆ ಗಳಿಗೆಯಲ್ಲಿ ಡಾ.ಜಾಧವ್ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ. ನಾನಂತೂ ಕಾಂಗ್ರೆಸ್ ಬಿಡಲ್ಲ ಎಂದು ಈಗಾಗಲೇ ಜಾಧವ್ ಹಲವು ಸಲ ಹೇಳಿದ್ದಾರೆ. ಆದರೆ ಈಚೆಗೆ ನಡೆದ
ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ಪಕ್ಷದ ಮೇಲೆ ಸ್ವಲ್ಪ ಮುನಿಸಿಕೊಂಡಿದ್ದಾರೆ. ಇದು ಯಾವ ಸ್ವರೂಪ ಪಡೆದು ಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ಅಡಗಿದೆ.
ಮೋದಿ ಭಾಷಣದ ಮೇಲೆ ಕಣ್ಣು
ನರೇಂದ್ರ ಮೋದಿ 2014ರ ಫೆ.28ರಂದು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಪಕ್ಷದ ವಿಭಾಗೀಯ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ತದನಂತರ ಸೊಲ್ಲಾಪುರದಲ್ಲೂ ಚುನಾವಣೆ ಪ್ರಚಾರದ ಭಾಷಣ ಮಾಡಿದ್ದರು. ಸೊಲ್ಲಾಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ ಕಲಬುರಗಿಯಲ್ಲಿ ಸೋತಿತು. ಆದರೆ ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರ ವೇಳೆ 2018ರ ಮೇ 3ರಂದು ಕಲಬುರಗಿಯಲ್ಲಿ ಚುನಾವಣೆ ಪ್ರಚಾರ ಮಾಡುವಾಗ ಪ್ರಧಾನಿ ಮೋದಿ, ದಲಿತರ ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು
ಮುಖ್ಯಮಂತ್ರಿಯನ್ನಾಗಿ ಮಾಡದೇ ಪಕ್ಷ ಅವರನ್ನು ಕೈ ಕೊಟ್ಟಿದೆ ಎಂದು ಅನುಕಂಪದ ಮಾತುಗಳನ್ನಾಡಿದ್ದರು. ಆದರೆ ಈ ಸಲ ಪ್ರಚಾರಕ್ಕೆ ಬಂದು ಏನು ಹೇಳ್ತಾರೆ ಎಂಬುದು ಕುತೂಹಲ ಮೂಡಿಸಿದೆ.
●ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.