ಶಿವಕಾಂತ ಮಹಾಜನ್ ಮನೆಗೆ ಬಿಜೆಪಿ ವರಿಷ್ಠರು: ಸೂಕ್ತ ಸ್ಥಾನಮಾನದ ಭರವಸೆ
Team Udayavani, Apr 16, 2023, 4:08 PM IST
ಕಲಬುರಗಿ: ಇಲ್ಲಿನ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ದಿಂದ ವಂಚಿತರಾಗಿರುವ ಮುಖಂಡ ಶಿವಕಾಂತ ಮಹಾಜನ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದನ್ನು ಅರಿತ ಪಕ್ಷದ ವರಿಷ್ಠರು ಮಹಾಜನ್ ಮನೆಗೆ ತೆರಳಿ ಸಂಧಾನ ನಡೆಸಿದರು.
ನಗರದ ಶರಣಬಸವೇಶ್ವರ ದೇವಾಲಯ ರಸ್ತೆಯಲ್ಲಿರುವ ಮಹಾಜನ್ ಮನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಲ್ಲಿ ಒಬ್ಬರಾಗಿರುವ ಬಿಜೆಪಿ ವರಿಷ್ಠರಾದ ಹಿರಿಯ ಸಂಸದ ನಿಷಿಕಾಂತ ದುಬೈ, ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ,ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹಾಗೂ ಇತರರು, ಕಲಬುರಗಿ ಉತ್ತರದಲ್ಲಿ ತಮಗೆ ಬಿಜೆಪಿ ಪಕ್ಷದ ಟಿಕೆಟ್ ದೊರಕಬೇಕಿತ್ತು. ಆದರೆ ಕೊನೆಘಳಿಗೆಯಲ್ಲಿ ಕೈ ತಪ್ಪಿದೆ. ಆದರೆ ಅನ್ಯಾಯ ಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಕಲ್ಪಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.
ತಾವು ಸ್ಪರ್ಧೆ ಮಾಡುವುದರಿಂದ ಮತಗಳು ವಿಭಜನೆಯಾಗುತ್ತವೆ.ಈ ಸಲ ಪಕ್ಷ ಗೆಲ್ಲುವ ಸ್ಪಷ್ಟ ಸೂಚನೆಗಳಿವೆ. ಆದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಿರಿ. ತ್ಯಾಗವನ್ನು ಪಕ್ಷ ಸದಾ ಗುರುತಿಸುತ್ತದೆಯಲ್ಲದೇ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ಎಂದಿನಂತೆ ಪಕ್ಷದ ಸಂಘಟನೆ ಹಾಗೂ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ವರಿಷ್ಠರು ಮಹಾಜನ್ ಅವರಲ್ಲಿ ಕೋರಿದರು.
ತದನಂತರ ಬಿಜೆಪಿ ಕೇಂದ್ರದ ವರಿಷ್ಠರು ಶಿವಕಾಂತ ಮಹಾಜನ್ ಅವರ ಮನೆಗೆ ಹೋಗಿ ಸೂಕ್ತ ಮಾತುಕತೆ ನಡೆಸಿ ದರಲ್ಲದೇ ಸೂಕ್ತ ಸ್ಥಾನಮಾನ ಕಲ್ಪಿಸುವುದು ತಮ್ಮ ಜವಾಬ್ದಾರಿ ಎಂದರಲ್ಲದೇ ಯಾವ ಅವಕಾಶ ಕಲ್ಪಿಸಲಾಗುವುದು ಎಂಬುದನ್ನು ಗೌಪ್ಯವಾಗಿ ಸ್ಥಾನಮಾನದ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಿವಕಾಂತ ಮಹಾಜನ್, ತಾವು ಚುನಾವಣೆಗೆ ತಯಾರಾದ ಬಗೆ ಹಾಗೂ ಪಕ್ಷದ ಸಂಘಟನೆ ಯಲ್ಲಿ ತೊಡಗಿಸಿಕೊಂಡಿರುವುದನ್ನು ಎಳೆ- ಎಳೆಯಾಗಿ ವಿವರಿಸಿದರಲ್ಲದೇ ಪಕ್ಷದ ಜಿಲ್ಲೆಯ ನಾಯಕರು ನಡೆದುಕೊಂಡ ಬಗೆಯನ್ನು ಪಟ್ಟಿಯೊಂದನ್ನು ಸಲ್ಲಿಸಿ ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ಪ್ರಮುಖರಾದ ಶರಣಬಸಪ್ಪ ಹೆಗ್ಗಣೆ, ಸೂರಜ್ ಸಿಂಗ್ ತಿವಾರಿ ಸೇರಿದಂತೆ ಮುಂತಾದವರಿದ್ದರು.
ಸಭೆಗೆ ಆಗಮಿಸಿದ ಮುಖಂಡರು; ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಪಕ್ಷೇತರ ಇಲ್ಲವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ನಿಟ್ಟಿನಲ್ಲಿ ಕಾರ್ಯಕರ್ತ ರೊಂದಿಗೆ ಚರ್ಚಿಸಲು ಶಿವಕಾಂತ ಮಹಾಜನ್ ಸಭೆ ಕರೆದಿದ್ದರು.
ಸಭೆ ಅರಿತ ಬಿಜೆಪಿ ವರಿಷ್ಠರು ಸಭೆಗೆ ಆಗಮಿಸಿ, ಯಾವುದೇ ಕಾರಣಕ್ಕೂ ಶಿವಕಾಂತ ಮಹಾಜನ್ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ . ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು.ಇದು ತಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ಸ್ಪಷ್ಟ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.