ಸಂವಿಧಾನ-ವಚನ ಎರಡೂ ಒಂದೇ
Team Udayavani, Jan 22, 2018, 10:48 AM IST
ಸೇಡಂ: 12ನೇ ಶತಮಾನದ ಶರಣರು ನೀಡಿ ಹೋದ ವಚನಗಳು ಮತ್ತು ಡಾ| ಬಿ.ಆರ್.ಅಂಬೇಡ್ಕರ್ ರಿಂದ ರಚಿತವಾದ ಸಂವಿಧಾನ ಎರಡೂ ಒಂದೇ ಸಂದೇಶ ನೀಡುತ್ತವೆ ಎಂದು ಮೈಸೂರು ಉರಿಲಿಂಗ ಪೆದ್ದಿ ಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ವಚನಗಳ ಪ್ರತಿಯೊಂದು ಸಾರ ಸಂವಿಧಾನದಲ್ಲೂ ಇದೆ. ಇಂದು ಸಮಾಜದಲ್ಲಿ ಬೇರೂರಿರುವ ಮೌಡ್ಯತೆ, ಭ್ರಷ್ಟಾಚಾರ, ಕಂದಾಚಾರ, ಅನ್ಯಾಯ ಸರಿಪಡಿಸಬೇಕಾದರೆ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳೇ ದಿವ್ಯೌಷಧ. ಅಂಬಿಗರ ಚೌಡಯ್ಯ ಭಾರತದ ದಾರ್ಶನಿಕ ಶರಣರು. ಭಾರತದಲ್ಲಿ ಕ್ರಾಂತಿಯ ಕಿಡಿ ಹಚ್ಚಿದವರು. ಆದರೆ ಇಂದಿನ ಜನ ಮಹಾತ್ಮರನ್ನು ಜಾತಿಯ ಜೈಲಿಗೆ ಸೇರಿಸುತ್ತಿದ್ದಾರೆ. ಜಾತಿಮುಕ್ತ ಸಮಾಜ ನಿರ್ಮಿಸುವ ಶರಣರ
ಕನಸನ್ನು ನುಚ್ಚು ನೂರು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಹದಾಸೆ ಹೊತ್ತು ಇಡೀ ದೇಶಕ್ಕೆ ಸಮಾಜವನ್ನು ಪರಿಚಯಿಸಿದ ಮಾಜಿ ಮುಖ್ಯ ಸಚೇತನ ದಿ. ವಿಠ್ಠಲ ಹೇರೂರ ಅವರ ಕನಸು ನನಸು ಮಾಡಬೇಕಾದರೆ ಒಗ್ಗಟ್ಟು ಪ್ರದರ್ಶಿಸಬೇಕು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇದ್ದ ಪ್ರಜಾಪ್ರಭುತ್ವ ಈಗ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಸೀಮಿತವಾಗುತ್ತಿರುವುದು ವಿಷಾದನೀಯ. ಈಗಿರುವ ಪ್ರಜಾಪ್ರಭುತ್ವ ನಕಲು ಪ್ರಜಾಪ್ರಭುತ್ವ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಶಿವಕುಮಾರ ಜುಲ್ಪಿ ರಚಿತ ವಿಶ್ವಮಾನವ ಅಂಬಿಗರ ಚೌಡಯ್ಯ ಪುಸ್ತಕ ಬಿಡುಗಡೆ ಮಾಡಲಾಯಿತು.
ಹಾಪಕಾಮ್ಸ್ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ್ ಮಾಲಿಪಾಟೀಲ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ, ಜಿಪಂ ಸದಸ್ಯ ದಾಮೋದರರೆಡ್ಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಕೋಲಿ ಸಮಾಜ ತಾಲೂಕು ಅಧ್ಯಕ್ಷ ಭೀಮರಾವ್ ಅಳ್ಳೊಳ್ಳಿ, ಮುಖಂಡರಾದ ಸಿದ್ದು ಬಾನಾರ್, ಮಲ್ಲಿಕಾರ್ಜುನ ಗುಡ್ಡದ, ಅರ್ಜುನ ಚನ್ನಕ್ಕಿ, ಸೋಮಶೇಖರ ಬಿಬ್ಬಳ್ಳಿ, ನಾಗಪ್ಪ ಕೊಳ್ಳಿ, ಸುದರ್ಶನರೆಡ್ಡಿ ಪಾಟೀಲ, ರುದ್ರು ಪಿಲ್ಲಿ, ಜಗನ್ನಾಥ ಪಾಟೀಲ ಇದ್ದರು.
ಕಾರ್ಯಾಧ್ಯಕ್ಷ ಶರಣಪ್ಪ ಎಳ್ಳಿ ವಚನ ಗಾಯನ ನಡೆಸಿಕೊಟ್ಟರು. ರವಿಕುಮಾರ ಕುದುರೇನ ನಿರೂಪಿಸಿದರು.
ಶೃತಿ ಭೀಮರಾಯ ಅಳ್ಳೊಳ್ಳಿ ಸ್ವಾಗತ ಗೀತೆ ಹಾಡಿದರು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.