ತೊಗರಿ ಖರೀದಿ ಸ್ಥಗಿತ: ಆತಂಕದಲ್ಲಿ ರೈತ
Team Udayavani, Feb 10, 2018, 11:21 AM IST
ಅಫಜಲಪುರ: ರೈತರು ಬೆಳೆದ ತೊಗರಿ ಖರೀದಿ ಪ್ರಕ್ರಿಯೆ ಹಠಾತ್ ಸ್ಥಗಿತಗೊಳಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಬಹುತೇಕ ಹಳ್ಳಿಗಳಲ್ಲಿ ಶೇ 80ರಷ್ಟು ರೈತರು ತೊಗರಿ ಬೆಳೆಯುತ್ತಾರೆ. ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿಸಲು ಮುಂದಾಯಿತು. ಆದರೆ ಸದ್ಯ ಖರೀದಿ ಕೇಂದ್ರಗಳನ್ನು ಮುಚ್ಚಿಸಿದೆ. ಶೇ. 10ರಷ್ಟು ರೈತರ ತೊಗರಿ ಖರೀದಿಯಾಗಿಲ್ಲ ಎಂದು ಅಂದಾಜಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 18 ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಂದ ಎಕರೆಗೆ ತಲಾ 5 ಕ್ವಿಂಟಲ್ ತೊಗರಿ ಖರೀದಿಸುವಂತೆ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಆದೇಶದಂತೆ ಖರೀದಿ ಮಾಡಿದ್ದೇವೆ ಎಂದು ಖರೀದಿ ಕೇಂದ್ರದವರು ಹೇಳುತ್ತಾರೆ. ಆದರೆ ತಾಲೂಕಿನಾದ್ಯಂತ ಶೇ. 10ರಷ್ಟು ತೊಗರಿಯೂ ಖರೀದಿಯಾಗಿಲ್ಲ. ಉಳಿದ 70ರಿಂದ 80ರಷ್ಟು ರೈತರು ತೊಗರಿ ಮಾರಾಟ ಮಾಡಿಲ್ಲ. ಈ ನಡುವೆ ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರಗಳ ಎದುರು ಚೀಲ ಇಟ್ಟುಕೊಂಡು ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
ಅತನೂರ ಖರೀದಿ ಕೇಂದ್ರ: ಅತನೂರ ಖರೀದಿ ಕೇಂದ್ರದಲ್ಲಿ ಒಟ್ಟು 1320 ರೈತರು ಆನ್ ಲೈನ್ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 250 ರೈತರ ಒಟ್ಟು 4500 ಕ್ವಿಂಟಲ್ ತೊಗರಿ ಖರೀದಿಯಾಗಿದೆ. ಆನ್‌ಲೈನ್ ನೋಂದಣಿ ಮಾಡಿಸದ ಇನ್ನೂ 1070 ರೈತರ ತೊಗರಿ ಖರೀದಿಯಾಗಿಲ್ಲ.
ಹಸರಗುಂಡಗಿ ಖರೀದಿ ಕೇಂದ್ರ: 550 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 260 ರೈತರಿಂದ 2250 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಭೈರಾಮಡಗಿ ಖರೀದಿ ಕೇಂದ್ರ: 1745 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 423 ರೈತರಿಂದ 3750 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ.
ಗೊಬ್ಬೂರ(ಬಿ) ಖರೀದಿ ಕೇಂದ್ರ: 878 ರೈತರು ನೋಂದಣಿ ಮಾಡಿಸಿದ್ದಾರೆ. 193 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ದೇಸಾಯಿ ಕಲ್ಲೂರ ಖರೀದಿ ಕೇಂದ್ರ: 750 ರೈತರು ನೋಂದಣಿ ಮಾಡಿಸಿದ್ದಾರೆ. 230 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಮಾಶಾಳ ಖರೀದಿ ಕೇಂದ್ರ: 1067 ರೈತರು ನೋಂದಣಿ ಮಾಡಿಸಿದ್ದಾರೆ. ಇಲ್ಲಿಯವರೆಗೆ 163 ರೈತರಿಂದ 2870 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಚಿಣಮಗೇರಾ ಖರೀದಿ ಕೇಂದ್ರ: 718 ರೈತರು ನೋಂದಣಿ ಮಾಡಿಸಿದ್ದಾರೆ. 269 ರೈತರಿಂದ 4700 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ರೇವೂರ(ಬಿ) ಖರೀದಿ ಕೇಂದ್ರ: 1825 ರೈತರು ನೋಂದಿಣಿ ಮಾಡಿಸಿದ್ದಾರೆ. 316 ರೈತರಿಂದ ಒಟ್ಟು 5500 ಕ್ವಿಂಟಲ್ ಗರಿ
ಖರೀದಿಸಲಾಗಿದೆ.
ಮಣೂರ ಖರೀದಿ ಕೇಂದ್ರ: 727 ರೈತರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 165 ರೈತರಿಂದ 2750 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಖರೀದಿ ಕೇಂದ್ರಗಳ ಲಭ್ಯ ಮಾಹಿತಿ ಪ್ರಕಾರ 12560 ರೈತರ ಆನ್‌ಲೈನ್ ನೋಂದಣಿಯಾಗಿದೆ. ಈ ಪೈಕಿ 2897 ರೈತರ ತೊಗರಿ ಖರೀದಿಸಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿಯಾದ ಇನ್ನೂ 9663 ರೈತರ ತೊಗರಿ ಖರೀದಿಯಾಗಿಲ್ಲ. ಸದ್ಯ ತೊಗರಿ ಖರೀದಿ ಸ್ಥಗಿತಗೊಳಿಸಿದ್ದರಿಂದ ತಾಲೂಕಿನ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ತೊಗರಿ ಖರೀದಿ ಕೇಂದ್ರ ಪುನಾರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತೊಗರಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.