ಪ್ರವಾಸಿ ತಾಣವಾಗದ ಬೌದ್ಧ ನೆಲೆ
Team Udayavani, Sep 24, 2018, 10:37 AM IST
ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿರುವ ಬುದ್ಧನ ಶಿಲ್ಪಗಳ ರಕ್ಷಣೆಗೆ ಸರ್ಕಾರ ಭದ್ರತೆ ಒದಗಿಸಿದೆ. ಆದರೆ ನೆಲದ ಮೇಲೆ ಬಿದ್ದಿರುವ ಸಾವಿರಾರು ಬೌದ್ಧ ಶಿಲ್ಪಗಳು ಕಳೆದ 20 ವರ್ಷಗಳಿಂದ ಬಿಸಿಲು, ಮಳೆ, ಗಾಳಿ, ಧೂಳಿಗೆ ಮೈಯೊಡ್ಡಿ ಹಾಳಾಗುತ್ತಿವೆ.
ಸನ್ನತಿ ಗ್ರಾಮ ಹೊರ ವಲಯದ ಕನಗನಹಳ್ಳಿ ಪ್ರದೇಶದ ಭೀಮಾ ನದಿ ದಂಡೆಯ ಜಮೀನೊಂದರಲ್ಲಿ ಬುದ್ಧನ ಮೂರ್ತಿಗಳೊಂದಿಗೆ ದೊರೆತಿರುವ ಬೌದ್ಧವಿಹಾರ ಕ್ರಿ.ಪೂ. ಮೂರನೇ ಶತಮಾನದ ಕಥೆ ಹೇಳುತ್ತಿದೆ.
ಭಾರತದಲ್ಲಿ ಬೌದ್ಧ ಧರ್ಮ ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲಘಟ್ಟದ್ದು ಎನ್ನಲಾಗಿರುವ ಈ ಬೌದ್ಧ ಕುರುಹುಗಳು, ಸೂಕ್ತ ರಕ್ಷಣೆಯಿಲ್ಲದೆ ಸೊರಗುತ್ತಿವೆ.
ದೇಶದ ವಿವಿಧ ರಾಜ್ಯಗಳಿಂದ ಬೌದ್ಧ ಭಿಕ್ಷುಗಳು, ಇತಿಹಾಸ ಸಂಶೋಧಕರು, ಸಾಹಿತಿಗಳು ಹಾಗೂ ರಾಜಕಾರಣಿಗಳು ಬಂದು ಭೇಟಿ ನೀಡುತ್ತಿದ್ದಾರೆ. ಸರಕಾರ ಮಾತ್ರ ಈ ಸ್ಥಳವನ್ನು ಪ್ರವಾಸಿತಾಣವಾಗಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.
ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿರುವ ಸನ್ನತಿಯ ಈ ಬೌದ್ಧ ನೆಲದ ವೀಕ್ಷಣೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಹತ್ತಾರು ಎಕರೆ ಜಾಗದಲ್ಲಿ ಹರಡಿಕೊಂಡಿರುವ ಬುದ್ಧವಿಹಾರ, ಬೌದ್ಧ ಧಮ್ಮದ ಶಿಲ್ಪಗಳ ಸ್ಥಳಕ್ಕೆ ಹೋಗಲು ಪ್ರವಾಸಿಗರು ತಮ್ಮ ವಿವರ ನೀಡಿ ಮುಂದೆ ಹೋಗಬೇಕಾಗುತ್ತದೆ.
ಪ್ರವೇಶಕ್ಕೆ ಶುಲ್ಕವಿಲ್ಲ, ಛಾಯಾಚಿತ್ರಕ್ಕೆ ಅವಕಾಶವಿಲ್ಲ. ಕ್ಯಾಮರಾಗಳನ್ನು ಹೊರಗೆ ತೆಗೆಯುವಂತಿಲ್ಲ. ಎಲ್ಲೆಡೆ ಸಿಸಿ ಕ್ಯಾಮರಾಗಳಿವೆ. ಐದಾರು ಜನ ಸೆಕ್ಯೂರಿಟಿಗಳು ಪ್ರವಾಸಿಗರ ಅಕ್ಕಪಕ್ಕದಲ್ಲಿರುತ್ತಾರೆ.
ಇಲ್ಲಿನ ಮೂರ್ತಿಗಳ ಕುರಿತು ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಿ ವ್ಯವಸ್ಥೆಯಿಲ್ಲ. ಸೆಕ್ಯೂರಿಟಿಗಳು ಮತ್ತು ಈ
ಸ್ಥಳದ ಮೇಲ್ವಿಚಾರಕರು ಹೇಳುವ ಅರೆಬರೆ ಕಥೆಯನ್ನೆ ಕೇಳಿ ಅತೃಪ್ತಿಯಿಂದ ಮರಳುತ್ತಿದ್ದಾರೆ.
ಉತನನದಲ್ಲಿ ದೊರೆತ ಇಲ್ಲಿನ ಸಾವಿರಾರು ಶಿಲ್ಪಗಳನ್ನು ಪ್ರವಾಸಿಗರ ವೀಕ್ಷಣೆಗಾಗಿ ಸಂಗ್ರಹಿಸಿಡಲು ವಸ್ತು ಸಂಗ್ರಾಹಲಯ ಕಟ್ಟಡ ನಿರ್ಮಿಸಿ ಐದು ವರ್ಷ ಕಳೆದರೂ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರವಾಗಿಲ್ಲ. ಪರಿಣಾಮ
ಮಹತ್ವದ ಬುದ್ಧನ ಮೂರ್ತಿಗಳು, ಕಲ್ಲಿನ ಬೇಲಿ, ಶಾಸನ, ವಿಹಾರ ಗೋಪುರ ನೆಲದಲ್ಲಿಯೇ ಬಿದ್ದು ಹಾಳಾಗುತ್ತಿದೆ. ಸರಕಾರದಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟಿ ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು,
ಐತಿಹಾಸಿಕ ಬೌದ್ಧ ನೆಲೆ ಅಭಿವೃದ್ಧಿ ಮಾತ್ರ ನೆಲಕಚ್ಚಿದೆ.
ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.