ಹಳೆ ಪಿಂಚಣಿಗಾಗಿಅ.3 ರಂದು ರಕ್ತದಾನ ಕ್ರಾಂತಿ
Team Udayavani, Oct 1, 2018, 11:16 AM IST
ಅಫಜಲಪುರ: ಎನ್‌ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ರದ್ದುಗೊಳಿಸಿ ನೂತನ ಪಿಂಚಣಿ ಪದ್ಧತಿ ಜಾರಿಗೊಳಿಸಿದ್ದರಿಂದ
ಭಾರಿ ಅನ್ಯಾಯವಾಗುತ್ತಿದೆ. ಹೀಗಾಗಿ ಹಳೆಯ ಪಿಂಚಣಿ ಮುಂದುವರಿಸುವಂತೆ ಒತ್ತಾಯಿಸಿ ಅ. 3ರಂದು ರಕ್ತದಾನ
ಮಾಡಿ ಸಂಬಂಧ ಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಎಂದು ಎನ್‌ಪಿಎಸ್ ನೌಕರರ ಸಂಘದ
ತಾಲೂಕು ಅದ್ಯಕ್ಷ ರವಿಕಾಂತ ಬಿರಾದಾರ ಹಾಗೂ ಕಾರ್ಯದರ್ಶಿ ಮಹೇಶ ಅಂಜುಟಗಿ ತಿಳಿಸಿದರು.
ಪಟ್ಟಣದ ಮಳೇಂದ್ರ ಮಠದಲ್ಲಿ ಅ.3ರಂದು ನಡೆಯುವ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲು ಆಹ್ವಾನ ನೀಡಿ ಮಾತನಾಡಿದ ಅವರು, ಹಳೆಯ ಪಿಂಚಣಿ ಯೋಜನೆ ನಮಗೆ ವರದಾನವಾಗಿತ್ತು. ನೂತನ ಪಿಂಚಣಿ ವ್ಯವಸ್ಥೆಯಿಂದ ನಮ್ಮ ಸಂಧ್ಯಾಕಾಲದ ಜೀವನಕ್ಕೆ ಮಾರಕವಾಗಿದೆ. ಹೀಗಾಗಿ ನೂತನ ಪಿಂಚಣಿ ವ್ಯವಸ್ಥೆ ಕೈಬಿಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟವರು ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.
ರಕ್ತದಾನ ಶಿಬಿರ ಯಶಸ್ವಿಗೆ ಎಲ್ಲ ಎನ್‌ಪಿಎಸ್ ನೌಕರರು ಬಂದು ಸಹಕರಿಸಬೇಕು. ಇದು ಕೇವಲ ರಕ್ತದಾನ ಶಿಬಿರವಲ್ಲ,
ನೌಕರರ ಬದುಕಿನ ಹೋರಾಟವಾಗಿದೆ ಎಂದರು. ಹೈದರ್ ಚೌಧರಿ, ವಿಜಯ, ಮಹಾಂತೇಶ ನಡುವಿನಮನಿ,
ಶಿವಾನಂದ ಸ್ವಾಮಿ, ಹನುಮೇಶ ಇಳಗೇರ, ಜಗದೀಶ ಭಜಂತ್ರಿ, ಸಿದ್ದಾರಾಮ ಸಂಗೋಳಗಿ, ಜಯಕುಮಾರ ಕೋಣಿನ್, ಸೈಬಣ್ಣ ಅಲ್ದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.