ತಂಗಿ ಸಾವಿನ ಸೇಡು ತೀರಿಸಿಕೊಂಡ ಸೋದರ!
Team Udayavani, Nov 18, 2018, 6:00 AM IST
ಕಲಬುರಗಿ: ತನ್ನ ತಂಗಿಗಾದ ಅನ್ಯಾಯದ ಸೇಡು ತೀರಿಸಿಕೊಳ್ಳಲು ಸಹೋದರನೊಬ್ಬ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಘಟನೆ ಗುರುವಾರ ನಗರ ಹೊರವಲಯದ ರಾಮನಗರದಲ್ಲಿ ನಡೆದ ವಿಷಯ ತನಿಖೆಯಿಂದ ಬಹಿರಂಗವಾಗಿದೆ.
ರಾಮನಗರದಲ್ಲಿ ನಡೆದ ಗೃಹಿಣಿ ಶರ್ಮಿಳಾ ಸಂಜಯ ಕಾವಲೆ (27) ಕೊಲೆ ಪ್ರಕರಣವನ್ನು ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಶರ್ಮಿಳಾ ಕೊಲೆ ಪ್ರಕರಣ ಸಂಬಂಧ 26 ವರ್ಷದ ಶಿವಾಜಿ ನಗರದ ನಿವಾಸಿ ಕೃಷ್ಣ ಲಾಲಪ್ಪ ಗಾಜರೆ ಎಂಬಾತನನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಕೃಷ್ಣ ತನ್ನ ಸಹೋದರಿಯನ್ನು ವರಿಸಬೇಕಿದ್ದ ಸಹೋದರ ಮಾವ ಸಂಜಯನನ್ನು ಶರ್ಮಿಳಾ ಮದುವೆಯಾಗಿದ್ದರಿಂದ ಕೃಷ್ಣನ ತಂಗಿ ಪೂಜಾ ಮಾನಸಿಕವಾಗಿ ನೊಂದು ಕಾಯಿಲೆಯಿಂದ ನರಳಿ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಶರ್ಮಿಳಾ ಮೇಲೆ ದ್ವೇಷ ಬೆಳೆಸಿಕೊಂಡು ಅವಳ ಕೊಲೆಗೆ ಸಂಚು ಹೂಡಿದ್ದ ಕೃಷ್ಣ ಗುರುವಾರ ಶರ್ಮಿಳಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಆರೋಪಿ ಬಾಯಿಟ್ಟಿದ್ದಾನೆ ಎಂದು ಎಸ್‌ಪಿ ಎನ್. ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಂಗಿ ಸಾವಿನ ಸೇಡು:
ಕೊಲೆಯಾದ ಶರ್ಮಿಳಾ ಪತಿ ಸಂಜಯ ಕುಮಾರ ಮತ್ತು ಆರೋಪಿ ಕೃಷ್ಣ ಸೋದರ ಮಾವ-ಅಳಿಯ ಸಂಬಂಧಿಗಳಾಗಿದ್ದಾರೆ. ಸಂಜಯ ಆರೋಪಿ ಕೃಷ್ಣನಿಗೆ ಅಕ್ಕನ ಮಗ. ಅಂತೆಯೇ ಕೃಷ್ಣನ ತಂಗಿ ಪೂಜಾ ಎಂಬಾಕೆಯನ್ನು ಸಂಜಯನಿಗೆ ಕೊಟ್ಟು ವಿವಾಹ ಮಾಡಬೇಕೆಂದು ಇಬ್ಬರ ಮನೆಯವರು ಮಾತುಕತೆ ನಡೆಸುತ್ತಿದ್ದರು. ಆದರೆ, ಪೂಜಾಳನ್ನು ಮದುವೆಯಾಗಲು ಸಂಜಯ ನಿರಾಕರಿಸಿ, ಆಳಂದ ತಾಲೂಕಿನ ಸರಸಂಬಾ ಗ್ರಾಮದ ನಿವಾಸಿಯಾಗಿದ್ದ ಶರ್ಮಿಳಾಳನ್ನು 3 ವರ್ಷಗಳ ಹಿಂದೆ ಮದುವೆಯಾಗಿದ್ದ.
ಇದೇ ವೇಳೆ ತನ್ನ ಮದುವೆ ನಿಂತಿದ್ದರಿಂದ ಪೂಜಾ ಅನಾರೋಗ್ಯಕ್ಕೆ ತುತ್ತಾಗಿ, ಮೂಗು ಮತ್ತು ಹಲ್ಲಿನಲ್ಲಿ ರಕ್ತ ಸ್ರಾವವಾಗುತ್ತಿತ್ತು. ಹೀಗಾಗಿ ವರ್ಷದ ಹಿಂದೆ ಪೂಜಾಳನ್ನು ಹೆಚ್ಚಿನ ಚಿಕಿತ್ಸೆಗೆಂದು ಸೊಲ್ಲಾಪುರದ ಯಶೋಧರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರ್ಮಿಳಾ ಪೂಜಾಳನ್ನು ನೋಡಲೆಂದು ಯಶೋಧರ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಇದಾದ ಅರ್ಧ ಗಂಟೆಯಲ್ಲಿ ಪೂಜಾ ಅಸುನೀಗಿದ್ದು, ಶರ್ಮಿಳಾ ಭಾನಾಮತಿ ಮಾಡಿಸಿದ್ದರಿಂದ ಪೂಜಾ ಮೃತಪಟ್ಟಿರಬೇಕೆಂಬ ಅನುಮಾನ ಕೃಷ್ಣನಲ್ಲಿ ಹುಟ್ಟಿಕೊಂಡಿತ್ತು.
ಕೊಲೆ ಮಾಡಿ ತಂಗಿಗೆ ಶ್ರದ್ಧಾಂಜಲಿ:
ಸಹೋದರಿ ಪೂಜಾ ಮೃತಪಟ್ಟ ನಂತರ ಶರ್ಮಿಳಾಳ ಮೇಲೆ ಕೃಷ್ಣನಿಗೆ ದ್ವೇಷ ಕಾಡುತ್ತಿತ್ತು. ನ.15ರಂದು ಶರ್ಮಿಳಾ ಒಬ್ಬಳೇ ಮನೆಯಲ್ಲಿದ್ದಾಗ ಕೃಷ್ಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರ ಹಂತಕ ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ಮನೆಯಲ್ಲಿನ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ, ಶರ್ಮಿಳಾಳ ಮಾಂಗ್ಯಲ ಸರ, ಮತ್ತಿತರ ಆಭರಣ ಮತ್ತು ಆಕೆಯ ಮೊಬೈಲ್, ಹಣ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಹಂತಕ ಕೃಷ್ಣ ತನ್ನ ಮನೆಗೆ ಹೋಗಿ ಮೃತ ತಂಗಿ ಪೂಜಾಳ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.